ವಿಜಯಪುರ ಜಿ. ಪಂ. ನೂತನ ಸಿಇಒ ಆಗಿ ರಾಹುಲ್ ಶಿಂಧೆ ಅಧಿಕಾರ ಸ್ವೀಕಾರ

ವಿಜಯಪುರ : ವಿಜಯಪುರ ಜಿಲ್ಲಾ ಪಂಚಾಯಿತಿಯ ನೂತನ ಸಿಇಒ ಆಗಿ ರಾಹುಲ್ ಶಿಂಧೆ ಅಧಿಕಾರಿ ಸ್ವೀಕರಿಸಿದ್ದಾರೆ.

ಬೀದರ ಮೂಲದ ರಾಹುಲ ಶಿಂಧೆ ಐಐಟಿ ಬಾಂಬೆಯಿಂದ ಬಿ. ಟೆಕ್. ಪದವಿ ಪಡೆದಿದ್ದಾರೆ. 2018ರ ಐಎಎಸ್ ಬ್ಯಾಚ್‍ನ ರಾಹುಲ್ ಶಿಂಧೆ ಅವರು ಮಂಗಳೂರಿನಲ್ಲಿ ಪ್ರೊಬೇಷನರಿ ಅವಧಿ ಪೂರೈಸಿದ್ದಾರೆ. ಬಳಿಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದಾರೆ.

ವಿಜಯಪುರ ಜಿ. ಪಂ. ಸಿ. ಇಓ ಆಗುವುದಕ್ಕಿಂತಲೂ ಮುಂಚೆ ನಂತರ ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಸರಕಾರ ಅವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯಿತಿಯ ನೂತನ ಸಿಇಒ ಆಗಿ ಅಧಿಕಾರ ಅವರು ವಹಿಸಿಕೊಂಡಿದ್ದಾರೆ.

ನಿರ್ಗಮಿತ ಸಿಇಒ ಗೋವಿಂದ ರಡ್ಡಿ ಅವರನ್ನು ಬೀದರ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ.

Leave a Reply

ಹೊಸ ಪೋಸ್ಟ್‌