ಬಸವ ನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ಶಿವಾರಾಧನೆ ಮಹಾಶಿವರಾತ್ರಿಗೆ ಹರಿದು ಬರುತ್ತಿರುವ ಜನಸಾಗರ

ವಿಜಯಪುjರ: ದೇಶಾದ್ಯಂತ ಪರಮಾತ್ಮ(Lord Shiva) ಆರಾಧನೆಯಾದ ಮಹಾ ಶಿವರಾತ್ರಿ(Maha Shivaratri) ಸಂಭ್ರಮ ಮನೆ ಮಾಡಿದೆ.  ಮಹಾ ಶಿವರಾತ್ರಿ ಅಂಗವಾಗಿ ಬಸವ ನಾಡು ವಿಜಯಪುರ(Vijayapura) ಜಿಲ್ಲೆಯಲ್ಲಿಯೂ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆಯಲ್ಲಿ(Celebration) ತೊಡಗಿದ್ದಾರೆ.

ವಿಜಯಪುರ ನಗರ ಮತ್ತು ಹೊರ ಭಾಗಗಳಲ್ಲಿರುವ ನಾನಾ ಶಿವನ ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರು ನಮನ ಸಲ್ಲಿಸುತ್ತಿದ್ದಾರೆ.  ವಿಜಯಪುರ ನಗರದಲ್ಲಿರುವ ಅಡವಿ ಶಂಕರಲಿಂಗ ದೇವಸ್ಥಾನ, 770 ಸುಂದರೇಶ್ವರ ದೇವಸ್ಥಾನ, ಲಿಂಗದ ಗುಡಿ, ನಾನಾ ಶಿವಾಲಯಗಳು, ಶಿವಗಿರಿಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ.

ವಿಜಯಪುರ ನಗರದ ಉಕ್ಕಲಿ ರಸ್ತೆಯ ಶಿವಗಿರಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನ ಬೃಹತ್ ಮೂರ್ತಿ

ಬಿರು ಬಿಸಿಲಿನ(Hot Summer) ಮಧ್ಯೆಯೇ ಇಲ್ಲಿನ ಶಿವಗಿರಿಗೆ(Shivagiri) ಶಿವಭಕ್ತರು(Shiva Devotees) ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದ, ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿಯೇ ತಮ್ಮ ವಾಹಗಳನ್ನು ಪಾರ್ಕಿಂಗ್ ಮಾಡಿ, ಮತ್ತು ಬಸ್ಸುಗಳಿಂದ ಇಳಿದು ನಡೆದುಕೊಂಡು ಬರುತ್ತಿದ್ದಾರೆ.  ರಣಬಿಸಿಲಿನ ಮಧ್ಯೆಯೂ ಶಿವಗಿರಿಯಲ್ಲಿ ಸಂಭ್ರಮ, ಸಡಗರ ಮತ್ತು ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ.

ಈ ಬಾರಿ ಮಹಾ ಶಿವರಾತ್ರಿ ಹಬ್ಬ ಮಾರ್ಚ್ ಮೊದಲ ವಾರ ಅದರಲ್ಲಿಯೂ ಮಾರ್ಚ್ ಒಂದರಂದೇ ಬಂದಿರುವುದು ಗಮನಾರ್ಹವಾಗಿದೆ.  ಇದು ಶಿವಭಕ್ತರಲ್ಲಿ ಅಪಾರ ಸಂತಸದ ಜತೆಗೆ ಶ್ರದ್ಧೆಯೂ ಹೆಚ್ಚುವಂತೆ ಮಾಡಿದೆ.  ಶಿವಗಿರಿಯಲ್ಲಿ 85 ಅಡಿ ಎತ್ತರದ ಶಿವನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಮಹಾ ಶಿವರಾತ್ರಿ ದಿನದಂದು ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುವುದು ಗಮನಾರ್ಹವಾಗಿದೆ.  ವಿಜಯಪುರ ಮತ್ತು ಗ್ರಾಮೀಣ ಭಾಗಗಳಿಂದಲೂ ಈಶ್ವರನ ಭಕ್ತರು ಶಿಗಿರಿಗೆ ಬರುತ್ತಿದ್ದಾರೆ.  ಸಾರಿಗೆ ಇಲಾಖೆ ಕೂಡ ಇಲ್ಲಿಗೆ ಹೆಚ್ಚುವರಿ ಬಸ್ಸುಗಳ ಸೌಲಭ್ಯ ಕಲ್ಪಿಸಿದೆ.

ವಿಜಯಪುರ ನಗರದ ಶಿವಗಿರಿಯಲ್ಲಿ ದೇವರ ದರ್ಶನಕ್ಕೆ ಹರಿದು ಬರುತ್ತಿರುವ ಶಿವಭಕ್ತರು

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಪಾಳಿಯಲ್ಲಿ ನಿಂತುಕೊಂಡು ದರ್ಶನ ಪಡೆಯಲು ಶಿವಗಿರಿಯ ಆಡಳಿತ ಮಂಡಳಿ ಸಕಲ ವ್ಯವಸ್ಥೆಯನ್ನು ಮಾಡಿದೆ.  ಅಲ್ಲದೇ, ಬಿಸಿಲಿನಿಂದ ಭಕ್ತರಿಗೆ ತೊಂದರ ಆಗದಂತೆ ತಡೆಯಲು ಭಕ್ತರು ಪಾಲಿಯಲ್ಲಿ ನಿಲ್ಲುವ ಕಡೆಗಳಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.  ಇಲ್ಲಿನ ಶಿವನ ಸಣ್ಣ ಮೂರ್ತಿಯನ್ನೂ ವಿಶೇಷ ಅಲಂಕಾರಗಳಿಂದ ಶೃಂಗರಿಸಲಾಗಿದೆ.  ಬಿಲ್ವಪತ್ರೆ, ಹೂವು, ಹಣ್ಣು, ಉತ್ರಾಣಿ ಬತ್ತಿಯೊಂದಿಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಗಿದ್ದು, ರಾತ್ರಿ ಜಾಗರಣೆಗೆ ಸಿದ್ಧತೆಗಳೂ ಪೂರ್ಣಗೊಂಡಿವೆ.  ಶಿವಗಿರಿಯ ಉಸ್ತುವಾರಿ ನಿರ್ವಹಿಸುತ್ತಿರುವ ಟಿ. ಕೆ. ಪಾಟೀಲ (ಬೆನಕಟ್ಟಿ) ಚಾರಿಟೆಬಲ್‌ ಟ್ರಸ್ಟ್‌ ಈ ವರ್ಷದ ಉತ್ಸವವನ್ನು ಧಾರ್ಮಿಕ ಶ್ರದ್ಧಾ ಭಕ್ತಿಯ ಆಚರಣೆ ಜತೆಗೆ, ಸಾಂಸ್ಕೃತಿಕವಾಗಿಯೂ ವಿಜೃಂಭಣೆಯಿಂದ ಆಚರಿಸಲು ಕಾರ್ಯಕ್ರಮ ಆಯೋಜಿಸಿವೆ.

ವಿಜಯಪುರ ನಗರದ ಉಕ್ಕಲಿ ರಸ್ತೆಲ್ಲಿರುವ ಶಿವಗಿರಿಗೆ ಹರಿದು ಬಂದ ಶಿವಭಕ್ತರು

ಅಲ್ಲದೇ, ಇಲ್ಲಿ ರಥೋತ್ಸವ ಕೂಡ ನಡೆಯಲಿದ್ದು, ಸುಮಾರು ಎರಡು ವರ್ಷಗಳ ನಂತರ ಶಿವಗಿರಿಯಲ್ಲಿ ಮಹಾ ಶಿವರಾತ್ರಿ ಆಚರಣೆಗೆ ಕಳೆ ಬಂದಿದೆ.  ಕಳೆದ ಎರಡು ವರ್ಷ ಕೊರೊನಾ ಕಾಟದಿಂದಾಗಿ ಸರಳವಾಗಿ ಮಹಾ ಶಿವಾರ್ತರಿ ಆಚರಣೆ ನಡೆದಿದೆ.  ಈಗ ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕು ಕಡಿಮೆಯಾಗಿರುುದುದು ಸಾರ್ವಜನಿಕರು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವಾಲಯಗಳಿಗೆ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌