ಗುಡ್ಡಾಪುರದಲ್ಲಿ ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಮುಜರಾಯಿ, ಹಜ್ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ ದಾನಮ್ಮದೇವಿಯ ಭಕ್ತರಾಗಿ ಪೂರ್ಣಕುಂಭ ಹೊತ್ತು ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆಸಿದ್ದಾರೆ.

 

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಸುಕ್ಷೇತ್ರ ಗುಡ್ಡಾಪುರ ದಾನಮ್ಮ ಉತ್ತರ ಕರ್ನಾಟಕದ ಆರಾಧ್ಯ ದೈವೆ. ಗಡಿದಾಟ ಲಕ್ಷಾಂತರ ಭಕ್ತರು ಗುಡ್ಡಾಪುರಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಗುಡ್ಡಾಪುರದಲ್ಲಿ ರೂ. 5 ಕೋ. ವೆಚ್ಚದಲ್ಲಿ ಕರ್ನಾಟಕ ಭವನ ನಿರ್ನಿಸುತ್ತಿದೆ. ಈ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಾಮಾನ್ಯ ಭಕ್ತಳಂತೆ ತಲೆಯ ಮೇಲೆ ಪೂರ್ಣಕುಂಭ ಹೊತ್ತು ಗಮನ ಸೆಳೆದಿದ್ದಾರೆ. ಈ ಕಾಮಗಾರಿಗೆ ಕರ್ನಾಟಕ ಸರಕಾರದ ಮುಜರಾತಿ, ಹಜ್ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತಬಾಡಿದ ಅವರು, ಎತ್ತಣ ಮಾಮರ? ಎತ್ತಣ ಕೋಗಿಲೆ?ಎತ್ತಣದಿಂದೆತ್ತ ಸಂಬಂಧವಯ್ಯ ಎಂಬ ಕವಿಯ ನುಡಿಯಂತೆ ನನಗೂ ಈ ದೇವಾಲಯದ ಸಂಬಂಧ ಅನ್ನುವ ಹಾಗೆ ಇಲಾಖೆಯು ಸಿಕ್ಕಿರುವುದು ಶ್ರೀ ದಾನಮ್ಮ ದೇವಿ ಸೇವೆ ಮಾಡಲು ಅನುಕೂಲವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

/

ಹಲವಾರು ಬಾರಿ ಈ ದೇವಾಲಯಕ್ಕೆ ಬಂದು ಹೋಗಿದ್ದೇನೆ.‌‌ ನನಗೂ ತಾಯಿಯ ಆಶೀರ್ವಾದವಾಗಿದೆ. 12ನೇ ಶತಮಾನದಲ್ಲಿ ತಾಯಿ ಮಾಡಿದ ಅನ್ನದಾಸೋಹ, ಕಷ್ಟದಲ್ಲಿರುವವರಿಗೆ ನೆರವು ಗಮನ ಸೆಳೆಸಿದ್ದವು.‌ ಈ ಸೇವೆಗಳನ್ನು ಕಂಡು ಶ್ರೀ ಜಗಜ್ಯೋತಿ ಶ್ರೀ ಬಸವಣ್ಣನವರು ಖುದ್ದಾಗಿ ಬಂದು, ಬಂದು ಬೆಟ್ಟಿ ಆದರೂ ಲಿಂಗಮ್ಮ ನೆಂದು ಹೆಸರು ಪಡೆದ ತಾಯಿ ಸಾಮಾಜಿಕ ಕಾರ್ಯಗಳನ್ನು ನೋಡಿ ನೀನು ಇನ್ನು ಮೇಲೆ ನೀನು ಶ್ರೀ ದಾನಮ್ಮ ಎಂದು ನಾಮಕರಣ ಮಾಡಿರುವಯದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಹೇಳಿದರು.

 

ಸಮಾಜ ಸೇವೆ ಮಾಡಲು ಹಣ, ಶ್ರೀಮಂತಿಕೆ ಮುಖ್ಯವಲ್ಲ. ಹೃದಯವಂತಿಕೆ ಬೇಕು. ಸಾಮಾನ್ಯ ಮನೆತನದಲ್ಲಿ ಹುಟ್ಟಿದ ದಾನಮ್ಮತಾಯಿಯ ಸಮಾಜ ಕಾರ್ಯಗಳು ನಮಗೆ ಪ್ರೇರಣೆಯಾಗಿವೆ.‌‌ ಎಷ್ಟು ಸಾಧ್ಯವೋ ಅಷ್ಟು ಸಾಮಾಜಿಕ ಜನೋಪಕಾರಿ ಕೆಲಸಗಳನ್ನು ಮಾಡಿ ಭೂಮಿತಾಯಿ ಹಾಗೂ ಜನಸಾಮಾನ್ಯರ ಸೇವೆ ಮಾಡುವ ಮೂಲಕ ಜನ್ಮಸಾರ್ಥಕ ಮಾಡಿಕೊಳ್ಳಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜತ್ ಶಾಸಕ ವಿಕ್ರಮಸಿಂಹ ಸಾವಂತ, ಕರ್ನಾಟಕದ ಗಡಿಭಾಗದಲ್ಲಿರುವ ಈ ಭಾಗದಲ್ಲಿ ರಸ್ತೆ, ನೀರಾವರಿಯಂಥ ಅಭಿವೃದ್ಧಿ ಕಾರ್ಯಗಳು ನೆನಗುದಿಗೆ ಬಿದ್ದಿವೆ. ನಾವೆಲ್ಲರೂ ಸರಕಾರದಿಂದ ಹಣ ತರುವ ಮೂಲಕ ಕೆಲಸ ಮಾಡೋಣ ಎಂದು ಹೇಳಿದರು.

ಸಾಂಗಲಿ ಸಂಸದ ಸಂಜಯ ಕಾಕಾ ಪಾಟೀಲ, ಸೋಲಾಪುರ ಸಂಸದ ಡಾ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

 

ಜಾಡರ ಬಬಲಾದಿ ಜಿ. ಪಂ. ಸದಸ್ಯ ತಮ್ಮನಗೌಡ ರವಿ ಪಾಟೀಲ. ತಾ. ಪಂ. ಸದಸ್ಯ ವಿಷ್ಣು ಚವ್ಹಾಣ, ಗುಡ್ಡಾಪುರ ಗ್ರಾ. ಪಂ. ಅಧ್ಯಕ್ಷ ಪ್ರಸಾದ ಗುರುಪಾದ ಪೂಜಾರಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ದೇವಸ್ಥಾನದ ನಾನಾ ನಿರ್ದೇಶಕರು, ಕರ್ನಾಟಕ ರಾಜ್ಯ ಮುಜರಾಯಿ, ಹಜ್ ಮತ್ತು ವಕ್ಪ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರ, ದೇವಸ್ಥಾನ ಆಡಳಿತ ಮಂಡಳಿ ನಿರ್ದೇಶಕರಾದ ಪ್ರಕಾಶ ಗಣಿ. ಚಂದ್ರಶೇಖರ ಗೋಬ್ಬಿ, ರೋಹಿತ ಗಾಡವೆ, ಸದಾಶಿವ ಗೊಡ್ಡೋಡಗಿ, ಭೀಮಣ್ಣ ಗುಡ್ಡಾಪುರ, ಸಂತೋಷ ಪೂಜಾರಿ, ಕಾರ್ಯದರ್ಶಿ ವಿಠ್ಠಲ ಪೂಜಾರಿ, ದೇವಾಲಯದ ಅರ್ಚಕರು, ಗುಡ್ಡಾಪುರ ಸುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ದೇವಸ್ಥಾನದ ವಾದ್ಯಮೇಳೊಂದಿಗೆ ಸುಮಂಗಲಿಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.

ಸಂತೋಷ ಶಿರಸಂಗಿ ಸ್ವಾಗತಿಸಿ ವಂದಿಸಿದರು. ರೂಪಾವಿ ಗಾಡವೆ ಡಾ. ಪ್ರತಾಪಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

ಹೊಸ ಪೋಸ್ಟ್‌