ಗುಡ್ಡಾಪುರದಲ್ಲಿ ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಸಚಿವೆ ಶಶಿಕಲಾ ಜೊಲ್ಲೆ
ವಿಜಯಪುರ: ಮುಜರಾಯಿ, ಹಜ್ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ ದಾನಮ್ಮದೇವಿಯ ಭಕ್ತರಾಗಿ ಪೂರ್ಣಕುಂಭ ಹೊತ್ತು ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಸುಕ್ಷೇತ್ರ ಗುಡ್ಡಾಪುರ ದಾನಮ್ಮ ಉತ್ತರ ಕರ್ನಾಟಕದ ಆರಾಧ್ಯ ದೈವೆ. ಗಡಿದಾಟ ಲಕ್ಷಾಂತರ ಭಕ್ತರು ಗುಡ್ಡಾಪುರಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಗುಡ್ಡಾಪುರದಲ್ಲಿ ರೂ. 5 ಕೋ. ವೆಚ್ಚದಲ್ಲಿ ಕರ್ನಾಟಕ ಭವನ ನಿರ್ನಿಸುತ್ತಿದೆ. ಈ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭ ನಡೆಯಿತು. […]
ವಿಜಯಪುರ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ
ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಸಂತ ಸೇವಾಲಾಲ ಜಯಂತಿಯನ್ನು ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ವಿಜಯಪುರದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ […]
ಬಿಸಿಲ ನಾಡಿನಲ್ಲಿ ರೇಶ್ಮೆ ಬೆಳೆದು ಗಮನ ಸೆಳೆಯುತ್ತಿರುವ ಬಸವ ನಾಡಿನ ರೈತ ದಂಪತಿ
ಮಹೇಶ ವಿ. ಶಟಗಾರ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಬಹುತೇಕ ಭಾಗಗಳಲ್ಲಿ ರೈತರಿಗೆ ಸಾಕಷ್ಟು ಜಮೀನು ಇದ್ದರೂ ಅದರಲ್ಲಿ ತಂತ್ರಜ್ಞಾನ ಬಳಸಿ ಹೇಗೆಲ್ಲ ಉತ್ತಮ ಆದಾಯ ಗಳಿಬಹುದು ಎಂಬುದು ಬಹುತೇಕರಿಗೆ ಮಾಹಿತಿ ಇಲ್ಲ. ಅದರಲ್ಲೂ ಕಡಿಮೆ ಭೂಮಿಯಿದ್ದರೂ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಹೆಚ್ಚೆಚ್ಚು ಆದಾಯ ಗಳಿಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಈ ದಂಪತಿ. ಇವರಿಗೆ ಜಮೀನು ಎಷ್ಟಿ ಎನ್ನುವುದಕ್ಕಿಂತ ತಮ್ಮ ಪಾಲಿಗಿರುವ ಒಂದೇ ಎಕರೆ ಭೂಮಿಯಲ್ಲಿ ಈ ರೈತ ದಂಪತಿ ಲಕ್ಷಗಟ್ಟಲೇ ಆದಾಯ ಗಳಿಸುವ ಮೂಲಕ ಅನ್ನದಾತರ ಗಮನ […]