ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯ ವೈಖರಿಗೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ ಹಂಜೆ ಶ್ಲಾಘನೆ

ವಿಜಯಪುರ:  ಬಿ ಎಲ್ ಡಿ ಇ(BLDE) ಸಂಸ್ಥೆಯ ವಚನಪಿತಾಮಹ ಡಾ. ಫ.ಗು.ಹಳಕಟ್ಟಿ(Halakatti) ಸಂಶೋಧನ ಕೇಂದ್ರ(Research Centre) ಇತರರಿಗೆ ಮಾದರಿಯಾಗಿದೆ(Model) ಎಂದು ಕನ್ನಡ(Kannada) ಪುಸ್ತಕ ಪಾಧಿಕಾರದ ಅಧ್ಯಕ್ಷ ಡಾ. ನಂದೀಶ ಹಂಜೆ ಶ್ಲಾಘಿಸಿದ್ದಾರೆ.


ಸೋಮವಾರ ರಾತ್ರಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಂಶೋಧನ ಕೇಂದ್ರ ಮತ್ತು ವಾಚನಾಲಯದಲ್ಲಿ ಸುಮಾರು ಒಂದು ಗಂಟೆ ಕಾಲ ಕುಳಿತುಕೊಂಡು ಸಮಗ್ರ ಮಾಹಿತಿ ಪಡೆದರು. ಅಲ್ಲದೇ ಇಲ್ಲಿರುವ ವ್ಯವಸ್ಥೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇದೊಂದು ವಿಶ್ವವಿದ್ಯಾಲಯ ಮಟ್ಟದ ಸಂಸ್ಥೆಯಾಗಿದೆ. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದವರು   ಡಾ. ಫ. ಗು. ಹಳಕಟ್ಟಿಯವರು ಸ್ಮರಣೀಯರು. ಇಲ್ಲಿ ಶಿಸ್ತು, ಅಧ್ಯಯನ ವ್ಯಾಪ್ತಿ ಮತ್ತು ಪರಿಸರ ಉತ್ತಮವಾಗಿದ್ದು ಇಲ್ಲಿಯ ಗ್ರಂಥಗಳ ಸಂಗ್ರಹ, ಅವುಗಳ ವರ್ಗೀಕರಣ, ಜೋಡಣೆ ಎಲ್ಲವೂ ಶಾಸ್ತ್ರಿಯವಾಗಿವೆ. ಇದೊಂದು ಮಾದರಿ ಸಂಶೋಧನ ಕೇಂದ್ರ ಎಂದು ನಂದೀಶ ಹಂಜಿ ಪ್ರಶಂಶಿಸಿದರು.

ಈ ಸಂದರ್ಭದಲ್ಲಿ ಡಾ. ನಂದೀಶ ಹಂಜೆ ಅವರನ್ನು ಹಳಕಟ್ಟಿ ಸಂಶೋಧನೆ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಲಮಟ್ಟಿ ಪುರವರ ಹಿರೇಮಠದ ರುದ್ರಮುನಿ ಮಹಾಸ್ವಾಮಿಗಳು, ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ, ಸಂಯೋಜನಾಧಿಕಾರಿ ಡಾ. ವಿ.ಡಿ.ಐಹೊಳ್ಳಿ ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌