ಉಕ್ರೇನ್ ಯುದ್ಧದ ಕಾರ್ಮೋಡದಿಂದ ಬಚಾವಾಗಿ ಬಂದ ಬಸವ ನಾಡಿನ ವಿದ್ಯಾರ್ಥಿನಿ ಸ್ನೇಹಾ ಪಾಟೀಲ

ವಿಜಯಪುರ: ಬಸವ ನಾಡು ವಿಜಯಪುರದ ವಿದ್ಯಾರ್ಥಿನಿಯೊಬ್ಬಳು ಉಕ್ರೇನ್ ಯುದ್ಧದ ಕಾರ್ಮೋಡದಿಂದ ಬಚಾವಾಗಿ ಬಂದು ತಾಯ್ನಾಡು ಸೇರಿದ್ದಾಳೆ. ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಯುದ್ಧ ಇಡೀ ಜಗತ್ತಿನ್ನು ಆತಂಕಕ್ಕೆ ದೂಡಿದೆ. ಈ ಮಧ್ಯೆ ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಇಂಥ ಸಂಕಷ್ಟಗಳ ಮಧ್ಯೆ ಎಂಬಿಬಿಎಸ್ ಕಲಿಯಲು ಉಕ್ರೇನಿಗೆ ತೆರಳಿದ್ದ ಬಸವ ನಾಡಿನ ವಿದ್ಯಾರ್ಥಿನಿ ಸ್ನೇಹಾ ಪಾಟೀಲ ಸುರಕ್ಷಿತವಾಗಿ ವಿಜಯಪುರಕ್ಜೆ ವಾಪಸ್ಸಾಗಿದ್ದು, ಉಕ್ರೇನಿನಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾಳೆ. ವಿಜಯಪುರ ನಗರದ ಐಶ್ವರ್ಯ ನಗರ ನಿವಾಸಿ ಸ್ನೇಹಾ […]

ಉಕ್ರೇನಿನಿಂದ ಬರುವ ಕನ್ನಡಿಗರನ್ನು ಅವರವರ ಊರುಗಳಿಗೆ ಕಳುಹಿಸಲು ನೆರವು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಂಬೈ ಅಥವಾ ದಿಲ್ಲಿಗೆ ರಾತ್ರಿ ಉಕ್ರೇನಿನಿಂದ ಆಗಮಿಸಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆ ತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೂ ಉಕ್ರೇನಿನಿಂದ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ನನಡೆಸಿರುವ ಯುದ್ಧದಲ್ಲಿ ಉಕ್ರೇನಿನಿಂದ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ಶುಕ್ರವಾರ ಕೇಂದ್ರ ವಿದೇಶಾಂಗ […]