ವಿಜಯಪುರ ಡಿಸಿಯಿಂದ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ

ವಿಜಯಪುರ: ವಿಜಯಪುರ ಜಿಲ್ಲೆಯ ಮದಭಾವಿ, ಭುರಣಾಪೂರ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪರಿಸಿಲಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಿರೇಗೌಡರ ಅವರು ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ನೀಡಿದರು

 

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ವಿಮಾನಗಳ ಹಾರಾಟಕ್ಕಾಗಿ ಒಟ್ಟು ರೂ. 220 ಕೋ. ಮಂಜೂರಾಗಿದೆ. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ(ಪಿ ಎಮ್ ಸಿ) ನೇಮಿಸಲಾಗಿದೆ. ಒಟ್ಟು ರೂ 220 ಕೋ.ವೆಚ್ಚದ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ ರೂ. 95 ಕೋ. ಮತ್ತು ಎರಡನೇ ಹಂತದ ಕಾಮಗಾರಿಗಾಗಿ ರೂ 125 ಕೋ. ಗಳನ್ನು ಕಾಯ್ದಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೊದಲನೇ ಹಂತದ ರೂ. 95 ಕೋ. ಗಳಲ್ಲಿ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಐಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಹೊರ ವರ್ತ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿ ಪಡಿಸಲಾಗುತ್ತಿದೆ.
ಮೊದಲನೇ ಹಂತದ ಕಾಮಗಾರಿಯನ್ನು ವಿಜಯಪುರದ ಮೆ: ಎಸ್. ಎಸ್. ಆಲೂರ ಕನಸ್ಟ್ರಕ್ಸನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು. ರೂ. 95-20 ಕೋ. ಗಳಿಗೆ 04. 01.2021 ರಂದು ವಹಿಸಿಕೊಡಲಾಗಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 11 ತಿಂಗಳ ಕಾಲಾವಧಿಯನ್ನು ನಿಗದಿ ಪಡಿಸಲಾಗಿದೆ.

ಎರಡನೇ ಹಂತದ ರೂ. 125 ಕೋ. ಗಳಲ್ಲಿ ಪುನಃ ಎರಡು ಉಪಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಉಪಕಾಮಗಾರಿಗಾಗಿ ರೂ. 106 ಕೋ.‌ ಹಾಗೂ ಏವಿಯೋನಿಕ್ಸ/ಸೆಕ್ಯೂರಿಟಿ ಇಕ್ವ್ಯೂಪಮೆಂಟ್ಸ್ ಉಪಕಾಮಗಾರಿಗಾಗಿ ರೂ.19 ಕೋ‌‌. ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಿವಿಲ್ ಉಪಕಾಮಗಾರಿ ರೂ. 106 ಕೋ. ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ ಎಫ್‌ಆರ್. ಕಟ್ಟಡ, ಕಂಪೌಂಡ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿ ಪಡಿಸಲು ರೂ. 79 ಕೋ.‌ ಟೆಂಡರನ್ನು ಈಗಾಗಲೇ ಕರೆಯಲಾಗಿದ್ದು, ಆರ್ಥಿಕ ಬಿಡ್ ಅನುಮೋದನೆ ಹಂತದಲ್ಲಿದೆ. ಶೀಘ್ರದಲ್ಲೆ ಕಾರ್ಯಾದೇಶ ನೀಡಿ, ಕೆಲಸ ಪ್ರಾರಂಭಿಸಲಾಗುವುದು. ಸಿವಿಲ್ ಉಪಕಾಮಗಾರಿಯಲ್ಲಿ ಉಳಿದ ಮೊತ್ತ 27 ಕೋ. ವಿಮಾನ ನಿಲ್ದಾಣದ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದು, ವಿಮಾನ ನಿಲ್ದಾಣಕ್ಕೆ 24x 7 ನೀರು ಸರಬರಾಜು ಮಾಡುವುದು, ವಿಮಾನ ನಿಲ್ದಾಣಕ್ಕೆ 2000 ಕಿಲೋ ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಮಾಡುವುದು, ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ (ಪಿ ಎಮ್ ಸಿ) ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುವುದು. ಏವಿಯೋನಿಕ್ಸ/ಸೆಕ್ಯೂರಿಟಿ ಇಕ್ವ್ಯ ಪಮೆಂಟ್ಸ್ ಉಪಕಾಮಗಾರಿ ರೂ. 19 ಕೋ. ಬ್ಯಾಗೇಜ್ ಹ್ಯಾಂಡಲಿಂಗ್, ಸೆಕ್ಯೂರಿಟಿ ಸ್ಕ್ಯಾನರ್, ಲ್ಯಾನ್, ಎಸಿ ಪ್ಲ್ಯಾಂಟ್ ಇನಪಾರ್ಮೇಶನ್ ಡಿಸ್‌ಪ್ಲೇ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃಧ್ದಿ ಪಡಿಸಲು ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಜ. 2022 ವರೆಗೆ ಮೊದಲನೇ ಹಂತದ ಕಾಮಗಾರಿಯ ಶೇ. 55 ಭೌತಿಕ ಪ್ರಗತಿ ಹಾಗೂ ಶೇ. 56 ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ.

 

ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-72 ದಿಂದ ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೆಗೇರಿಸುವ ಪ್ರಕ್ರಿಯ ನಡೆಯುತ್ತಿರುವುದರಿಂದ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ ಹಾಗೂ ಇತರೆ ಕಾಮಗಾರಿಗಳ ವಿನ್ಯಾಸದಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ. ಮೂರನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅವಶ್ಯವಿರುವ ರೂ. 120 ಕೋ. ಅನುದಾನ ಮಂಜೂರಾತಿಗಾಗಿ ಕಾಯಲಾಗುತ್ತಿದೆ.

ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮೂರನೇ ಹಂತದ ಕಾಮಗಾರಿಯ ವಿನ್ಯಾಸ ಹಾಗೂ ಅಂದಾಜು ಪತ್ರಿಕೆ(ಡಿ ಪಿ ಆರ್) ತಯಾರಿಕೆ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಈಗ ಪ್ರಗತಿಯಲ್ಲಿರುವ ಹಂತ-1 ರ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ರನ್ ವೇ ಜಿ.ಎಸ್.ಬಿ. ಪದರದ ದಪ್ಪ ಹಾಗೂ ಇತರೆ ಅಳತೆಗಳನ್ನು ಪರಿಶೀಲಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ನಾನಾ ಅಧಿಕಾರಿಗಳಾದ ಪಟ್ಟಣಶೆಟ್ಟಿ, ಆರ್. ಎನ್. ಮಸಳಿ. ಜೋಸ್ ಥಾಮಸ್, ಪಿ‌ ಎಮ್ ಸಿ ಟೀಮ್ ಲೀಡರ್,ಬೆಂಗಳೂರಿನ ಐಡೆಕ್ ಸಂಸ್ಥೆಯ ಅಧಿಕಾರೊಗಳು, ಗುತ್ತಿಗೆದಾರ ಎಸ್. ಎಸ್. ಆಲೂರ ಮತ್ತು ಇತರರು ಉಪಸ್ಥಿತರಿದ್ದರು .

Leave a Reply

ಹೊಸ ಪೋಸ್ಟ್‌