ಬರಡೋಲ ಗ್ರಾಮದ ಪ್ರಗತಿಗೆ ಮುನ್ನುಡಿ ಬರೆದಿರುವೆ- ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಬರಡೋಲ(Baradol) ಗ್ರಾಮದ ಪ್ರಗತಿಗೆ ಗ್ರಾಮಸ್ಥರ ಆಶೀರ್ವಾದದಿಂದ ಮುನ್ನುಡಿ ಬರೆದಿರುವೆ ಎಂದು ನಾಗಠಾಣ(ಮೀ) ಜೆಡಿಎಸ್(JDS) ಶಾಸಕ ಡಾ. ದೇವಾನಂದ ಚವ್ಹಾಣ(Dr. Devanand Chavan) ಹೇಳಿದ್ದಾರೆ.

ವಿಜಯಪುರ(Vijayapura) ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ(Public School) ಆವರಣದಲ್ಲಿ 2020-21 ನೇ ಆರ್ಥಿಕ ವರ್ಷದ ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅಂದಾಜು ರೂ. 2 ಕೋ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ಪ್ರತಿ ಗ್ರಾಮಗಳ ಪ್ರಗತಿಗೆ ಪಣತೊಟ್ಟಿರುವೆ.  ಬರಡೋಲ ಗ್ರಾಮದಲ್ಲಿ ರೂ. 25.89 ಕೋ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ.  ಲೋಕೋಪಯೋಗಿ ಇಲಾಖೆಯ ವತಿಯಿಂದ ಬರಡೋಲ- ಬರಡೋಲ ಎಲ್ಟಿ ರಸ್ತೆ ಸುಧಾರಣೆಗೆ ರೂ. 80 ಲಕ್ಷ ರೂ. ಕಾಮಗಾರಿ, ಎಸ್ಟಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ರೂ. 1 ಕೋ. ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಂಡಿದೆ,  ಚಡಚಣ- ಬರೋಡಲ ರಸ್ತೆಯಲ್ಲಿ ರೂ. 9.50 ಕೋ. ವೆಚ್ಚದಲ್ಲಿ ಹಾಗೂ ಬರಡೋಲ-ಲೋಣಿ ರಸ್ತೆ ಸುಧಾರಣೆಗೆ ರೂ. 40 ಲಕ್ಷ ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಪಬ್ಲಿಕ ಶಾಲೆ 2021-22 ನೇ ಆರ್ಥಿಕ ವರ್ಷದಲ್ಲಿ ರೂ. 2 ಕೋ. ವೆಚ್ಚದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಳ ಸಂಪರ್ಕ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ಶಾಸಕ ಡಾ. ದೇವಾನಂದ ಚವ್ಹಾಣ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಗ್ರಾ. ಪಂ. ಅಧ್ಯಕ್ಷೆ ಚಾಂದಬಿ ಬಡಿಗೇರ, ಉಪಾಧ್ಯಕ್ಷ ಬಾಪುರಾಯಗೌಡ ಬಿರಾದಾರ, ಗ್ರಾಮದ ಮುಖಂಡರಾದ ಶ್ರೀಶೈಲಗೌಡ ಬಿರಾದಾರ, ಶಿವರಾಯಗೌಡ ಬಿರಾದಾರ, ರಾಜು ಝಳಕಿ, ಜ್ಞಾನೋಬರಾಯ ಚೌಧರಿ, ಮಹೇಶ ಕುಲಕರ್ಣಿ, ಮುಬಾರಕ ಕೊಂಕಣಿ, ತುಕಾರಾಮ ಶಿಂಧೆ, ಭೀಮಶಿ ಮೇತ್ರಿ, ಜೈನುದ್ಧೀನ ಕೊಂಕಣಿ, ಲಾಲಸಾಬ, ಅಶೋಕ ಜಾಲಗೇರಿ, ಪ್ರಕಾಶ ಬಿರಾದಾರ, ಪಾಂಡುರಂಗ ನಿಕ್ಕಂ, ಗುತ್ತಿಗೆದಾರ ನಾಗಣ್ಣ ಚೌಧರಿ, ಎಂಜಿನಿಯರ್ ಸುರೇಶ ನಾರಾಯಣಕರ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌