ಸೌಹಾರ್ದತೆ ಹಾಗೂ ತಾಳ್ಮೆಯಿಂದ ವರ್ತಿಸುವಂತೆ ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ

ನವದೆಹಲಿ: ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸೌಹಾರ್ದತೆ ಹಾಗೂ ತಾಳ್ಮೆಯಿಂದ ವರ್ತಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಜ್ಯದ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿ, ನಾನಾ ರಾಜ್ಯಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಪುಗಳು ಬಂದಿವೆ. ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ. ಸಂವಿಧಾನ ಮತ್ತು ಕಾನೂನಿನನ್ವಯ […]

ಇಂದಿನ ದಿನಗಳಲ್ಲಿ ಆತ್ಮರಕ್ಷಣೆ ಕಲೆಯು ಹೆಣ್ಣು ಮಕ್ಕಳಿಗೆ ಬಹಳ ಅತ್ಯವಶ್ಯಕ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಹೆಣ್ಣು ಮಕ್ಕಳಿಗೆ ಇಂದಿನ ದಿನಗಳಲ್ಲಿ ಆತ್ಮರಕ್ಷಣೆ ಕಲೆ ಬಹಳ ಅವಶ್ಯವಾಗಿದ್ದು, ಇದರಿಂದ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು. ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಂಯುಕ್ತಾಶ್ರಯದಲ್ಲಿ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ […]

ಮೂರು ದಿನಗಳ ಕಾಲ ಹೈಸ್ಕೂಲು-ಕಾಲೇಜುಗಳಿಗೆ ರಜೆ ಘೋಷಿಸಿದ ಸಿಎಂ- ಯಾಕೆ ಗೊತ್ತಾ?

ನವದೆಹಲಿ: ಮೂರು ದಿನಗಳ‌ ಕಾಲ ಹೈಸ್ಕೂಲು ಮತ್ತು ಕಾಲೇಜುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಜೆ ಘೋಷಿಸಿದ್ದಾರೆ. ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಆದೇಶ ಹೊರಡಿಸಿದ್ದು, ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ‌. ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ, ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನಾಡಿನ ಸಮಸ್ತ ಜನತೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಅವಧಿಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಆದೇಶಿಸಲಾಗಿದ್ದು, ಸಂಬಂಧಿಸಿದ ಎಲ್ಲರೂ ಸಹಕರಿಸಲು ಕೋರುತ್ತೇನೆ. — Basavaraj […]

ಕಾಂಗ್ರೆಸ್ ತುಕಡೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲುಗಳಂಥ ವಿವಾಧ ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಿಸುತ್ತಿದೆ- ಶಾಸಕ ಯತ್ನಾಳ ಆರೋಪ

ವಿಜಯಪುರ: ದೇಶದಲ್ಲಿ ಕಾಂಗ್ರೆಸ್ ಟುಕ್ಟೆ ಗ್ಯಾಂಗ್ ಗಳ ಮೂಲಕ ಹಿಜಾಬ್, ಕೇಸರಿ ಶಾಲ್ ನಂಥ ವಿವಾದಗಳನ್ನು ಸೃಷ್ಠಿಸಿ ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳ ಹಿಂದೆ ಕಾಂಗ್ರೆಸ್ಸಿದೆ.  ಈ ಮೂಲಕ ಕಾಂಗ್ರೆಸ್ಸಿನ ತುಕಡೆ ತುಕಡೆ ಗ್ಯಾಂಗ್ ಗಳು ದೇಶದಲ್ಲಿ ಅಸ್ಥಿರತೆ ತರಲು ಪ್ರಯತ್ನಸುತ್ತಿವೆ ಎಂದು ಆರೋಪಿಸಿದರು. ದೇಶದಲ್ಲಿ […]

ಸೇವಾ ನಿವೃತ್ತಿ ಹೊಂದಿದ ಮಲ್ಲಿಕಾರ್ಜುನ ಹೊಂಬಳ ಅವರಿಗೆ ಸ್ನೇಹಿತರಿಂದ ಆತ್ಮೀಯ ಸನ್ಮಾನ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 30 ವರ್ಷಗಳ ಕಾಲ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಿಕಾರ್ಜುನ ಹೊಂಬಳ ಅವರಿಗೆ ಸ್ನೇಹಿತರಿಂದ ಆತ್ಮೀಯ ಸನ್ಮಾನ ಸಮಾರಂಭ ನಡೆಯಿತು.   ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡ ನಾನಾ ಕ್ಷೇತ್ರಗಳ ಗಣ್ಯರು, ಮಲ್ಲಿಕಾರ್ಜುನ ಹೊಂಬಳ ಅವರ ವ್ಯಕ್ತಿತ್ವನ್ನು ಮುಕ್ತಕಂಠದಿಂದ ಕೊಂಡಾಡಿದರು.  ಡಾ. ಧರಿ, ವಿಜುಗೌಡ ಪಾಟೀಲ, ರಾಜಶೇಖರ ಗಚ್ಚಿನಮಠ, ಪ್ರಭುಗೌಡ ಬಿರಾದಾರ ಸೇರಿದಂತೆ ನಾನಾ ಮುಖಂಡರು ಮಾತನಾಡಿ ಮಲ್ಲಿಕಾರ್ಜುನ ಹೊಂಬಳ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. […]

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಅನುಮೋದನೆ ನೀಡಲು ರಕ್ಷಣಾ ಸಚಿವ ರಾಜನಾಥಸಿಂಗ್ ಗೆ ಸಿಎಂ ಮನವಿ

ನವದೆಹಲಿ: ಎರಡು ದಿನಗಳ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ನಾನಾ ವಿಷಯಗಳ ಕುರಿತು ಚರ್ಚಿಸಿದರು. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಸಂಗೊಳ್ಳಿಯಲ್ಲಿ ರೂ. 189 ಕೋ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮುಕ್ತಾಯದ ಹಂತದಲ್ಲಿದ್ದು ಈ ಶಾಲೆಯನ್ನು ಸೈನಿಕ ಸ್ಕೂಲ್ ಸೊಸೈಟಿಗೆ ಹಸ್ತಾಂತರಿಸಲು ಅನುವು ಮಾಡಿ ಕೊಡುವಂತೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.   ಸೈನಿಕ್ ಸ್ಕೂಲ್ […]

ಕೇಂದ್ರದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಸಂಸದರೊಂದಿಗೆ ಚರ್ಚೆ: ಮುಖ್ಯಮಂತ್ರಿ ಬೊಮ್ಮಾಯಿ

ನವದೆಹಲಿ: ನವದೆಹಲಿಯಲ್ಲಿ ಸಂಸದರ ಜೊತೆ ನಡೆದ ಸಭೆಯಲ್ಲಿ ಕೇಂದ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ನೀರಾವರಿ , ರೈಲ್ವೆ, ನಗರಾಭಿವೃದ್ಧಿ, ಬಂದರು, ರಸ್ತೆ  ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆಯಾಗಿದೆ.  ಕೇಂದ್ರದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆನ್ನುವ ವಿಚಾರಗಳ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆಸಲಾದ ಸಂಸದರ ಸಭೆಯ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂಸದರ ಸಭೆಯಲ್ಲಿ […]

ಪುರಾತನ ನೀರು ಸರಬರಾಜು ಸುರಂಗ ಸಂಪರ್ಕಿಸುವ ಕಿಂಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಜಯಪುರ ಡಿಸಿ

ವಿಜಯಪುರ: ವಿಜಯಪುರ ನಗರದಲ್ಲಿರುವ ಪುರಾತನ ನೀರು ಸರಬರಾಜು ಯೋಜನೆ ಸುರಂಗಗಳಿಗೆ ಸಂಬಂಧಿಸಿದಂತೆ ಕಿಂಡಿಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಐಬಿ(ನೂತನ ಪ್ರವಾಸಿ ಮಂದಿರ) ಬಳಿ ತೆರಳಿ ಪರಿಶೀಲನೆ ನಡೆಸಿದರು.  ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಸಮಾಜ ಸೇವಕ ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ, ಮೆಹರಿಜ್ ಖತೀಬ್ ಹಾಗೂ ಅನಿಲಕುಮಾರ ಬಣಜಿಗೇರ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು ಉಪಸ್ಥಿತರಿದ್ದರು.