ರಾಜೀವ ಗಾಂಧಿ ವಿವಿ ಪರೀಕ್ಷೆ- ಬಾಗಲಕೋಟೆ ಬಿವಿವಿ ಹೋಮಿಯೋಪಥಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಬಾಗಲಕೋಟೆ: ಬಾಗಲಕೋಟೆಯ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜನೇವರಿಯಲ್ಲಿ ನಡೆದ ಪ್ರಥಮ ಮತ್ತು ದ್ವಿತೀಯ ಬಿ ಎಚ್ ಎಂ ಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ದಕ್ಷತಾ ಹೊರಟ್ಟಿ
ಪ್ರಿಯಾಂಕಾ ಹವಾಲ್ದಾರ

 

ಈ ಕಾಲೇಜಿನ ಪ್ರಥಮ ವರ್ಷದ ಎಲ್ಲ ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ. 100 ಫಲಿತಾಂಶ ಸಾಧನೆ ಮಾಡಿದ್ದಾರೆ.  ದ್ವಿತೀಯ ವರ್ಷದಲ್ಲಿ ಶೇ. 99 ರಷ್ಟು ಫಲಿತಾಂಶ ಬಂದಿದೆ.  ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ದಕ್ಷತಾ ಹೊರಟ್ಟಿ, ಪ್ರಿಯಾಂಕಾ ಹವಾಲ್ದಾರ, ದಿರಿಸಲಾ ಸಿರಿ ಹಾಗೂ ಚಾಯಾ ಭಗವತಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ದಿರಿಸಲಾ ಸಿರಿ
ಛಾಯಾ ಭಗವತಿ

ಐದು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾದರೆ, ಉಳಿದ ಎಲ್ಲ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.  ಈ ವಿದ್ಯಾರ್ಥಿಗಳ ಸಾಧನೆಗೆ ಬಿವಿವಿಎಸ್ ಕಾರ್ಯಾಧ್ಯಕ್ಷ ಮತ್ತು ಬಾಗಲಕೋಟೆ ಬಿಜೆಪಿ ಶಾಸಕ ಡಾ. ವೀರಣ್ಣ ಸಿ. ಚರಂತಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರುಣ ವಿ. ಹೂಲಿ, ಕಛೇರಿ ಅಧೀಕ್ಷ ರಾಜೇಶ ಎಸ್. ಹೊಕ್ರಾಣಿ, ಮಹಾವಿದ್ಯಾಲಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌