ನೀಟ್ ಪಾಸಾದರೂ ಎಡ್ಮಿಷನ್ ಮಾಡಲಾಗದೇ ಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಬ್ಬರಿಗೆ ಎಂಬಿಬಿಎಸ್ ಕೋರ್ಸ್ ಶುಲ್ಕ ಭರಿಸಿ ನೆರವಾದ ಆಧುನಿಕ ಭಗೀರಥ

ವಿಜಯಪುರ: ಬಸವ ನಾಡಿನಲ್ಲಿ ಜಲಕ್ರಾಂತಿ ಮಾಡಿ ಅನ್ನದಾತರಿಂದ ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಮಾಜಿ ಸಚಿವ ಎಂ. ಬಿ. ಪಾಟೀಲ ಈಗ ಮತ್ತೋಂದು ಹೃದಯಸ್ಪರ್ಶಿ ಕಲೆಸ ಮಾಡುವ ಮೂಲಕ ಬಡಜನರ ಮನ ಗೆದ್ದಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದರೂ ಕಡುಬಡವರಾದ ಕಾರಣ ಪ್ರವೇಶ ಪಡೆಯಲು ಶುಲ್ಕ ಭರಿಸಲು ಸಾಧ್ಯವಾಗದೇ ಪರದಾಡುತ್ತಿದ್ದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ‌ ಸಚಿವ ಎಂ. ಬಿ. ಫಾಟೀಲ ನೆರವಾಗಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಸತೀಶ ರಾಜಳ್ಳಿ ನೀಟ್ ನಲ್ಲಿ ರಾಜ್ಯಕ್ಕೆ 345 ರ‌್ಯಾಂಕ್ ಮತ್ತು ಅರುಣ ದೇವಶೆಟ್ಟಿ ರಾಜ್ಯಕ್ಕೆ 3508ನೇ ರ‌್ಯಾಂಕ್ ಪಡೆದಿದ್ದಾರೆ.  ಸತೀಶ ರಾಜಳ್ಳಿ ತಂದೆ ಶಿವನಗೌಡ ರಾಜಳ್ಳಿ ಕಟ್ಟಿಗೆ ಅಡ್ಡೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅರುಣ ದೇವಶೆಟ್ಟಿ ಅವರ ತಂದೆ ನಿಧನರಾಗಿದ್ದು, ತಾಯಿ ಸುರೇಖಾ ದೇವಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಇಬ್ಬರೂ ವಿದ್ಯಾರ್ಥಿಗಳ ಸಂಕಷ್ಟ ಗಮನಕ್ಕೆ ಬಂದ ತಕ್ಷಣ ಸಧ್ಯಕ್ಕೆ ಗೋವಾ ಚುನಾವಣೆ ಪ್ರಚಾರದಲ್ಲಿರುವ ಎಂ. ಬಿ. ಪಾಟೀಲ ಇಂದು ಅವರನ್ನು ಬಿ ಎಲ್ ಡಿ ಇ ಸಂಸ್ಥೆಯ ಕಚೇರಿಗೆ ಬಂದು ಮೆಡಿಕಲ್ ಕಾಲೇಜ ಪ್ರವೇಶ ಮತ್ತು ಕೋರ್ಸ್ ಮುಗಿಸಲು ಅಗತ್ಯವಾಗಿರುವ ಹಣವನ್ನು ಪಡೆಯಲು ಹೇಳಿದ್ದರು.  ಅದರಂತೆ ಇಬ್ಬರೂ ವಿದ್ಯಾರ್ಥಿಗಳು ವಿಜಯಪುರಕ್ಕೆ ಬಂದಾಗ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಆಯ್ಜೆಯಾಗಿರುವ ವಿದ್ಯಾರ್ಥಿ ಸತೀಶ ರಾಜಳ್ಳಿ ಅವರಿಗೆ ಎಂಬಿಬಿಎಸ್ ಪ್ರಥಮ ವರ್ಷದ ಶುಲ್ಕವಾದ ರೂ. 1.25 ಲಕ್ಷದ ಚೆಕ್ ನೀಡಿದರು.  ಇದೇ ವೇಳೆ ಮತ್ತೋರ್ವ ವಿದ್ಯಾರ್ಥಿ ಅರುಣ ದೇವಶೆಟ್ಟಿ ಅವರಿಗೆ ಮೊದಲ ವರ್ಷದ ಪ್ರವೇಶ ಶುಲ್ಕವಾದ ರೂ. 1.41 ಲಕ್ಷದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲಗೌಡ ಪಾಟೀಲ, ಇಬ್ಬರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಓದಲು ಆರ್ಥಿಕ ತೊಂದರೆ ಇದೆ ಎಂಬ ಮಾಹಿತಿ ತಿಳಿದ ತಕ್ಷಣ ನನ್ನ ಸಹೋದರ ಎಂ. ಬಿ. ಪಾಟೀಲ ಅವರು ಗೋವಾದಿಙದಲೇ ನನಗೆ ಕರೆ ಮಾಡಿ ಈ ವಿದ್ಯಾರ್ಥಿಗಳಿಗೆ ನೆರವಾಗಲು ಸೂಚನೆ ನೀಡಿದರು.  ಈ ಹಿನ್ನೆಲೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ವತಿಯಿಂದ ಇಬ್ಬರೂ ವಿದ್ಯಾರ್ಥಿಗಳ ಐದಯ ವರ್ಷದ ಕಾಲೇಜು ಮತ್ತು ಹಾಸ್ಟೇಲು ಶುಲ್ಕವನ್ನು ನೀಡಲು ನಿರ್ಧರಿಸಿದ್ದೇವೆ.  ಅದರಂತೆ ಇಂದು ಮೊದಲ ವರ್ವದ ಶುಲ್ಕದ ಚೆಕ್ ನೀಡಿದ್ದೇವೆ.  ಈ ಹಿಂದೆಯೂ ನಮ್ಮ ಸಹೋದರ ಎಂ. ಬಿ. ಪಾಟೀಲ ಮತ್ತು ಬಿ ಎಲ್ ಡಿ ಇ ಸಂಸ್ಥೆಯಿಂದ ಅನೇಕ ಕಡು ಬಡವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗಿದ್ದೇವೆ.  ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡಿದ್ದೇವೆ.  ಸರಕಾರಿ ಶಾಲೆಗಳಲ್ಲಿ ಸ್ಮಾರ್ಟಕ್ಲಾಸ್ ಸೌಲಭ್ಯ ಒದಗಿಸಿದ್ದೇವೆ.  ಹಲವರಿಗೆ ಲ್ಯಾಪಟಾಪ್ ನೀಡಿದ್ದೇವೆ.  ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ಸತೀಶ್ ರಾಜಳ್ಳಿ, ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡಲು ನನಗೆ ಕಷ್ಟವಾಗಿತ್ತು. ಕಡು ಬಡವ ಕುಟುಂಬದಕ್ಕೆ ಸೇರಿದ ಕಾರಣ ನೀಟ್ ನಲ್ಲಿ ಸೀಟು ಸಿಕ್ಕರೂ ಆರ್ಥಿಕ ಸಮಸ್ಯೆಯಿಂದ ಆತಂಕದಲ್ಲಿದ್ದವು.  ಇಂಥ ಸಂಕಷ್ಟದ ಸಮಯದಲ್ಲಿ ಎಂ. ಬಿ.  ಪಾಟೀಲ ಸಾಹೇಬರು ನಮಗೆ ಕರೆಮಾಡಿ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.  ಅಲ್ಲದೇ, ಇಂದು ವಿಜಯಪುರಕ್ಕೆ ನಮ್ಮನ್ನು ಕರೆಯಿಸಿ ಸುನೀಲಗೌಡ ಪಾಟೀಲ ಸರ್ ಮೂಲಕ ಮೊದಲ ವರ್ಷದ ಶುಲ್ಕವಾದ ರೂ. 1.25 ಲಕ್ಷ ಚೆಕ್ ನೀಡಿದ್ದಾರೆ.  ಅವರಿಗೆ ನಾವು ಚಿರಋಣಿಯಾಗಿದ್ದೇನೆ. ‌ಎಂ. ಬಿ. ಪಾಟೀಲ್ ಸರ್ ನನ್ನಂಥ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.  ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸತೀಶ ರಾಜಳ್ಳಿ ತಂದೆ ಶಿವನಗೌಡ ರಾಜಳ್ಳಿ ಮಾತನಾಡಿ, ನಮ್ಮ ಮಗನಿಗೆ ಮೆಡಿಕಲ್ ಸೀಟ್ ಸಿಕ್ಕಿತ್ತು.  ಆದರೆ ಅದಕ್ಕೆ ಬೇಕಾದ ಹಣ ಹೊಂದಿಸಲು ಕಷ್ಟವಾಗಿತ್ತು.  ಈ ವಿಷಯ ಗಮನಕ್ಕೆ ಬಂದ ತಕ್ಷಣ ಎಂ. ಬಿ. ಪಾಟೀಲ ಸಾಹೇಬರು ನಮಗೆ ನಿನ್ನೆ ಫೋನ್ ಮಾಡಿ ಚಿಂತೆ ಮಾಡಬೇಡಿ, ನಿಮಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.  ಅಲ್ಲದೇ, ಇಂದು ಚೆಕ್ ವಿತರಿಸುವ ವ್ಯವಸ್ಥೆ ಮಾಡಿದ್ದಾರೆ.  ಇದರಿಂದ ನಮಗೆ ಸಂತೋಷವಾಗಿದೆ.  ಎಂ. ಬಿ. ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

 

ಮತ್ತೋರ್ವ ವಿದ್ಯಾರ್ಥಿ ಅರುಣ ದೇವಶೆಟ್ಟಿ ಮಾತನಾಡಿ, ನನಗೆ ತಂದೆಯಿಲ್ಲ.  ತಾಯಿ ಬಟ್ಟೆ ಅಂಗಡಿ ಸುರೇಖಾ ದೇವಶಟ್ಟಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ.  ಅಕ್ಕ ಎಂ. ಎ. ಓದುತ್ತಿದ್ದಾಳೆ.  ನನ್ನ ಬಡತನ ಪರಿಸ್ಥಿತಿಯನ್ನು ನೋಡಿ ಎಂ.‌ ಬಿ. ಪಾಟೀಲ ಸರ್, ಹಣಕಾಸಿನ ನೆರವು ನೀಡಿದ್ದಾರೆ.  ಇದರಿಂದ ಡಾಕ್ಟರ್ ಆಗಬೇಕೆಂಬ ನನ್ನ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅರುಣ ದೇವಿಶೆಟ್ಟಿ ಸಹೋದರಿ ಸೌಮ್ಯ ದೇವಶೆಟ್ಟಿ ಮಾತನಾಡಿ, ನಮ್ಮದು ಬಡ ಕುಟುಂಬ. ಆಶ್ರಯ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ.  ತಾಯಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.  ನನ್ನ ತಮ್ಮ ಬುದ್ಧಿವಂತನಿದ್ದಾನೆ.  ಅವನ ಪ್ರತಿಭೆ ಗುರುತಿಸಿ ಎಂ. ಬಿ. ಪಾಟೀಲ ಸರ್ ಆತನ ಎಂ. ಬಿ. ಬಿ. ಎಸ್. ಶಿಕ್ಷಣದ ವೆಚ್ಚವನ್ನು ಭರಿಸುತ್ತಿರುವುದು ನಮಗೆ ಸಂತಸ ತಂದಿದೆ.  ಅವರು ನೆರವಿಗೆ ಬರೆದಿದ್ದರೆ ನನ್ನ ತಮ್ಮ ಶಿಕ್ಷಣದಿಂದ ವಂಚಿತರಾಗುತ್ತಿದ್ದ.  ಈಗ ಅವರ ಸಹಾಯದಿಂದ ನಮಗೆ ಅನುಕೂಲವಾಗಿದೆ.  ತಂದೆ, ತಾಯಿ ತಮ್ಮನ ಪರವಾಗಿ ಎಂ. ಬಿ. ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ, ಸಂಸ್ಥೆಯ ಸುಪರಿಂಟೆಂಡೆಂಟ್ ಎಸ್. ಎ. ಬಿರಾದಾರ(ಕನ್ನಾಳ), ಇಬ್ಬರೂ ವಿದ್ಯಾರ್ಥಿಗಳ ಪೋಷಕರು, ಜಿ. ಎಸ್. ನಾಡಗೌಡ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌