ಬರಡೋಲ ಗ್ರಾಮದ ಪ್ರಗತಿಗೆ ಮುನ್ನುಡಿ ಬರೆದಿರುವೆ- ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ
ವಿಜಯಪುರ: ಬರಡೋಲ(Baradol) ಗ್ರಾಮದ ಪ್ರಗತಿಗೆ ಗ್ರಾಮಸ್ಥರ ಆಶೀರ್ವಾದದಿಂದ ಮುನ್ನುಡಿ ಬರೆದಿರುವೆ ಎಂದು ನಾಗಠಾಣ(ಮೀ) ಜೆಡಿಎಸ್(JDS) ಶಾಸಕ ಡಾ. ದೇವಾನಂದ ಚವ್ಹಾಣ(Dr. Devanand Chavan) ಹೇಳಿದ್ದಾರೆ. ವಿಜಯಪುರ(Vijayapura) ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ(Public School) ಆವರಣದಲ್ಲಿ 2020-21 ನೇ ಆರ್ಥಿಕ ವರ್ಷದ ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅಂದಾಜು ರೂ. 2 ಕೋ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು […]
ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಿ- ಶಾಸಕ ಬಸನಗೌಡ ಪಾಟೀಲ
ವಿಜಯಪುರ:ವಿಜಯಪುರ(Vijayapura) ನಗರದ ಡೋಬಳಿ ಗಲ್ಲಿಯಲ್ಲಿರುವ ಮರಾಠ(Maratha) ಸಂಸ್ಕೃತಿ ಭವನದಲ್ಲಿ(Cultural Bhavan) ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ(National Pulse Polio Programme) ನಡೆಯಿತು. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Yatnal) ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾರತ ಈಗಾಗಲೇ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ. ಕೋವಿಡ್ ಲಸಿಕಾಕರಣದಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿರುವ ಐದು […]
ಕೆಳದಿ ರಾಣಿ ಚೆನ್ನಮ್ಮಳ ಪಟ್ಟಾಭಿಷೇಕದ 350ನೇ ವರ್ಷಾಚರಣೆ- ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಪುಷ್ಪನಮನ
ಬೆಂಗಳೂರು: ಕೆಳದಿ ರಾಣಿ ಚೆನ್ನಮ್ಮಳ ಪಟ್ಟಾಭಿಷೇಕದ 350 ನೇ ವರ್ಷಾಚರಣೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಳದಿ ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಮತ್ತು ಪಂಚಮಸಾಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಹಾರ ಖಾಲಿಯಾಗ್ತಿದೆ- ಮೊಬೈಲ್ ಡಾಟಾ ಸಿಗುತ್ತಿಲ್ಲ- ಉಷ್ಣಾಂಶ ಮೈನಸ್ 2 ಡಿಗ್ರಿಯಿದೆ- ಬೇಗ ನಮ್ಮನ್ನು ರಕ್ಷಿಸಿ- ಪೂರ್ವ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಅಳಲು
ಮಹೇಶ ವಿ. ಶಟಗಾರ ವಿಜಯಪುರ: ಮೊಬೈಲ್ ಡಾಟಾ ಖಾಲಿಯಾಗುತ್ತಿದೆ. ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಮೊಬೈಲ್ ಮೂಲಕ ಮಾತನಾಡಲೂ ಕೂಡ ಕಷ್ಟವಾಗುತ್ತಿದೆ. ಸಿಕ್ಕಾಪಟ್ಟೆ ಛಳಿಯಿದೆ. ಮೈನಸ್ 2 ಡಿಗ್ರಿ ಉಷ್ಣಾಂಶವಿದೆ. ಸಂಗ್ರಹವಾಗಿರುವ ಆಹಾರ ಪದಾರ್ಥಗಳೂ ಮುಗಿಯುತ್ತಿವೆ. ವಾಶ್ ರೂಂ ನಲ್ಲಿ ನೀರು ಬಂದ್ ಆಗಿದೆ. ಹೊರಗಡೆ ಹೋಗುವಂತಿಲ್ಲ. ಸದಾ ಬಾಂಬ್ ಶಬ್ದಗಳೊಂದಿಗೆ ಕಾಲ ಕಳೆಯುವಂತಾಗಿದೆ. ಇದು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿ ಅತಂತ್ರರಾಗಿರುವ ಕರ್ನಾಟಕದ ವಿದ್ಯಾರ್ಥಿಗಳ ಗೋಳು. ಈಗ ಉಕ್ರೇನಿನಲ್ಲಿ ಅತಂತ್ರರಾಗಿರುವ ವೈದ್ಯ ವಿದ್ಯಾರ್ಥಿಗಳಿಗೆ ಬದುಕಲು ಆಹಾರ ಬೇಕು. ಸಂಪರ್ಕಕ್ಕಾಗಿ […]