ಸ್ವಾತಂತ್ರ್ಯ ಮಹೋತ್ಸವ ಭಿತ್ತಿಚಿತ್ರ ಸ್ಪರ್ಧೆ- ನಾನಾ ಶಾಲೆಗಳ 40 ವಿದ್ಯಾರ್ಥಿಗಳು ಭಾಗಿ

ವಿಜಯಪುರ: ಇಂಟ್ಯಾಚ್ ವಿಜಯಪುರ ಚಾಪ್ಟರ್ ಮತ್ತು ವಿಜಯಪುರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ಮಹೋತ್ಸವ ಬಿತ್ತಿ ಚಿತ್ರ ಸ್ಪರ್ಧೆಯನ್ನು ಆಯೋಜಿಲಾಯಿತು. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಸೋಮಶೇಖರ ವಾಲಿ ಮಾತನಾಡಿ, ಈಸ್ಟ ಇಂಡಿಯಾ ಕಂಪನಿ ಮೂಲಕ ಆಗಮಿಸಿದ್ದ ಬ್ರಿಟೀಷರು ಭಾರತಾದ್ಯಂತ ತಮ್ಮ ಪಾರುಪತ್ಯ ಸ್ಥಾಪಿಸಿ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ದಿದ್ದರು.  ಆದರೆ, ನಮ್ಮ ರಾಷ್ಟ್ರದ ನಾಯಕರು ಬ್ರಿಟೀಷರ ವಿರುದ್ಧ 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸ್ವರಾಜ್ಯವೇ ನನ್ಮ ಜನ್ಮ ಸಿದ್ಧ ಹಕ್ಕು ಎಂದು ಒಕ್ಕೊರಿಲಿನಿಂದ ಸತ್ಯಾಗ್ರಹ ಮಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.  ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಡಾ. ಎಂ. ಎಸ್. ಮದಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪ್ರೊ. ಎ. ಬಿ. ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು.  ಚೇತನಾ ಸಂಕೊಂಡ ವಂದಿಸಿದರು.  ನಾನಾ ಶಾಲೆಗಳ ಸುಮಾರು 40 ವಿದ್ಯಾರ್ಥಿಗಳು ಈ ಸ್ಫರ್ಧೆಗಾಗಿ ಭಾಗವಹಿಸಿದ್ದರು.

 

 

ಈ ಸಮಾರಂಭದಲ್ಲಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಶಿಕ್ಷಕರಾದ ಆನಂದ ಝಂಡೆ, ಎಂ. ಜಿ. ತೆಗ್ಗಿನಮಠ, ರಾಜು ಶಹಾಪುರ, ಸೋಮನಗೌಡ ಪಾಟೀಲ, ಸೌಮ್ಯ ಬಿ. ಪಾಟೀಲ, ಎಸ್.ಟಿ.ಕಡಲಸ್ಕರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌