ಮಕ್ಕಳ ಏರಲಿಫ್ಟ್ ವಿಳಂಬ ಆರೋಪ- ಬಸವ ನಾಡಿನಲ್ಲಿ ಪೋಷಕರ ಆಕ್ರೋಶ- ಕೇಂದ್ರ ಸಚಿವರು ಸಂಸದರ ವಿರುದ್ಧ ವಾಗ್ದಾಳಿ

ವಿಜಯಪುರ: ಉಕ್ರೇನಿನ(Ukrain) ಮೇಲೆ ರಷ್ಯಾ(Russia) ಯುದ್ಧ ಸಾರಿದ್ದು(War Declared), ಭಾರತ, ಕರ್ನಾಟಕ (India, Karnataka) ಮತ್ತು ವಿಜಯಪುರದ ಅನೇಕ ಜನ ವಿದ್ಯಾರ್ಥಿಗಳು ಇನ್ನೂ ಖಾರ್ಕಿವ್ ನಲ್ಲಿಯೇ(Kharkiv) ಸಿಲುಕಿಕೊಂಡಿದ್ದಾರೆ.  ದಿನೇ ದಿನೇ ರಷ್ಯಾ ಧಾಳಿ(Attack) ತೀವ್ರಗೊಂಡಿದ್ದು, ಅಲ್ಲಿರುವ ವಿದ್ಯಾರ್ಥಿಗಳ ಆತಂಕವೂ(Students Tense) ಹೆಚ್ಚಾಗಿದೆ.  ಇದು ವಿದ್ಯಾರ್ಥಿಗಳ ಪೋಷಕರಲ್ಲಿ ದುಗುಡು ಹೆಚ್ಚಾಗುವಂತೆ ಮಾಡಿದೆ. 

ವಿವಿಧಾ ಮಲ್ಲಿಕಾರ್ಜುನಮಠ ತಂದೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ

ಕೇಂದ್ರ ಸರಕಾರ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರ ಏರಲಿಫ್ಟ್ ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಪೂರ್ವ ಉಕ್ರೇನಿನಲ್ಲಿ ಸಿಲುಕಿರುವವರ ಬಗ್ಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.  ಪಶ್ಚಿಮ ಉಕ್ರೇನಿನಲ್ಲಿ ಸಧ್ಯಕ್ಕೆ ವಾತಾವರಣ ಅಷ್ಟೋಂದು ಹದಗೆಟ್ಟಿಲ್ಲ.  ಅಲ್ಲಿನ ವಿದ್ಯಾರ್ಥಿಗಳನ್ನು ಏರಲಿಫ್ಟ್ ಮಾಡಲಾಗುತ್ತಿದೆ.  ಆದರೆ, ಪೂರ್ವ ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಗೋಳ ಮತ್ತು ಅಳಲು ಅವರ ಪೋಷಕರನ್ನು ಈಗ ಸಂದಿಗ್ಧತೆಗೆ ದೂಡಿದ್ದು, ಬಸವ ನಾಡು ವಿಜಯಪುರದ ಪೋಷಕರು ಕೇಂದ್ರ ಸಚಿವರು ಮತ್ತು ರಾಜ್ಯದ ಸಂಸದರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬಸವನಾಡಿನ ವಿದ್ಯಾರ್ಥಿಗಳ ಮನೆಗಳಲ್ಲಿ ಆತಂಕದ ಛಾಯೆ ಮೂಡಿದ್ದು, ಹಾವೇರಿ ಯುವಕ ನವೀನ ಸಾವಿಗೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗಳನ್ನು ಡಾಕ್ಟರ್ ಮಾಡಲು ಉಕ್ರೇನಿಗೆ ಕಳುಹಿಸಿದ್ದೆ.  ಈಗ ಕರೆ ಮಾಡಿದರೂ ಕನೆಕ್ಟ್ ಆಗುತ್ತಿಲ್ಲ.  ಮಗಳ ಸಿನೀಯರ್ ಆಗಿದ್ದ ಹಾವೇರಿಯ ಯುವಕ ಈಗಾಗಲೇ ಪ್ರಾಣ ತೆತ್ತಿದ್ದಾನೆ.  ತನ್ನ ಸಹಪಾಠಿಗಳಿಗೆ ಆಹಾರ ತರಲು ಹೋದ ಈ ಯುವಕನ ಸಾವು ಉಕ್ರೇನಿನಲ್ಲಿರುವ ಇತರ ವಿದ್ಯಾರ್ಥಿಗಳು ಮತ್ತು ವಿಜಯಪುರದಲ್ಲಿರುವ ಅವರ ಪೋಷಕರಲ್ಲಿ ಚಿಂತೆಗೀಡು ಮಾಡಿದೆ.  ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತು ಪಡಿಸಿದರೆ ಉಳಿದ ಸಚಿವರಿಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ.  ಸಚಿವರಿಗೆ ಭಾರತೀಯರ ರಕ್ಷಣೆ ಮಾಡುವ ಗಂಧ ಗಾಳಿ ಗೊತ್ತಿಲ್ಲ.  ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕೂಡ ಏನೂ ಕೆಲಸ ಮಾಡುತ್ತಿಲ್ಲ ಎಂದು ವಿವಿಧಾ ಮಲ್ಲಿಕಾರ್ಜುನಮಠ ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ ಆಕ್ರೋಶ ಹೊರ ಹಾಕಿದ್ದಾರೆ.

ಎಲ್ಲರೂ ಮೋದಿ ಅವರ ಹೆಸರು ಹೇಳುತ್ತಾರೆ,  ಮೋದಿ ಒಬ್ಬರೇ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಕೇಂದ್ರದಲ್ಲಿ ಮೋದಿ‌ ಅವರನ್ನು ಬಿಟ್ಟು ಎಲ್ಲರೂ ಅಸಮರ್ಥರು.  ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ  ಕೈಯಿಂದ ಏನೂ ಮಾಡಲಾಗುತ್ತಿಲ್ಲ.  ರಾಜಮನೆತನದವರಾದರೂ ಅವರಿಗೆ ರಾಜ್ಯಭಾರ ಮಾಡಲು ಆಗುತ್ತಿಲ್ಲ.  ರಾಜ್ಯದ 28 ಸಂಸದರೂ ಇದ್ದೂ ಇಲ್ಲದಂತಿದ್ದಾರೆ ಎಂದು ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಹರಿಹಾಯ್ದಿದ್ದಾರೆ.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ವಿರುದ್ದವೂ ಹರಿ‌ಹಾಯ್ದಿರುವ ಅವರು, ಸಂಸದ ರಮೇಶ ಜಿಗಜಿಣಗಿ ಮತ್ತು ಇತರರು ನನ್ನ ಮಗಳ ಹಾಗೂ ಎಲ್ಲ ವಿದ್ಯಾರ್ಥಿಗಳ ಜೀವ‌ ತೆಗೆಯಲು ನಿಂತಿದ್ದಾರೆ,  ನನ್ನ ಮಗಳಿಗೆ ಏನಾದರೂ ಆದರೆ ವಿಜಯಪುರ ಸಂಸದ ಹಾಗೂ ದೇಶದ ಸಂಸದರೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಗಳು ವಿವಿಧಾ ಸುರಕ್ಷಿತವಾಗಿ ಹಿಂತುರಗಿಲೆಂದು ಮುಸ್ಲೀಂ ಸಮುದಾಯದ ಜನರು ನನಗೆ ಇಲ್ಲಿ ದೈರ್ಯ ತುಂಬಿದ್ದಾರೆ.  ವಿಜಯಪುರ ಜಿಲ್ಲಾಡಳಿತದ ವತಿಯಿಂದ ಅಧಿಕಾತರಿಗಳು ನಮ್ಮನ್ನು ಸಂಪರ್ಕಿಸಿ ಧೈರ್ಯ ಹೇಳಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಜೊತೆಗೆ ಮಾತನಾಡಿದರೆ ಕೆಲವೇ ನಿಮಿಷಗಳಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ರಷ್ಯಾ ಬಾರ್ಡರ್ ಸೇರುತ್ತಾರೆ,  ಆದರೆ, ಈ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನ.  ಸದ್ಯ ನಾನು ಮಗಳು ವಿವಿಧಾ ಜೊತೆಗೆ ಸಂಪರ್ಕದಲ್ಲಿದ್ದೇನೆ‌.  ವಿಡಿಯೋ ಕಾಲ್ ನಲ್ಲಿ ಅಲ್ಲಿನ ಭಯಾನಕತೆಯನ್ನು ನೋಡಿದ್ದೇನೆ.  ಬಾಂಬ್ ದಾಳಿ, ರಾಕೆಟ್ ದಾಳಿ ನೋಡಿದ್ದೇನೆ ಎಂದು ಯುದ್ಧದ ಭೀಕರತೆಯನ್ನು ಅವರು ಬಿಚ್ಚಿಟಿದ್ದಾರೆ‌.

ಎಲ್ಲರನ್ನೂ ತುರ್ತಾಗಿ ಸುರಕ್ಷಿತವಾಗಿ ಕರೆ ಕರೆತರಬೇಕಿದೆ,  ಖಾರ್ಕಿವ್ ನಲ್ಲಿ ಸಿಲುಕಿದ್ದ ನನ್ನ ಮಗಳು ವಿವಿಧಾ ಸೇರಿದಂತೆ ಹದಿನಾಲ್ಕು ವಿದ್ಯಾರ್ಥಿಗಳು ರೈಲಿನ ಮೂಲಕ ಪೊಲೇಂಡ್ ನತ್ತ ಹೊರಟಿದ್ದಾರೆ,  ಕೀವ್ ಮೂಲಕ ಈ ರೈಲು ಪೋಲಂಡ ಗಡಿ ತಲುಪಲು 33 ಗಂಟೆಗಳು ಬೇಕು.  ಉಕ್ರೇನ್ ಗಡಿ ಭಾಗದ ಉಜಗೊಂಡ, ಕೀವ್ ಮೂಲಕ ಪೋಲೆಂಡ್ ದೇಶ ತಲುಪಲಿದ್ದಾರೆ.  ನಂತರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರು ತಿಳಿಸಿದ್ದಾರೆ.

ಉಕ್ರೇನ್ ರಷ್ಯಾ ಯುದ್ದ ಈಗಾಗಲೇ ಕನ್ನಡಿಗನ ಬಲಿ ತೆಗೆದುಕೊಂಡಿದೆ. ಈ ಸಾವಿಗೆ ವಿಜಯಪುರದ ಪೋಷಕರು ಸಂತಾಪ ವ್ಯಕ್ತಪಡಿಸಿದ್ದಾರೆ.  ಉಕ್ರೇನ್ ನಲ್ಲಿ ಸಿಲುಕಿರುವ ದೇಶದ ವಿದ್ಯಾರ್ಥಿಗಳು ಸೇಫ್ ಆಗಿ ಆದಷ್ಟು ಬೇಗ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌