ಛತ್ರಪತಿ ಶಿವಾಜಿ ವೇಷದಲ್ಲಿ ಗಮನ ಸೆಳೆದ ಗುಮ್ಮಟ ನಗರಿಯ ಮಕ್ಕಳು

ವಿಜಯಪುರ: ಭಾರತದಲ್ಲಿ ಪುರಾತನ ಕಾಲದಿಂದಲೂ ಸಾವಿರಾರು ವೀರರು, ಯೋಧರು, ಸಾಹಸಿಗಳು ಗಮನ ಸೆಳೆದಿದ್ದಾರೆ. ಶಿಷ್ಠರ ರಕ್ಷಣೆಗಾಗಿ ಯುದ್ಧಗಳನ್ನೂ ಮಾಡಿದ್ದಾರೆ. ಖಡ್ಗ ಝಳಪಿಸಿ ವಿಜಯಶಾಲಿಯೂ ಆಗಿದ್ದಾರೆ. ಹಲವರು ಹುತಾತ್ಮರೂ ಆಗಿದ್ದಾರೆ. ಇಂಥ ಹೋರಾಟಗಾರರಲ್ಲಿ ಇಂದಿಗೂ ಜನಜನಿತರಾಗಿರುವವರು ಛತ್ರಪತಿ ಶಿವಾಜಿ.

ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಗಳಲ್ಲಿ ತಮ್ಮ ಕಾಲದಲ್ಲಿ ತಮ್ಮ ವೀರಗುಣಗಳಿಂದ ಗಮನ ಸೆಳೆದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯ್ನಾಡಿನ ರಕ್ಷಣೆಗಾಗಿ ಮೊಘಲರೊಂದಿಗೆ ಇವರು ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತೆಗೆದುಕೊಂಡಿದ್ದರು. ಇವರ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಎಲ್ಲರಿಗೂ ಇಂದಿಗೂ ಪ್ರೇರಣೆಯಾಗಿದೆ.

ಮರಾಠ ಮಹಾರಾಜ ಛತ್ರಪತಿ ಶಿವಾಜಿ ಅವರ ಜನ್ಮದಿನದ ಅಂಗವಾಗಿ ಗುಮ್ಮಟ ನಗರಿ ವಿಜಯಪುರದಲ್ಲಿ ಮಕ್ಕಳು ಶಿವಾಜಿ ಅವರ ವೇಷಭೂಷಣ ಧರಿಸಿದ ಮಕ್ಕಳು ಗಮನ ಸೆಳೆದರು.

ಮಹಾನ್ ಮರಾಠ ಯೋಧನ 392 ನೇ ಜಯಂತಿ ಅಂಗವಾಗಿ ವಿಜಯಪುರ ನಗರದ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸೊಸೈಟಿಯ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳು ವೀರ ಶಿವಾಜಿ ವೇಷ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಮಿಂಚಿ ಗಮನ ಸೆಳೆಯದರು.

ಶಾಲೆಯ ಆವರಣದಲ್ಲಿ ಶಿವಾಜಿ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಪೂಜೆ ಸಲ್ಲಿಸಿದರೇ, ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಾಜಿ ಗಾಯಕವಾಡ, ಶಿವಾಜಿ ಮಹಾರಾಜರ ವೀರಗಾಥೆ ವಿವರಿಸಿದರು. ಎಂಥದ್ದೆ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಸಂಭ್ರಮದಿಂದ ಪಾಲ್ಗೋಂಡರು. ಶಾಲೆಯಲ್ಲಿ ಶಿವಾಜಿ ಮಹಾರಾಜರ ರಂಗೋಲಿ ಬಿಡಿಸಿ, ಚಿತ್ರಕಲೆಯಲ್ಲಿ ಶಿವಾಜಿ ಮಹಾರಾಜರನ್ನು ಚಿತ್ರಿಸಿದ್ದರು. ಶಾಲೆಯಲ್ಲಿ ಬಲೂನ್ ಅಲಂಕಾರ ಮಾಡಲಾಗಿತ್ತು. ಶಿವಾಜಿ ವೇಷಧಾರಿ ಮಕ್ಕಳಿಗೆ ಶಾಲೆ ವತಿಯಿಂದ ಕಾಗದದಿಂದ ತಯಾರಿಸಿದ ಹೂವನ್ನು ನೀಡಿ, ಸಿಹಿ ತಿನ್ನಿಸುವ ಮೂಲಕ ಅಧ್ಯಕ್ಷ ಶಿವಾಜಿ ಗಾಯಕವಾಡ ಅಭಿನಂಧಿಸಿದರು.

ಈ ಸಂದರ್ಭದಲ್ಲಿ ಮದ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ವಸಂತ ಗಾಯಕವಾಡ, ಆಡಳಿತಾಧಿಕಾರಿ ರೀತಾ ಗಾಯಕವಾಡ, ಹಾಗೂ ಕಾಲೇಜಿನ ಪ್ರಿನ್ಸಿಪಲ್ ಜಯರಾಮ, ಶಿಕ್ಷಕರಾದ ವಿದ್ಯಾಧರ ಪಾಟೀಲ, ಗಜಾನನ, ಶಿವರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಯಂತಿ ಕಾರ್ಯಕ್ರಮದ ಬಳಿಕ ಎಲ್ಲ ಮಕ್ಕಳಿಗೆ ಅಲ್ಪೋಪಹಾರವನ್ನೂ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಮೀಸಲಾ ಗಿರಲಿಲ್ಲ. ಧರ್ಮ ಸಹಿಷ್ಣುವಾಗಿದ್ದರು. ತಮ್ಮ ಆಡಳಿತ ಅವಧಿಯಲ್ಲಿ ಹಿಂದೂಗಳು, ಮುಸ್ಲಿಂರನ್ನು ಸಮಾನವಾಗಿ ಕಾಣುತ್ತಿದ್ದರು. ಎಲ್ಲ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದರು ಎಂದು ಹಾಡಿ ಹೊಗಳಿದರು.

ಹಿಂದು ಸಾಮ್ರಾಜ್ಯದ ಕನಸು ಕಂಡ ಶಿವಾಜಿ ಮಹಾರಾಜರರ ಜಯಂತಿಯಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡು ಶಿವಾಜಿ ಮಹಾರಾಜರಂತೆ ದೇಶ ಕಾಯುವ ಒಬ್ಬ ಯೋಧರಾಗೋಣ ಎಂಬ ಸಂಕಲ್ಪ ತೊಟ್ಟರು.
ಈ ಮೂಲಕ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌