ಯುಕ್ರೇನ್ ಯುದ್ಧ ಹಿನ್ನೆಲೆ- ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆದ ವಿಜಯಪುರ ಜಿಲ್ಲಾಡಳಿತ
ವಿಜಯಪುರ: ಯುಕ್ರೆನ್ ವಿರುದ್ಧ ರಷ್ಯಾ ಯುದ್ಧ ಸಾರಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಉಕ್ರೇನ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ವಾಸವಾಗಿರುವ ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಭಾರತದ ಪ್ರಜೆಗಳ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ಉಕ್ರೇನ್ ನಲ್ಲಿ ವಾಸವಿರುವ ವಿಜಯಪುರ ಜನರ ಮಾಹಿತಿಯನ್ನು ನೀಡಲು ಮತ್ತು ಪಡೆಯಲು ವಿಜಯಪುರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ. ಕಂಟ್ರೋಲ್ ರೂಂ.ಸಂಖ್ಯೆ-1077 ಮತ್ತು 08352-221261 ಹಾಗೂ ರಾಕೇಶ್ ಜೈನಾಪುರ ಅವರ ಮೊಬೈಲ್ – […]
ಮೊಬೈಲ್ ಟವರ್‌ಗಳಿಂದ ಅಪಾಯಕಾರಿ ವಿಕಿರಣ ಹೊರಹೊಮುತ್ತದೆ ಎನ್ನುವುದು ತಪ್ಪು ಕಲ್ಪನೆ: ರಾಕೇಶಕುಮಾರ ದುಬೆ
ಬೆಂಗಳೂರು: ನಗರದ ಎಲ್ಲಾ ಮೊಬೈಲ್ ಟವರ್‌ಗಳು ದೂರ ಸಂಪರ್ಕ ಇಲಾಖೆ ನಿಯಮಗಳಿಗೆ ಒಳಪಟ್ಟಿದ್ದು, ಯಾವ ಟವರ್‌ಗಳೂ ಅಪಾಯಕಾರಿ ವಿಕಿರಣ ಹೊರಸೂಸುತ್ತಿಲ್ಲ ಎಂದು ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ(ಎಲ್‌ಎಸ್‌ಎ) ಸಲಹೆಗಾರರಾದ ರಾಕೇಶ ಕುಮಾರ ದುಬೆ ತಿಳಿಸಿದ್ದಾರೆ. ಕೇಂದ್ರ ದೂರ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ(ಎಲ್‌ಎಸ್‌ಎ) ಬೆಂಗಳೂರಿನಲ್ಲಿ ಸೆಕ್ಯೂಲಾರ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳ ಬಗ್ಗೆ ತಪ್ಪು ತಿಳುವಳಿಕೆಯ ಕುರಿತು ಜಾಗೃತಿ ನೀಡುವ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ರಾಕೇಶ ಕುಮಾರ, ಬಹುತೇಕರಲ್ಲಿ ಮೊಬೈಲ್ […]
ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಸೂಕ್ತ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಉಕ್ರೇನ್(Ukrain) ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು(Karnataka Students) ಸುರಕ್ಷಿತವಾಗಿ ತಾಯ್ನಾಡಿಗೆotherland) ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ(CM) ಬಸವರಾಜ ಬೊಮ್ಮಾಯಿ(Basavaraj Bommayi) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ. ರಷ್ಯಾ(Russia) ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸುಮಾರು ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದ್ದರಿಂದ 100 ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ೧೦ ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ […]
ಮಾಳಿ-ಮಾಲಗಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ರೂ.100 ಕೋ. ಅನುದಾನ ಮೀಸಲಿಡಿ- ಶಾಸಕ ಯಶವಂತರಾಯಗೌಡ ಪಾಟೀಲ ಸಿಎಂ ಗೆ ಮನವಿ
ವಿಜಯಪುರ: ಬಜೆಟ್ ನಲ್ಲಿ ಮಾಳಿ-ಮಾಲಗಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ರೂ. 100 ಕೋ. ಹಣ ಮೀಸಲಿಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರವನ್ನು ಬರೆದಿರುವ ಅವರು, ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಮಾಳಿ-ಮಾಲಗಾರ ಸಮುದಾಯದವರಿದ್ದಾರೆ. ಈ ಸಮುದಾಯ ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಈ ಸಮಾಜ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ […]