ಆದರ್ಶ ನಗರ ಪೊಲೀಸರ ಕಾರ್ಯಾಚರಣೆ- ಸರಗಳ್ಳನ ಬಂಧನ- ರೂ. 4.25 ಲಕ್ಷ ಮೌಲ್ಯದ ಸರಗಳ ವಶ

ವಿಜಯಪುರ: ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇತ್ತೀಚೆಗೆ ವಿಜಯಪುರ ನಗರದ ಜನತೆಗೆ ತಲೆನೋವಾಗಿದ್ದ ಸರಗಳ್ಳತನ ಪ್ರಕರಣ ಭೇದಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಜಯಪುರ ಎಸ್ಪಿ ಎಚ್. ಎಸ್. ಆನಂದ ಕುಮಾರ, ವಿಜಯಪುರ ನಗರದಲ್ಲಿ ಇತ್ತಿಚಿಗೆ ನಡೆದ ಸರಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಎಎಸ್ಪಿ ಡಾ. ರಾಮ ಲಕ್ಷ್ಣಣ ಅರಸಿದ್ಧಿ ಅವರ ಉಸ್ತುವಾರಿಯಲ್ಲಿ ವಿಜಯಪುರ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಗೋಳಗುಮ್ಮಟ ಸಿಪಿಐ ರಮೇಶ ಅವಜಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ಈ ತಂಡ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸಾಂಗಲಿ, ಕೋಲ್ಹಾಪುರ, ಸೋಲಾಪುರ ಹಾಗೂ ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿಯ ಆರೋಪಿತರ ತಪಾಸಣೆಯಲ್ಲ್ಲಿದ್ದರು. ಆಗ, ವಿಜಯಪುರ ನಗರದ ಸಂಸ್ಕೃತಿ ಕಾಲೋನಿಯಲ್ಲಿ ವಿಜಯಪುರ ನಗರದ ಗುನ್ನಾಪುರ ರಸ್ತೆಯಲ್ಲಿರುವ ಗಾಂಧಿನಗರ ಮೂಲದ ಮತ್ತು ಸಧ್ಯಕ್ಕೆ ಬಸವ ನಗರದಲ್ಲಿ ವಾಸಿಸುತ್ತಿರುವ ದಾವಲಮಲಿಕ ಉರ್ಫ ದೌಲು ಭಾಷಾಸಾಬ ಚಪ್ಪರಬಂದ(23) ಆರೋಪಿಯನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಣೆಗೊಳಪಡಿಸಿದಾಗ, ಆರೋಪಿಯು ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ, ಆತನ ಬಳಿಯಿದ್ದ ಒಟ್ಟು ರೂ. 4.25 ಲಕ್ಷ ಮೌಲ್ಯದ ಚಿನ್ನದ ಬಳೆಗಳು, ಚೈನ್, ಮಾಂಗಲ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಎಪಿಎಂಸಿ ಪಿ ಎಸ್ ಐ ಸೋಮೇಶ ಗೆಜ್ಜಿ, ಆದರ್ಶ ನಗರ ಪಿ ಎಸ್ ಐ ಎಸ್. ಸಿ. ಗುರುಬೇಟ್ಟಿ, ಆದರ್ಶ ನಗರ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಎ ಎಸ್ ಐ ಗಳಾದ ಎಸ್. ಎಸ್. ಮಾಳೆಗಾಂವ, ಪಿ. ಆರ್. ಹಿಪ್ಪರಗಿ, ಸಿಬ್ಬಂದಿಯಾದ ವೈ. ಪಿ. ಕಬಾಡೆ, ಎಸ್. ಪಿ. ಲೋಗಾಂವಿ, ಎಸ್. ಜಿ. ಗಾಯನ್ನವರ, ಎಸ್. ಎ. ಬನಪಟ್ಟಿ, ಮಹೇಶ ಸಾಲಿಕೇರಿ, ಜೆ. ಎಸ್. ವನಜಕರ, ಬಸವರಾಜ ರೋಣಿಹಾಳ, ಆನಂದ ಕಂಬಾರ, ಎಸ್. ಪಿ. ಕಾಖಂಡಕಿ, ತಾಂತ್ರಿಕ ಸಿಬ್ಬಂದಿಯಾದ ಗುಂಡು ಗಿರಣಿವಡ್ಡರ, ಸುನೀಲ ಗೌಳಿ, ನಿಂಗಪ್ಪ ವಠಾರ ಹಾಗೂ ಸಿಬ್ಬಂದಿ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌