ಉಕ್ರೇನ್ ನಲ್ಲಿ ಬಸವ ನಾಡಿನ 24ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟ- ಪೋಷಕರಲ್ಲಿ ಧರ್ಮಸಂಕಟ

ಮಹೇಶ ವಿ. ಶಟಗಾರ

ವಿಜಯಪುರ: ಯುಕ್ರೇನ್Ukrain) ಮೇಲೆ ರಷ್ಯಾ ಸಮರ(Russia War) ಸಾರಿರುವ ಹಿನ್ನಲೆಯಲ್ಲಿ ಯುಕ್ರೇನ್ ಈಶಾನ್ಯ(East Ukrain) ಭಾಗದಲ್ಲಿ ವಿಜಯಪುರದ ಹಲವಾರು ವಿದ್ಯಾರ್ಥಿಗಳು(Vijayapura Students)ಸಿಲುಕಿಕೊಂಡಿದ್ದಾರೆ.(Stranded)ಬಾಂಬ್ ಸ್ಪೋಟಗಳ ಶಬ್ದದ ನಡುವೆ ಈ ವಿದ್ಯಾರ್ಥಿಗಳು ಆತಂಕ ಎದುರಿಸುತ್ತಿದ್ದಾರೆ 

ವಿಜಯಪುರ ಜಿಲ್ಲೆಯ ವಿವಿಧಾ ಮಲ್ಲಿಕಾರ್ಜುನಮಠ, ಅಮನ ಮಮದಾಪುರ ಸೇರಿದಂತೆ ಸುಮಾರು 24 ಹೆಚ್ಚು ವಿದ್ಯಾರ್ಥಿಗಳು ನಾನಾ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.  ಈ ಕುರಿತು ಕೆ ಎಸ್ ಎನ್ ಎಂ ಡಿ ಸಿ ರಾಜ್ಯದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡಿದೆ.

ಉಕ್ರೇಸ್ ಈಶಾನ್ಯದಲ್ಲಿರುವ ಕಾರ್ಖಿವ್ ನಗರವನ್ನು ರಷ್ಯಾ ಸೇನೆ ನಾಲ್ಕೂ ದಿಕ್ಕುಗಳಿಂದ ಸುತ್ತುವರೆದಿದ್ದು, ತುಂಬ ಭಯವಾಗಿದೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ಕೈಯಲ್ಲಿ ಜೀವ ಹಿಡಿದುಕೊಂಡು ಪ್ರಯಿಕ್ಷಣ ಕಳೆಯುವಂತಾಗಿದೆ ಎಂದು ಎಂಬಿಬಿಎಸ್ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬಸವ ನಾಡು ಜೊತೆ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿ ಯುದ್ಧ ನಡೆಯುತ್ತಿರುವುದರಿಂದ ಮನೆಯ ಒಳಗಡೆ ಇರುವಂತೆ ಹೇಳಿದ್ದಾರೆ. ನಮ್ಮ ಬಳಿ ಇರುವ ಆಹಾರ ಪದಾರ್ಥಗಳು ಒಂದೆರಡು ದಿನಗಳಲ್ಲಿ ಖಾಲಿಯಾಗಲಿವೆ. ನಾವೀಗ ಕಾರ್ಖಿವ್ ನಗರದ ಮೆಟ್ರೋ ರೇಲ್ವೆ ಸ್ಟೇಷನ್ ನಲ್ಲಿ ಆಶ್ರಯ ಪಡೆದಿದ್ದೇವೆ. ಇಂಟರನೆಟ್ ಕೀಡ ತುಂಬಾ ನಿಧಾನವಾಗಿದೆ. ವಾಟ್ಸಾಪ್ ಕಾಲ್ ಮಾಡಲೂ ಕೂಡ ಕಷ್ಟವಾಗುತ್ತಿದೆ. ಡಾಕ್ಟರ್ ಆಗಲು ಇಲ್ಲಿಗೆ ಬಂದಿದ್ದೇನೆ. ಆದರೆ, ಈಗಿನ ಪರಿಸ್ಥಿತಿ ಯಾರಿಗೂ ಬೇಡ. ಬಯಸಿದ್ದು ಒಂದು. ಆಗುತ್ತಿರುವುದು ಮತ್ತೋಂದು. ಅಪ್ಪ, ಅಮ್ಮ, ತಮ್ಮನ ಜೊತೆ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಅಮ್ಮ ಬೆಂಗಳೂರಿನಲ್ಲಿದ್ದಾರೆ. ಅಪ್ಪ ವಿಜಯಪುರದಲ್ಲಿದ್ದಾರೆ. ಕಾಲ್ ಕನೆಕ್ಟ್ ಆದಾಗ ಅವರ ಜೊತೆ ಮಾತನಾಡಲು ಶಬ್ದಗಳು ಬೇಗನೆ ಬರುತ್ತಿಲ್ಲ. ಮನನ ನಮ್ಮನ್ನು ಆದಷ್ಟು ಬೇಗ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ವಿವಿಧಾ ಮಲ್ಲಿಕಾರ್ಜುನಮಠ ಮನವಿ ಮಾಡಿದ್ದಾರೆ.

ವಿಜಯಪುರದ ಪತ್ರಕರ್ತ ಅಲ್ಲಮಪ್ರಭು ಜಿ. ಮಲ್ಲಿಕಾರ್ಜುನಮಠ ಅವರ ಹಿರಿಯ ಮಗಳು ವಿವಿಧಾ ಮಲ್ಲಿಕಾರ್ಜುನಮಠ ಕಥೆ ಇದು. ಸರಕಾರ ಇಂಥ ಪರಿಸ್ಥಿತಿಗಳಲ್ಲಿ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳ ಮಕ್ಕಳ ರಕ್ಷಣೆಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆಯೋ ಅದೇ ರೀತಿ ನಮ್ಮ‌ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲಿ ಎಂದು ಅಲ್ಲಮಪ್ರಭು ಜಿ. ಮಲ್ಲಿಕಾರ್ಜುನಮಠ ಮನವಿ ಮಾಡಿದ್ದಾರೆ.

ಇನ್ನು ವಿಜಯಪುರ ನಗರದ ಆದರ್ಶ ನಗರ ನಿವಾಸಿ ಅಮನ ಮಮದಾಪುರ ಕಥೆಯೂ ಭಿನ್ನವಾಗಿಲ್ಲ. ಇನ್ನೇನು‌ ಒಂದೆರಡು ವರ್ಷಗಳಲ್ಲಿ ಎಂಬಿಬಿಎಸ್ ಪದವಿ ಪಡೆಯುತ್ತಿದ್ದೆ. ಈಗ ಯುದ್ಧ ಶುರಿವಾಗಿದೆ. ಮಾ. 2ಕ್ಕೆ ನಾನು ಭಾರತಕ್ಕೆ ಬರಲು ವಿಮಾನ ಟಿಕೇಟ್ ಬುಕ್ ಆಗಿತ್ತು. ಆದರೆ, ಈಗ ಇಲ್ಲಿ ವಿಮಾನಯಾನ ನಿರ್ಬಂಧಿಸಲಾಗಿದೆ. ನಾನು ನನ್ನ ವಿಜಯಪುರದ ಸಹಪಾಠಿಗಳೊಂದಿಗೆ ಕಾರ್ಖಿವ್ ಮೆಟ್ರೋ ರೇಲ್ವೆ ಸ್ಟಷನ್ ನಲ್ಲಿ ರಕ್ಷಣೆ ಪಡೆದಿದ್ದೇನೆ. ನಮ್ಮನ್ನು ಆದಷ್ಟು ಬೇಗ ಏರಲಿಫ್ಟ್ ಮಾಡಿ ಎಂದು ಅಮನ ಮಮದಾಪುರ ಆಗ್ರಹಿಸಿದ್ದಾರೆ.

ಮಗನ ಜೊತೆ ಸಂಪರ್ಕದಲ್ಲಿದ್ದೇನೆ. ಇಬ್ಬರು ಅವಳಿ ಮಕ್ಕಳಲ್ಲಿ‌ ಅಮನ್ ಎಂಬಿಬಿಎಸ್ ಓದಲಿ ಎಂದು ಉಕ್ರೇನ್ ಗೆ ಕಳುಹಿಸಿದ್ದೆ. ಈಗ ಪರಿಸ್ಥಿತಿ ಹೀಗಾಗಿದೆ. ನಮ್ಮ ಮಗ ಸೇರಿದಂತೆ ಉಕ್ರೇನ್ ನಲ್ಲಿರುವ ಎಲ್ಲ ಭಾರತೀಯರನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆತನ್ನಿ ಎಂದು ಅಮನ ಮಮದಾಪುರ ಅವರ ತಂದೆ ಮತ್ತು ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಬ್ಯಾಂಕ್ ಉದ್ಯೋಗಿ ಧರ್ಮರಾಯ ಮಮದಾಪುರ ಆಗ್ರಹಿಸಿದ್ದಾರೆ.

ಅತ್ತ ಉಕ್ರೇನಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯುದ್ಧದಲ್ಲಿ ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇತ್ತ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಪೋಷಕರು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಸುರಕ್ಷತೆಯ ಚಿಂತೆಯಲ್ಲಿ ಕಾಲಕಳೆಯುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌