ಹರಿಹರದಲ್ಲಿ ತುಂಗಾ ಆರತಿ: ಉತ್ತಮ ಪ್ರವಾಸಿ, ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿ- ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ: ಹರಿಹರ(Harohara) ಕ್ಷೇತ್ರದ ತುಂಗಭದ್ರಾ(Tunga Bhadra) ನದಿ ತಟದಲ್ಲಿ 108 ಯೋಗ ಮಂಟಪಗಳನ್ನು ನಿರ್ಮಿಸಿ ಉತ್ತರದಲ್ಲಿ ಗಂಗಾ ಆರತಿ(Gangs Station) ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿಯನ್ನು ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದು ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಶ್ರೀ ವಚನಾನಂದ ಜಗದ್ಗುರುಗಳು ತುಂಗಾರತಿ ಕಾರ್ಯಕ್ರಮ ಏರ್ಪಡಿಸಲು ಸ್ವಚ್ಛತಾ ಕಾರ್ಯವನ್ನು ನಡೆಸಿ ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಪ್ರತಿನಿತ್ಯ ತುಂಗಭದ್ರೆಯ ಪೂಜೆ […]

ಗುಮ್ಮಟ ನಗರಿಯ ರಸ್ತೆಗಳಿಗೆ ಆದಿಲಶಾಹಿ ಬಾದಷಹರು, ಸೂಫಿ ಸಂತರು, ಇತರ ಮಹನೀಯರ ಹೆಸರಿಡಲು ದಿ ಬಿಜಾಪುರ ಹೆರಿಟೇಜ್ ಫೌಂಡೇಶನ್ ಆಗ್ರಹ

ವಿಜಯಪುರ: ವಿಜಯಪುರ ನಗರದ ಕೆಲವು ಮಾರ್ಗ ಮತ್ತು ವೃತ್ತಗಳಿಗೆ ಆದಿಲ್‍ಶಾಹಿ ದೊರೆಗಳ, ಸೂಫಿ ಸಂತರ ಹಾಗೂ ಇತರೆ ಮಹನೀಯರ ನಾಮಕರ ಮಾಡಬೇಕು ಎಂದು ಒತ್ತಾಯಿಸಿ ದಿ ಬಿಜಾಪುರ ಹೆರಿಟೇಜ್ ಪೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫೌಂಜೇಶನ್ ಸಂಸ್ಥಾಪಕ ಅನೀಸ ಮನೀಯಾರ ಮತ್ತು ಹಮ್ಜಾ ಮಹಿಬೂಬ, ವಿಜಯಪುರ ನಗರವು ಜಗತ್ತಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ.  ಇಲ್ಲಿ ಅನೇಕ ಮಹಾ ಪುರುಷರು, ಸಮಾಜ ಸುಧಾರಕರು ಹಾಗೂ ಐತಿಹಾಸಿಕ ವ್ಯಕ್ತಿಗಳು […]

ಜನಪದ ಕಲೆಗಳು ಜನರ ಜೀವನಾಡಿ-ಕೆಬಿಜೆಎನ್ಎಲ್ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

ವಿಜಯಪುರ: ಶ್ರಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ಜಾನಪದ ಕಲೆಗಳು ಗ್ರಾಮೀಣ ಜನರ ಅನುಭವದ ಭಾವಬಿಂಬಗಳಾಗಿವೆ. ಹಳ್ಳಿಗರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪದ ಕಲೆಗಳು ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟಿದ್ದಾರೆ.  ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ, ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿ ಗೌಡ್ತಿ ಪಾಟೀಲ್ ಜಾನಪದ ಪ್ರತಿಷ್ಠಾನ ಹಾಗೂ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಲಕ್ಷ್ಮೀದೇವಿ ಜಾತ್ರಾ […]

ಸ್ವಾತಂತ್ರ್ಯ ಮಹೋತ್ಸವ ಭಿತ್ತಿಚಿತ್ರ ಸ್ಪರ್ಧೆ- ನಾನಾ ಶಾಲೆಗಳ 40 ವಿದ್ಯಾರ್ಥಿಗಳು ಭಾಗಿ

ವಿಜಯಪುರ: ಇಂಟ್ಯಾಚ್ ವಿಜಯಪುರ ಚಾಪ್ಟರ್ ಮತ್ತು ವಿಜಯಪುರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ಮಹೋತ್ಸವ ಬಿತ್ತಿ ಚಿತ್ರ ಸ್ಪರ್ಧೆಯನ್ನು ಆಯೋಜಿಲಾಯಿತು.  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಸೋಮಶೇಖರ ವಾಲಿ ಮಾತನಾಡಿ, ಈಸ್ಟ ಇಂಡಿಯಾ ಕಂಪನಿ ಮೂಲಕ ಆಗಮಿಸಿದ್ದ ಬ್ರಿಟೀಷರು ಭಾರತಾದ್ಯಂತ ತಮ್ಮ ಪಾರುಪತ್ಯ ಸ್ಥಾಪಿಸಿ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ದಿದ್ದರು.  ಆದರೆ, ನಮ್ಮ ರಾಷ್ಟ್ರದ ನಾಯಕರು […]