ಆನಂದ-ಸುಪ್ರೀಯಾ ಕಿ ವ್ಯಾಲೆಂಟೈನ್ ಪ್ರೇಮ್ ಹಕಾನಿ

ವಿಜಯಪುರ: ಈ ಜೋಡಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗಲೇ ಪರಸ್ಪರ ಪ್ರೀತಿ ಈಗ 22ನೇ ವರ್ಷದ ವ್ಯಾಲೆಂಟೈನ್ ಡೆ ಸಂಭ್ರಮಿಸುತ್ತಿದೆ.  ಒಬ್ಬರು ಬಸವ ನಾಡು ವಿಜಯಪುರ ಜಿಲ್ಲೆಯವರಾದರೆ ಮತ್ತೋಬ್ಬರು ವಿದ್ಯಾಕಾಶಿ ಧಾರವಾಡ ಜಿಲ್ಲೆಯವರು.  ಒಬ್ಬರ ತಂದೆ ಶಾಲೆಯ ಮುಖ್ಯ ಶಿಕ್ಷಕರಾದರೆ ಮತ್ತೋಬ್ಬರ ತಂದೆ ಪೊಲೀಸ್ ಅಧಿಕಾರಿಯಾಗಿದ್ದವರು. 

2000 ನೇ ಇಸವಿಯಲ್ಲಿ ಆರಂಭವಾದ ಇವರ ಪ್ರೀತಿ 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಜೀವನಕ್ಕೆ ಕಾಲಿಡುವಂತೆ ಮಾಡಿತು.  ಮದುವೆಯ ಸಂದರ್ಭದಲ್ಲಿ ಬೇಸರವಾದವರಿಗೂ ಈ ಜೋಡಿಯ ಮೇಲೆ ಪ್ರೀತಿ ಬರುವಂತೆ ಮಾಡಿದ್ದು ಈ ಜೋಡಿಯ ಸಾಹಸಗಾಥೆಯೇ ಸರಿ.

ಇವರು ವಿಜಯಪುರದ ಯುವ ಉದ್ಯಮಿ ಆನಂದ ಮಠಪತಿ ಮತ್ತು ಸುಪ್ರಿಯಾ ಹಿರೇಮಠ ಅವರ ಪ್ರೇಮ್ ಕಹಾನಿ.  ಬಸವ ನಾಡು ವಿಜಯಪುರದಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾಕಾಶಿ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕ್ರಿಮಿನಾಲಜಿ ಎಂ.ಎ ಮಾಡಲು ತೆರಳಿದ ಆನಂದ ಅವರಿಗೆ ಸ್ನೇಹಿತರೊಬ್ಬರ ಮೂಲಕ ಪರಿಚಯವಾದವರು ಹಿಂದಿ ವಿಭಾಗದಲ್ಲಿ ಎಂ.ಎ. ಮಾಡುತ್ತಿದ್ದ ಸುಪ್ರಿಯಾ ಹಿರೇಮಠ.  ಅಲ್ಲಿಂದ ಆರಂಭವಾದ ಈ ಲವ್ ಸ್ಟೋರಿ ಈಗ ಸುಖವಾಗಿ ಮುಂದುವರೆದಿದೆ.

2005ರಲ್ಲಿ ಸಾಕಷ್ಟು ಅಡೆತಡೆಗಳ ಮಧ್ಯೆಯೂ ಸುಪ್ರಿಯಾ ಹಿರೇಮಠ ಅವರು ವಿಜಯಪುರಕ್ಕೆ ಬಂದು ಆನಂದ ಮಠಪತಿ ಅವರ ಕೈ ಹಿಡಿದರು.  ಆರಂಭದಲ್ಲಿದ್ದ ತೊಡಕುಗಳು ಆನಂದ ಮತ್ತು ಸುಪ್ರಿಯಾ ಜೋಡಿ ತೊಡೆದುಹಾಕಿ ದುಃಖದಲ್ಲಿದ್ದವರ ಮೊಗದಲ್ಲಿಯೂ ಮಂದಹಾಸ ಮೂಡಿಸಿದ್ದು ಈಗ ಇತಿಹಾಸ.  ಮದುವೆಯಾಗುವವರೆಗೆ ಮತ್ತು ನಂತರ ಎದುರಾಗಿದ್ದ ಸವಾಲುಗಳನ್ನು ಪ್ರೀತಿಯ ಮೂಲಕವೇ ಬಗೆಹರಿಸಿ ಈಗ ಪ್ರೇಮ ವಿವಾಹವಾದವರು ಹೇಗೆ ಉತ್ತಮವಾಗಿ ಜೀವನ ಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಆನಂದ ಹಿರೇಮಠ ಈಗ ಸ್ವಂತ ಉದ್ಯಮ ನಡೆಸುತ್ತಿದ್ದು, ಪೇಯಿಂಟ್ ವ್ಯವಹಾರ ಮಾಡುತ್ತಿದ್ದಾರೆ.  ಸುಪ್ರಿಯಾ ಹಿರೇಮಠ ಎಂ. ಎ. ಆದ ಮೇಲೆ ಗಂಡನ ಮನೆಗೆ ಬಂದು ಎಂ. ಫಿಲ್ ಮುಗಿಸಿ ಈಗ ಡಾಕ್ಟರೇಟ್ ಪಡೆದಿದ್ದಾರೆ.  ಕೆಲವು ವರ್ಷಗಳ ಕಾಲ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರಿಬ್ಬರ ಪ್ರೀತಿಯ ಕುರುಹಾಗಿ ಆದಿತ್ಯ ಮತ್ತು ಆರ್ಯ ಹೆಸರಿನ ಪುತ್ರರು ಹೆಸರಿಗೆ ತಕ್ಕಂತೆ ಬೆಳೆಯುತ್ತಿದ್ದಾರೆ.  ಹಿರಿಯ ಮಗ ಆದಿತ್ಯ ಈಗ ಧಾರವಾಡದಲ್ಲಿ ಅಜ್ಜಿ(ತಾಯಿಯ ತಾಯಿ)ಯ ಮನೆಯಲ್ಲಿದ್ದುಕೊಂಡು 10ನೇ ತರಗತಿಯಲ್ಲಿ ಓದುತ್ತಿದ್ದರೆ ಕಿರಿಯ ಪುತ್ರ ಆರ್ಯ ಖ್ಯಾತ ಡ್ಯಾನ್ಸರ್ ಆಗಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಈಗಾಗಲೇ ನಾನಾ ಟಿವಿ ಶೋಗಳಲ್ಲಿ ಭಾಗವಹಿಸಿ ಭಲೆ ಬಾಲಕ ಎನಿಸಿಕೊಂಡಿದ್ದಾನೆ.  ದಿ. ಪವರಸ್ಟಾರ್ ಪುನಿತ ಅವರ ಕಾರ್ಯಕ್ರಮದಲ್ಲಿಯೂ ತನ್ನ ಮೋಡಿಯ ಮೂಲಕ ಮನಗೆದ್ದಿದ್ದಾನೆ.

ಶ್ರೀಶೈಲಯ್ಯ ಮತ್ತು ತಾಯಿ ಸರಸ್ವತಿ ಅವರಿಗೆ ಮೂರನನೇ ಪುತ್ರರಾಗಿರುವ ಆನಂದ ಕೂಡ ಕಾಲೇಜಿನಲ್ಲಿ ಉತ್ತಮ ಡ್ಯಾನ್ಸರ್ ಆಗಿದ್ದು, ಈಗ ತಮ್ಮ ಉದ್ಯಮದಲ್ಲಿಯೂ ಸಾಕಷ್ಟು ಪ್ರಗತಿ ಕಾಣುವ ಮೂಲಕ ವಿದೇಶಗಳ ಪ್ರವಾಸವನ್ನು ಮಾಡುತ್ತಿರುತ್ತಾರೆ.  ಈಗಿನ ವ್ಯಾಲೆಂಟೈನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಪ್ರೀತಿ ಕೇವಲ ವ್ಯಾಲೆಂಟೈನ್ ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ.  ಬದುಕಿನುದ್ದಕ್ಕೂ ದಂಪತಿಗಳಿಬ್ಬರೂ ಯಾವುದೇ ಸಣ್ಣಪುಟ್ಟ ಸಮಸ್ಯೆಗಳೂ ಬಾರದಂತೆ ಸಂತೃಪ್ತ ಜೀವನ ಸಾಗಿಸುವದೇ ಗುರಿಯಾಗಿದೆ.  ತಮ್ಮಿಬ್ಬರಿಗೆ ತಮ್ಮ ತಂದೆ-ತಾಯಿ, ಸಹೋದರ-ಸಹೋದರಿಯಲ ಆಶೀರ್ವಾದವೇ ಶ್ರೀರಕ್ಷೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ದಿ.ಶಂಕ್ರಯ್ಯ ಹಿರೇಮಠ ಮತ್ತು ಮಹಾದೇವಿ ಹಿರೇಮಠ ಅವರ 5ನೇ ಪುತ್ರಿಯಾಗಿರುವ ಸುಪ್ರಿಯಾ ಹಿರೇಮಠ ಕಷ್ಟ ಪರಿಸ್ಥಿತಿ ಎದುರಿಸಿದರೂ ಧೈರ್ಯಗುಂದದೇ ವಿಜಯಪುರಕ್ಕೆ ಬಂದು ಮಠಪತಿ ಕುಟುಂಬದಲ್ಲಿ ಆನಂದಮಯ ವಾತಾವರಣ ತಂದಿದ್ದಾರೆ.  ಆನಂದ ಅವರ ಬಾಳಿಗೆ ಬೆಳಕಾಗಿದ್ದಾರೆ.  ಅತ್ತೆ-ಮಾವನ ಕುಟುಂಬ್ಥರ ಪ್ರೀತಿಗೂ ಪಾತ್ರರಾಗಿದ್ದಾರೆ.

ಕೇವಲ ಹೆಸರಿಗಷ್ಟೇ ವ್ಯಾಲೆಂಟೈನ್ ಡೇ ಆಚರಿಸುವ ನಂತರ ನೀ ಯಾರೋ, ನಾ ಯಾರೋ ಎನ್ನುವ ವರ್ತನೆಯೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಆನಂದ ಮಠಪತಿ-ಸುಪ್ರಿಯಾ ಹಿರೇಮಠ ಜೋಡಿ ಮಾತ್ರ 22 ವರ್ಷಗಳ ಹಿಂದೆ ಪ್ರೀತಿ ಆರಂಭವಾದಾಗ ಹೇಗಿತ್ತೋ ಈಗಲೂ ಅದೇ ದಿನಗಳನ್ನು ಕಳೆಯುತ್ತಿದ್ದಾರೆ.  ಈ ವ್ಯಾಲೆಂಟೈನ್ ಜೋಡಿಗೆ ಶುಭವಾಗಲಿ ಎಂದು ಬಸವ ನಾಡು ಕೂಡ ಹಾರೈಸುತ್ತದೆ.

Leave a Reply

ಹೊಸ ಪೋಸ್ಟ್‌