ಬಬಲೇಶ್ವರ ತಾಲೂಕಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ

ವಿಜಯಪುರ: ಬಬಲೇಶ್ವರ ತಾಲೂಕಗಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ ವಿಜಯಪುರ ನಗರದ ಸ್ಟೇಶನ ರಸ್ತೆಯಲ್ಲಿರುವ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆಯಿತು. 

ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಾಡಿನಲ್ಲಿ ಸರಳತೆ, ಸೌಮ್ಯ, ಶಿಸ್ತಿನಿಂದ ದಿನನಿತ್ಯ ಸ್ವಪ್ರಯತ್ನದೊಂದಿಗೆ ಉದ್ಯೋಗ ಜೊತೆಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಬಣಜಿಗ ಸಮಾಜದ ಜನತೆ ಎಲ್ಲ ಸಮುದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಹೇಳಿದರು.

ಶತಮಾನಗಳ ಹಿಂದೆ ನಮ್ಮ ಪೂರ್ವಜರ ತಪಸ್ಸಿನ ಫಲದಿಂದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ, ಕಲಬುರಗಿ ಶರಣ ಬಸವೇಶ್ವರರು, 12ನೇ ಶತಮಾನದಲ್ಲಿ ಆಗಿಹೋದ ಅಕ್ಕಮಹಾದೇವಿ ದೈವಸ್ವರೂಪಿಯಾಗಿದ್ದರು.  ಸಾಹಿತ್ಯ ಲೋಕದಲ್ಲಿ ಸಾಹಿತಿಗಳಾಗಿ ಮತ್ತು ಜನ ಸೇವೆಯ ಮೂಲಕ ದೇಶದ ಚುಕ್ಕಾಣಿ ಹಿಡಿದು ರಾಜ್ಯ, ಹಳ್ಳಿ ಹಳ್ಳಿಗಳಲ್ಲಿ ಜನನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಎಂದು ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಸಮಾಜದ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಮ್ಮ ಜೋಗುರ, ಉಮೇಶ ಮಲ್ಲನ್ನವರ, ರವಿ ಕುಮಟಗಿ, ಮುತ್ತು ಕಿಣಗಿ, ಸಂಗಪ್ಪ ಬಣಜಿಗರ, ಅಶೋಕ ಗುಡದಿನ್ನಿ,.ಈಶ್ವರಪ್ಪ ಕೋರಿ ನಾನಾ ಗ್ರಾಮಗಳ ಬಣಜಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಸಮಾಜ ಸೇವಕ ಅಶೋಕ ಶಿವಪ್ಪ ತಿಮಶೆಟ್ಟಿ(ಕಾಖಂಡಕಿ) ಕಾರ್ಯಕ್ರಮ ನಡೆಸಿಕೊಟ್ಟರು  ವಿನಯ ಗುದ್ದೊಡಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

ಹೊಸ ಪೋಸ್ಟ್‌