ಬೆಂಗಳೂರು: ಮೆಕ್ ಡೋನಾಲ್ಡ್ ಭಾರತಕ್ಕೆ ಕಾಲಿಟ್ಟು 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿಶಿಷ್ಠ ಯೋಜನೆಯೊಂದನ್ನು ರೂಪಿಸಿದೆ. ಮೆಕ್‌ಡೊನಾಲ್ಡ್ಸ್‌ನಲ್ಲಿ ಈವರೆಗೆ ಕೇವಲ ತಿಂಡಿ ಖರೀದಿಸಲು ಮಾತ್ರ ಅವಕಾಶವಿತ್ತು. ಆದರೆ, ಇನ್ನು ಮುಂದೆ ಆಹಾರ ಸೇವನೆ ಜೊತೆಗೆ ಓದಲು ಪುಸ್ತಕವನ್ನೂ ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಮೆಕ್‌ಡೊನಾಲ್ಡ್ಸ್ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಹ್ಯಾಪಿ ಮೀಲ್ ರೀಡರ್ಸ್ ಕಾರ್ಯಕ್ರಮವನ್ನು ಪರಿಚಯಿಸುಲಾಗಿದ್ದು, ಈ ಹ್ಯಾಪಿ ಮೀಲ್ ರೀಡರ್ಸ್‌ನಲ್ಲಿ ಮಕ್ಕಳಿಗಾಗಿ ಓದಲು ಪುಸ್ತಕವನ್ನೂ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಮೆಕ್‌ಡೊನಾಲ್ಡ್ಸ್ ಈ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಹ್ಯಾಪಿ ಮೀಲ್ ರೀಡರ್ಸ್ ಪ್ರೋಗ್ರಾಮ್‌ನಲ್ಲಿ ಬರ್ಗರ್, ಪಾನೀಯ, ಒಂದು ಕಡ್ ಆವಿಯಲ್ಲಿ ಬೇಯಿಸಿದ ಕಾರ್ನ್ ಹಾಗೂ ವಿಶೇಷ ಪುಸ್ತಕವನ್ನು ಒಳಗೊಂಡಿರುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಮೆಕ್‌ಡೊನಾಲ್ಡ್ಸ್ ಡೈರೆಕ್ಟರ್ ಆರ್. ಪಿ. ಅರವಿಂದ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ. ಮಕ್ಕಳಿಗೆ ಸಾಹಸಮಯ, ಡಿಟೆಕ್ಟಿವ್ ರೀತಿಯ ಕತೆಗಳೆಂದರೆ ಹೆಚ್ಚು ಪ್ರೀತಿ. ಇಂಥ ಪುಸ್ತಕ ಅವರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಜೊತೆಗೆ ಈ ಪುಸ್ತಕಗಳು ಒಂದಷ್ಟು ಪ್ರಶ್ನೆ ಉತ್ತರ, ಕ್ವಿಜ್ ರೀತಿಯ ಪ್ರಶ್ನೆಗಳನ್ನೂ ಸಹ ಒಳಗೊಂಡಿರಲಿವೆ. ಇದು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಪ್ರತಿ ಬಾರಿ ಮೆಕ್‌ಡೋನಾಲ್ಡ್ಸ್‌ಗೆ ಬರುವವರು ಕೇವಲ ಆಹಾರ ಸೇವಿಸಿ ಹೋಗುವ ಬದಲು ಈ ರೀತಿಯ ಆಸಕ್ತಿದಾಯಕ ಚಿಂತನೆಗಳನ್ನು ಅವಳವಡಿಸಲು ಈ ಬಾರಿ ಯೋಚಿಸಿ, ಅದನ್ನು ಎಲ್ಲಾ ಮೆಕ್‌ಡೊನಾಲ್ಡ್ಸ್ ಶಾಖೆಗಳಲ್ಲೂ ಅಳವಡಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.