ವಾಯುವ್ಯ ಸಾರಿಗೆಯಿಂದ ಫೆ. 14 ರಿಂದ ಹುಬ್ಬಳ್ಳಿ- ವಿಜಯಪುರ ಮಧ್ಯೆ ಪ್ರತಿದಿನ ನಾಲ್ಕು ವೊಲ್ವೊ ಬಸ್ ಸೇವೆ ಆರಂಭ- ಪ್ರಯಾಣ ದರ ಎಷ್ಟು ಗೊತ್ತಾ?

ವಿಜಯಪುರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಫೆ. 14 ರಂದು ಪ್ರೇಮಿಗಳ ದಿನದಿಂದ ಪ್ರತಿನಿತ್ಯ ವಿಜಯಪುರಕ್ಕೆ ವೊಲ್ವೊ ಬಸ್ ಸೇವೆ ಆರಂಭಿಸಲಿದೆ.

ಈ ಕುರಿತು  ಹುಬ್ಬಳ್ಳಿ-ಧಾರವಾಡ ಇನ್ಫ್ರಾ ಟ್ವೀಟ್ ಮಾಡಿದ್ದು, ಪ್ರತಿನಿತ್ಯ ನಾಲ್ಕು ಬಸ್ಸುಗಳು ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಮತ್ತು ವಿಜಯಪುರದಿಂದ ಹುಬ್ಬಳ್ಳಿಗೆ ಸೇವೆ ಆರಂಭಿಸಲಿವೆ.  ವೊಲ್ವೊ ಮಲ್ಟಿ ಎಕ್ಸೆಲ್ ಬಸ್ ಸೇವೆ ಇದಾಗಿದ್ದು, ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ವಿಜಯಪುರಕ್ಕೆ ಪ್ರತಿದಿನ ಬೆ. 8ಕ್ಕೆ, 9ಕ್ಕೆ ಮತ್ತು ಸಂ. 6 ಹಾಗೂ 7ಕ್ಕೆ ಈ ಬಸ್ಸುಗಳು ಹೊರಡಲಿವೆ.  ಇದೇ ರೀತಿ ವಿಜಯಪುರದಿಂದ 8 ಮತ್ತು 8 ಗಂಟೆ, ಮ. 3 ಮತ್ತು 4ಕ್ಕೆ ಹುಬ್ಬಳ್ಳಿಗೆ ಬಸ್ಸುಗಳು ಸಂಚರಿಸಲಿವೆ.  ಈ ಬಸ್ಸುಗಳು ನಿಗದಿತ ಸ್ಥಳ ತಲುಪಲು ನಾಲ್ಕು ಗಂಟೆಗಳು ತಗುಲಲಿವೆ.

 

ಬಸ್ ದರ ಎಷ್ಟು ಗೊತ್ತಾ?

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಈ ವೊಲ್ವೊ ಮಲ್ಟಿ ಎಕ್ಸೆಲ್ ಬಸ್ಸಿನಲ್ಲಿ ಸಂಚರಿಸಬೇಕೆಂದರೆ ಪ್ರತಿಯೊಬ್ಬ ಪ್ರಯಾಣಿಕರಿಗೆ ರೂ. 300 ದರ ನಿಗದಿ ಮಾಡಲಾಗಿದೆ.  ಅಲ್ಲದೇ, ವಿಡಯಪುರದಿಂದ ಹುಬ್ಬಳ್ಳಿಗೆ ಸಂಚರಿಸಲೂ ಕೂಡ ರೂ. 300 ಟಿಕೆಟ್ ದರ ನಿಗದಿ ಪಡಿಸಲಾಗಿದೆ.

ಸಂಚಾರ ದಟ್ಟಣೆ, ಪರಿಸರಕ್ಕೆ ಪೂರಕವಾದ ಯೋಜನೆ

ಈ ಹೊಸ ಬಸ್ಸುಗಳ ಸೇವೆ ಆರಂಭಿಸುವುದರಿಂದ ಖಾಸಗಿ ವಾಹನಗಳ ಸಂಚಾರ ಕಡಿಮೆಯಾಗಲಿದ್ದು, ವೆಚ್ಚವೂ ಕಡಿಮೆಯಿದೆ.  ಅಲ್ಲದೇ, ಪರಿಸರ ಮಾಲಿನ್ಯವನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ.

ಎಲ್ಲೆಲ್ಲಿ ನಿಲುಗಡೆ?

ಈ ಬಸ್ಸುಗಳು ನರಗುಂದ, ಕುಳಗೇರಿ ಕ್ರಾಸ್, ಗದ್ದನಕೇರಿ ಕ್ರಾಸ್, ಕೊಲ್ಲಾರ(ಯುಕೆಪಿ) ಗಳಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.

ಹಿಂದಿನ ಡಿಸಿ ಸಲಹೆ ಹಿನ್ನೆಲೆ ಹೊಸ ಬಸ್ ಸಙಚಾರ

ಈ ಮಧ್ಯೆ, ಈ ಹೊಸ ಬಸ್ ಸಂಚಾರಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರದ ಈ ಹಿಂದಿನ ಡಿಸಿ ಮತ್ತು ಸಧ್ಯಕ್ಕೆ ಹುಬ್ಬಳ್ಳಿಯಲ್ಲಿ ಎಬ್ ಡಬ್ಲೂ ಕೆ ಆರ್ ಟಿಸಿ ಪ್ರಾದೇಶಿಕ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಾರಾಯಣಪ್ಪ ಕುರುಬರ ಅವರ ಸಲಹೆ ಪ್ರಮುಖ ಕಾರಣ ಎಂದು ಮೂಲಗಳು ಬಸವ ನಾಡಿಗೆ ತಿಳಿಸಿವೆ‌.

Leave a Reply

ಹೊಸ ಪೋಸ್ಟ್‌