ವಿವಿಗಳು, ಪದವಿ, ಪಿಯು ಕಾಲೇಜುಗಳಿಗೆ ಫೆ. 16ರ ವರೆಗೆ ರಜೆ ಮುಂದುವರಿಕೆ- ಆದರೆ ಆನಲೈನ್ ಕ್ಲಾಸ್ ಗಳಿಗೆ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಸರಕಾರ ಸ್ನಾತಕೋತ್ತರ, ಪದವಿ ಮತ್ತು ಪಿಯು ಕಾಲೇಜುಗಳಿಗೆ ಫೆ. 16ರ ವರೆಗೆ ರಜೆ ಮುಂದುವರಿಸಿ ಆದೇಶ ಹೊರಡಿಸಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.  ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜುಗಳು ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಆದರೆ, ಈ […]

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ- ರಮೇಶ ಜಿಗಜಿಣಗಿ

ವಿಜಯಪುರ: ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಜಯಪುರ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಲವಾರು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ,  ಅದರಂತೆ ಈಗ ಇಂಡಿ ತಾಲೂಕಿನ ಸೊನಕನಹಳ್ಳಿಯಿಂದ ಭಾರತಿ ನಗರ ಎಲ್. ಟಿ. ವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಸೊನಕನಹಳ್ಳಿ-ಭಾರತಿ ಎಲ್. ಟಿ. […]

ಶಾಂತಿ ಸುವ್ಯವಸ್ಥೆ ಕಾಪಾಡಲು ಡಿಸಿ, ಎಸ್ಪಿಗಳಿಗೆ 20 ಅಂಶಗಳ ಬಗ್ಗೆ ಕಟ್ಟೆಚ್ಚರ ವಹಿಸಲು ಖಡಕ್ ಸೂಚನೆ ನೀಡಿದ ಸಿಎಂ- ಆ ಸೂಚನೆಗಳೇನು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.  ಅಲ್ಲದೇ, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 20 ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸೂಚನೆ ನೀಡಿದ್ದಾರೆ.  ಆ ಸೂಚನೆಗಳು ಇಂತಿವೆ. 1. ಸೋಮವಾರದಿಂದ ಪ್ರೌಢಶಾಲೆ ಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು. 2. ಸೂಕ್ಷ್ಮ ಜಿಲ್ಲೆಗಳಲ್ಲಿ ಪ್ರಮುಖ ಶಾಲೆಗಳನ್ನು […]

ವಾಯುವ್ಯ ಸಾರಿಗೆಯಿಂದ ಫೆ. 14 ರಿಂದ ಹುಬ್ಬಳ್ಳಿ- ವಿಜಯಪುರ ಮಧ್ಯೆ ಪ್ರತಿದಿನ ನಾಲ್ಕು ವೊಲ್ವೊ ಬಸ್ ಸೇವೆ ಆರಂಭ- ಪ್ರಯಾಣ ದರ ಎಷ್ಟು ಗೊತ್ತಾ?

ವಿಜಯಪುರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಫೆ. 14 ರಂದು ಪ್ರೇಮಿಗಳ ದಿನದಿಂದ ಪ್ರತಿನಿತ್ಯ ವಿಜಯಪುರಕ್ಕೆ ವೊಲ್ವೊ ಬಸ್ ಸೇವೆ ಆರಂಭಿಸಲಿದೆ. ಈ ಕುರಿತು  ಹುಬ್ಬಳ್ಳಿ-ಧಾರವಾಡ ಇನ್ಫ್ರಾ ಟ್ವೀಟ್ ಮಾಡಿದ್ದು, ಪ್ರತಿನಿತ್ಯ ನಾಲ್ಕು ಬಸ್ಸುಗಳು ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಮತ್ತು ವಿಜಯಪುರದಿಂದ ಹುಬ್ಬಳ್ಳಿಗೆ ಸೇವೆ ಆರಂಭಿಸಲಿವೆ.  ವೊಲ್ವೊ ಮಲ್ಟಿ ಎಕ್ಸೆಲ್ ಬಸ್ ಸೇವೆ ಇದಾಗಿದ್ದು, ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ವಿಜಯಪುರಕ್ಕೆ ಪ್ರತಿದಿನ ಬೆ. 8ಕ್ಕೆ, 9ಕ್ಕೆ ಮತ್ತು ಸಂ. 6 ಹಾಗೂ 7ಕ್ಕೆ ಈ ಬಸ್ಸುಗಳು […]

ಹರಿಹರ ಪೀಠವೇ ಪಂಚಮಸಾಲಿಗಳಿಗೆ ಮೂಲಪೀಠ- ಫೆ. 12, 13 ರಂದು ನೂತನ ಪೀಠದ ಕಾರ್ಯಕ್ರಮದ ಮಾಹಿತಿ ನೀಡಿದ ಶ್ರೀ ಸಂಗನಬಸವ ಶಿವಾಚಾರ್ಯರು

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ ಹೊರತು ಬೇರೆ ಪೀಠಗಳು ಮೂಲಪೀಠವಲ್ಲ ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ.  10 ಲಕ್ಷ ಭಕ್ತರ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಡಾ. ಮಹಾಂತ ಸ್ವಾಮೀಜಿಗಳನ್ನು ಮೊದಲ ಜಗದ್ಗುರಗಳನ್ನಾಗಿ ಮಾಡಲಾಗಿತ್ತು ಎಂದು ಶ್ರೀ ಅಭಿನವ ಸಂಗನಬಸವ ಮಹಾಸ್ವಾಮೀಜಿ ಅವರು ಯತ್ನಾಳ ಮತ್ತು ಕೂಡಲ ಸಂಗಮ ಪೀಠದ ಶ್ರೀ […]

ನಾಗಠಾಣ ಮತಕ್ಷೇತ್ರಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ- ಜಲಸಂಪನ್ಮೂಲ ಸಚಿವರ ತವರು ಜಿಲ್ಲೆಯಾದರೂ ನೀರಾವರಿಯಿಲ್ಲ- ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ವಿಜಯಪುರ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದರೂ ನಾಗಠಾಣ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಪ್ಪಿಲ್ಲ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವನಂದ ಚವ್ಹಾಣ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದಲ್ಲಿ ಕೆರೆಗಳು ತುಂಬಿಲ್ಲ.  ಮತಕ್ಷೇತ್ರಕ್ಕೆ ಮಂಜೂರಾದ ಅನುದಾನ ವಾಪಸ್ಸಾಗಿದೆ.  ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.  ಸರಕಾರದ ಮಲತಾಯಿ ಧೋರಣೆಯಿಂದ ಮತಕ್ಷೇತ್ರಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಆರೋಪಿಸಿದರು. ನಾಗಠಾಣ, ಮತಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ, ಸರಕಾರದ ನಿಯಮಾನುಸಾರ ದೊರೆಯಬೇಕಾದ ಸೌಲಭ್ಯಗಳು, ಅಭಿವೃದ್ಧಿ ಯೋಜನೆಗಳು, ಅನುದಾನ ಸೂಕ್ತವಾಗಿ […]