ವಿಜಯಪುರ: ಸಚಿವ ಕೆ. ಎಸ್. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ನಗರದ ಡಾ. ಬಿ..ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತು ಮಾತನಾಡಿದ್ದು ದೇಶದ್ರೋಹದ ಕೆಲಸ. ಇದು ರಾಷ್ಟ್ರಕ್ಕೆ ಮಾಡಿದ ಅಪಮಾನ. ಕೋಟ್ಯಂತರ ಭಾರತೀಯರಿಗೂ ಅಪಮಾನ ಮಾಡಿದಂತೆ ಎಂದು ಆರೋಪಿಸಿದರು.
ಆರ್. ಎಸ್. ಎಸ್. ನವರ ಕುಮ್ಮಕ್ಕಿನಿಂದ ಬಿಜೆಪಿಯ ಸಚಿವರು, ಶಾಸಕರು ಪದೇ ಪದೇ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯಪಾಲರು ಕೂಡಲೇ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಪ್ರೊ. ರಾಜು ಆಲಗೂರ ಮುಖ್ಯಮಂತ್ರಿ ಮತ್ತು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ ಮಾತನಾಡಿ, ಸಚಿವ ಈಶ್ವರಪ್ಪ ಅವರ ಹೇಳಿಕೆ ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ಈ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ಬಲವಾಗಿ ಖಂಡಿಸುತ್ತದೆ. ತ್ರಿವರ್ಣ ಧ್ವಜವು ನಮ್ಮ ದೇಶದ ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಈಶ್ವರಪ್ಪ ಅವರ ಈ ಹೇಳಿಕೆಯಿಂದ ದೇಶದ ಪ್ರಜೆಗಳಿಗೆ ದಿಗ್ಬ್ರಮೆಯಾಗಿದೆ. ಅವರನ್ನು ಸಚಿವ ಸಂಪುಟದಿಂದ ತಕ್ಷಣವೇ ಕೈಬಿಡಬೇಕು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ ಮಾತನಾಡಿ, ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯಬೇಕು. ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಎಂದು ಆಗ್ರಹಿಸಿದತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹ್ಮದರಫೀಕ ಟಪಾಲ ಎಂಜಿನಿಯರ್, ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರವಿ ಬಿರಾದಾರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್. ಕಳ್ಳಿಮನಿ, ಸಾಹೇಬಗೌಡ ಬಿರಾದಾರ, ಶಿವಾನಂದಸ್ವಾಮಿ ಮಠ, ಭೀಮಾಶಂಕರ ಸಿ. ಸಾವುಕಾರ ಮುಂತಾದವರು ಖಂಡಿಸಿ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಭಾಸ ಕಾಲೇಬಾಗ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಆರತಿ ಶಹಾಪೂರ, ವಿದ್ಯಾವತಿ ಅಂಕಲಗಿ, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ, ಡಾ. ಗಂಗಾಧರ ಸಂಬಣ್ಣಿ, ಅಬ್ದುಲ್ ಖಾದರ ಖಾದಿಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗ ವಸಂತ ಹೊನಮೊಡೆ, ವಿಜಯಕುಮಾರ ಘಾಟಗೆ, ಹಾಜಿಲಾಲ ದಳವಾಯಿ, ಈರಪ್ಪ ಜಕ್ಕಣ್ಣವರ, ತಮ್ಮಣ್ಣ ಮೇಲಿನಕೇರಿ, ಇಲಿಯಾಸ ಬಗಲಿ, ಶರಣಪ್ಪ ಯಕ್ಕುಂಡಿ, ಡಿ.ಎಚ್. ಕಲಾಲ, ಎಸ್. ಎಂ. ದುಂಡಸಿ, ಕಿಸಾನ ಘಟಕದ ಜಿಲ್ಲಾ ಅಧ್ಯಕ್ಷ ಬಾಪುಗೌಡ ಪಾಟೀಲ, ಜಯಶ್ರೀ ಭಾರತೆ, ಇರ್ಫಾನ ಶೇಖ, ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರಗಳಾದ ಮೈನುದ್ದೀನ ಬೀಳಗಿ, ಎ. ಎ. ಹೊರ್ತಿ, ಇದ್ರುಸಪಾಶಾ ಭಕ್ಷಿ, ಶಫೀಕ ಬಗದಾದಿ, ಅಕ್ಬರ ನಾಯಕ, ಅಶ್ಪಾಕ್ ಎನ್. ಮನಗೂಳಿ, ಅಬಿದ ಎ. ಸಂಗಮ, ಫಿರೋಜ ಶೇಖ, ಎಂ. ಆರ್. ಪಾಟೀಲ, ಎಂ. ಎಸ್. ಜಾಧವ, ಮುಖ್ತಾರಅಲಿ ನದಾಪ್, ದೀಪಾ ಕುಂಬಾರ, ಆಸ್ಮಾ ಕಾಲೇಬಾಗ, ಸುತಾಜಾ ಸಿಂಧೆ, ಸಮೀಮಾ ಅಕ್ಕಲಕೋಟ, ಭಾರತಿ ಹೊಸಮನಿ, ಹಮಿದಾ ಪಟೇಲ, ಸಂಜನಾ ಬಜಂತ್ರಿ, ಎಂ. ಎ. ಬಕ್ಷಿ, ವಿಜಯಕುಮಾರ ಪಡಗಾನೂರ, ಮಲ್ಲಿಕಾರ್ಜುನ ಪರಸಣ್ಣವರ, ಧನರಾಜ ಎ., ರಜಾಕ ಕಾಖಂಡಕಿ, ಬಾಬುಸಾಬ ಯಾಳವಾರ, ಗೂಡುಸಾಬ ತೊರಗಲ, ಮಂಜುನಾಥ ನಿಡೋಣಿ, ಮಿರಾಸಾಬ ಮುಲ್ಲಾ, ನಿಂಗಪ್ಪ ಸಂಗಾಪೂರ, ಫಿರೋಜ ಬಳಬಟ್ಟಿ, ಸತೀಶ ಕಾಂಬಳೆ, ಬಂದೇನವಾಜ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.