ಬೆಂಗಳೂರು: ನಗರದ ಎಲ್ಲಾ ಮೊಬೈಲ್ ಟವರ್‌ಗಳು ದೂರ ಸಂಪರ್ಕ ಇಲಾಖೆ ನಿಯಮಗಳಿಗೆ ಒಳಪಟ್ಟಿದ್ದು, ಯಾವ ಟವರ್‌ಗಳೂ ಅಪಾಯಕಾರಿ ವಿಕಿರಣ ಹೊರಸೂಸುತ್ತಿಲ್ಲ ಎಂದು ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ(ಎಲ್‌ಎಸ್‌ಎ) ಸಲಹೆಗಾರರಾದ ರಾಕೇಶ ಕುಮಾರ ದುಬೆ ತಿಳಿಸಿದ್ದಾರೆ.
ಕೇಂದ್ರ ದೂರ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ(ಎಲ್‌ಎಸ್‌ಎ) ಬೆಂಗಳೂರಿನಲ್ಲಿ ಸೆಕ್ಯೂಲಾರ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳ ಬಗ್ಗೆ ತಪ್ಪು ತಿಳುವಳಿಕೆಯ ಕುರಿತು ಜಾಗೃತಿ ನೀಡುವ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ರಾಕೇಶ ಕುಮಾರ, ಬಹುತೇಕರಲ್ಲಿ ಮೊಬೈಲ್ ಟವರ್ ಕುರಿತು ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಮೊಬೈಲ್ ಟವರಗಳಿಂದ ಅಪಾಯಕಾರಿ ವಿಕಿರಣ ಬಿಡುಗಡೆಯಾಗಲಿದ್ದು, ಇದು ಮೆದುಳು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎನ್ನುವ ತಪ್ಪು ಮನವರಿಕೆ ಇದೆ. ಆದರೆ, ಕರ್ನಾಟಕದಲ್ಲಿ ನಿರ್ಮಿಸಿರುವ ಎಲ್ಲಾ ಮೊಬೈಲ್ ಟವರ್‌ಗಳು ಸುರಕ್ಷಿತ. ಅದ್ದರಿಂದ ಬಿಡುಗಡೆಯಾಗುವ ವಿಕಿರಣಗಳು ಯಾವುದೇ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿಲ್ಲ. ಡಿಒಟಿಯು ದೇಶಾದ್ಯಂತ ಟವರ್‌ಗಳಿಂದ ಹೊರಹೊಮ್ಮುವ ಇಎಂಎಫ್‌ನನ್ನು ಗಮನಿಸುತ್ತದೆ. ಟವರ್ ನಿರ್ಮಾಣದ ಮೊದಲು ಸುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಸೂಕ್ತ ಬೌದ್ಧಿಕ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. 2021 ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೆ ಕರ್ನಾಟಕದ ಎಲ್ಲಾ ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ 5803 ಬಿಟಿಎಸ್‌ಗಳನ್ನು ಪರೀಕ್ಷಿಸಿದ್ದು, ಇದು ದೂರ ಸಂಪರ್ಕ ಇಲಾಖೆಯ ನಿಮಯಗಳಿಗೆ ಅನುಗುಣವಾಗಿಯೇ ಇವೆ. ಯಾವುದೇ ಅಪಾಯಕಾರಿಕ ವಿಕಿರಣ ಬಿಡುಗಡೆಯಾಗುತ್ತಿಲ್ಲ ಎಂದು ರಾಕೇಶಕುಮಾರ ದುಬೆ ಸ್ಪಷ್ಟಪಡಿಸಿದರು.
ಎಐಐಎಂಎಸ್ ಅಸೋಸಿಯೇಟ್ ಪ್ರೊಫೆಸರ್ ಡಾ. ವಿವೇಕ ಟಂಡನ ಮಾತನಾಡಿ, ಮೊಬೈಲ್ ಟವರ್ ಕುರಿತು ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ ಅನಗತ್ಯ ಸಮಸ್ಯೆ ಸೃಷ್ಟಿಯಾಗಿದೆ. ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ ವಿಕಿರಣಗಳು ಕಡಿಮೆ ಶಕ್ತಿಯ ನಾನ್ ಅಯೊನೈಸಿಂಗ್ ರೇಡಿಯೇಷನ್‌ಗಳನ್ನು ಹೊರಸೂಸುತ್ತವೆ. ಇದು ಮನುಷ್ಯನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ವಿಕಿರಣವಾಗಿದ್ದು, ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದು ಎಂದು ಹೇಳಿದರು.
ಮೊಬೈಲ್ ಟವರ್‌ಗಳ ಇಎಂಎಫ್ ವಿಕಿರಣಗಳು ಹೊರಹೊಮ್ಮುವದ ಮೇಲೆ ಕಠಿಣ ಮೇಲ್ಪಚಾರಣೆ ಇರಲಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಹೈಕೋರ್ಟ್ ಈ ದೃಷ್ಟಿ ಲಕೋನವನ್ನು ಎತ್ತಿ ಹಿಡಿದೆವೆ. ಹೀಗಾಗಿ ಮೊಬೈಲ್ ಟವರ್‌ಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಹೇಳಿದರು. ಮೊಬೈಲ್ ಟವರ್‌ನಿಂದ ಹೊರಸೂಸುವ ವಿಕಿರಣಗಳ ಕುರಿತು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಪರೀಕ್ಷಿಸಬಹುದು ವಿವೇಕ ಟಂಡನ ಹೇಳಿದರು.