ಉಕ್ರಿನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿ ಧೈರ್ಯ ಹೇಳಿದ ವಿಜಯಪುರ ಜಿಲ್ಲಾಡಳಿತ

ವಿಜಯಪುರ: ಯುದ್ಝ ಪೀಡಿತ ಉಕ್ರೇನಿನಲ್ಲಿ(War Hit Ukraine) ವಿಜಯಪುರ ಜಿಲ್ಲೆಯ(Vijayapura District) 16 ಜನ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.(Stranded)  ಅದರಲ್ಲಿಯೂ ಖಾರ್ಕಿವ್(Kharkiv) ರಷ್ಯಾ ಧಾಳಿ(Russia Attack) ತೀವ್ರಗೊಂಡಿದೆ.  ಇದರಿಂದಾಗಿ ವಿಜಯಪುರ ಜಿಲ್ಲೆಯ ಪೋಷಕರು ತೀವ್ರ ಆತಂಕದಲ್ಲಿದ್ದು, ತಮ್ಮ ಮಕ್ಕಳ ಪರಿಸ್ಥಿತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ. 

ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರನ್ನು ವಿಜಯಪುರ ತಹಸೀಲ್ದಾರ ಮತ್ತೀತರರು ಭೇಟಿ ಮಾಡಿದರು

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರನ್ನು ವಿಜಯಪುರದಲ್ಲಿ ಭೇಟಿ ಮಾಡಿದರು.  ವಿಜಯಪುರ ತಹಸೀಲ್ದಾರ ಸಿದ್ಧರಾಮ ಬೋಸಗಿ ಮತ್ತು ಜಿಲ್ಲಾಧಿಕಾರಿ ಕಚೇರಿಯೆ ವಿಶೇಷ ಅಧಿಕಾರಿ ರಾಕೇಶ ಜೈನಾಪುರ ಕಳೆದ ಎರಡು ದಿನಗಳಲ್ಲಿ ಪೋಷಕರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪೋಷಕರಿಂದ ಅವರ ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಅವರು ಈಗ ಎಲ್ಲಿದ್ದಾರೆ.  ಅವರಿಗೆ ಏನೆಲ್ಲ ಸಮಸ್ಯೆಗಳು ಎದುರಾಗಿವೆ ಎಂಬದನ್ನು ತಿಳಿದುಕೊಂಡಿದ್ದಾರೆ.  ಅಲ್ಲದೇ, ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.  ಧೈರ್ಯಗೆಡದಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.

ವಿಜಯಪುರದಲ್ಲಿ ಅಮನ ಮಮದಾಪುರ ಪೋಷಕರನ್ನು ವಿಜಯಪುರ ತಹಸೀಲ್ದಾರ ಮತ್ತೀತರರು ಭೇಟಿ ಮಾಡಿದರು

ವಿಜಯಪುರ ನಗರದ ಆದರ್ಶ ನಗರದಲ್ಲಿರುವ ಅಮನ ಮಮದಾಪುರ ಅವರ ಮನೆಗೆ ಭೇಟಿ ನೀಡಿದ ಅವರು ಅಮನ ಮಮದಾಪುರ ಬಗ್ಗೆ ಅವರ ಪೋಷಕರಿಂದ ಮಾಹಿತಿ ಪಡೆದರು.  ಒಟ್ಟು 16 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳ ಪೋಷಕರನ್ನು ಸಿದ್ಧರಾಮ ಬೋಸಗಿ ಮತ್ತು ರಾಕೇಶ ಜೈನಾಪುರ ಈವರೆಗೆ ಭೇಟಿ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌