ಕೈ ಬಳೆ ಒಡೆದಾವು… ಕಣ್ಣೀರು ಉದಿರಾವು… ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದು ಭವಿಷ್ಯ ನುಡಿದ ಹೊಳೆಬಬಲಾದಿ ಸದಾಶಿವ ಮಠದ ಕಾರ್ಣಿಕ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮಠದ ಕಾರ್ಣಿಕ ನುಡಿದರುವ ಭವಿಷ್ಯ ಮತ್ತೆ ಜನರನ್ನು ಸಂತಸ ಮತ್ತು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ಕಾರ್ಣಿಕ ಪ್ರತಿವರ್ಷ ಕಾಲಜ್ಞಾನದ ಹೊತ್ತಿಗೆ ಹೊತ್ತಿಗೆಯಲ್ಲಿರುವ ಭವಿಷ್ಯವಾಣಿಯನ್ನು ಪ್ರತಿ ವರ್ಷ ಒಂದೊಂದು ಪುಟ ತೆರೆದು ಹೇಳುವುದು ಗಮನಾರ್ಹವಾಗಿದೆ.  ಈ ಕಾರ್ಣಿಕ ಇದುವರೆಗೆ ನುಡಿದಿರುವ ಎಲ್ಲ ಭವಿಷ್ಯಗಳು ನಿಜವಾಗಿವೆ.  ಕೊರೊನಾ, ಭೂಕಂಪ, ಅಗ್ನಿ ಅನಾಹುತ, ಯುದ್ಧ, ಅತೀವೃಷ್ಠಿ, ಜಲಪ್ರಳಯ ಕುರಿತು ನುಡಿದ […]

ಸರಕಾರಿ ಶಾಲೆಗಳ ದುರಸ್ಥಿ, ಹೊಸ ಕೊಠಡಿಗಳು, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡುವವರೆಗೆ ಧ್ವನಿ ಎತ್ತುತ್ತೇನೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಪಕ್ಷ ಕಾಂಗ್ರೆಸ್. ಈ ಪಕ್ಷವನ್ನು ಬಲಪಡಿಸಲು ಎಲ್ಲರೂ ಕಂಕಣಬದ್ಧರಾಗಿರೋಣ ಎಂದು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.  ವಿಜಯಪುರದಲ್ಲಿಕಾಂಗ್ರೆಸ್ ಸದಸ್ಯತ್ವದಅಭಿಯಾನ ಅಂಗವಾಗಿ ಡಿಜಿಟಲ್ ಸದಸ್ಯತ್ವ ನೋಂದಣಿ ಮತ್ತುಕಾರ್ಯಾಗಾರಕ್ಕೆ ಚಾಲನೆ ನೀಡಿಮಾತನಾಡಿದಅವರು, ಐತಿಹಾಸಿಕ ಹಿನ್ನೆಲೆ ಹೊಂದಿರುವಕಾಂಗ್ರೆಸ್ ಪಕ್ಷಕ್ಕೆ ಹೆಚ್ಚೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿ, ಪಕ್ಷವನ್ನು ಬಲಪಡಿಸಿ, ಮುಂಬರುವಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಎಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು. ಗ್ರಾಮ […]

ರಾಜ್ಯ ಬಜೆಟ್ ನಿರಾಶಾದಾಯಕ- ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2023 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಬಿತ್ತಿಪತ್ರದಂತೆ ಈ ಬಜೆಟ್ ಭಾಸವಾಗುತ್ತಿದೆ.  40 ಪರ್ಸೆಂಟೇಜ್ ಸರಕಾರ ಎನ್ನುವ ಅಪಕೀರ್ತಿ ಪಡೆದಿರುವ ಈ ಸರಕಾರದ  ಮುಖ್ಯಮಂತ್ರಿಯಿಂದ ಬಜೆಟ್ ನಿಂದ ಜನರು ನಿರೀಕ್ಷಿಸುವುದಾದರೂ ಏನಿದೆ? ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಕೇವಲ ರೂ. 5000 ಕೋ. ಮೀಸಲಿಟ್ಟಿರುವುದು ನಿರಾಸೆ ಮೂಡಿಸಿದೆ.  […]

ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ನೀಡುವ ಬಜೆಟ್- ಗೋವಿಂದ ಕಾರಜೋಳ

ಬೆಂಗಳೂರು: ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ತುಂಬುವ ಗಟ್ಟಿ ಧ್ವನಿ ಈ ಮುಂಗಡ ಪತ್ರ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಇಂದಿನ ಮುಂಗಡ ಪತ್ರ ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಗ್ರಾಮೀಣ ಕರ್ನಾಟಕದ ಉದ್ಯಮಗಳಾದ ಹೈನೋದ್ಯಮ, ಮತ್ಸ್ಯೋದ್ಯಮ ಮುಂತಾದ ಉದ್ಯಮಗಳ ಆರ್ಥಿಕ ಸಬಲೀಕರಣಕ್ಕೆ ಈ ಬಜೆಟ್ ನಾಂದಿ […]

ಬಜೆಟ್ ನಲ್ಲಿ ಸಚಿವ ಕಾರಜೋಳ ಬಣ್ಣ ಬಯಲು- ಎಂ. ಬಿ. ಪಾಟೀಲ ಬಜೆಟ್ ಪ್ರತಿಕ್ರಿಯೆ

ಬೆಂಗಳೂರು: ಈ ಬಾರಿ ಬಜೆಟ್‍ನಲ್ಲಿ ನೀರಾವರಿ ಇಲಾಖೆಗೆ ರೂ. 20 ಸಾವಿರ ಕೋ. ನೀಡಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಕನಿಷ್ಠ ರೂ. 3 ಸಾವಿರ ಕೋ. ಹೋಗುತ್ತದೆ. ಬಾಕಿ ಉಳಿಯುವ ರೂ. 17 ಸಾವಿರ ಕೋ. ಯಲ್ಲಿ ಈಗಾಗಲೇ ರೂ. 10-12 ಸಾವಿರ ಕೋ. ಮೊತ್ತದ ಕಾಮಗಾರಿಗಳ ಹಿಂದಿನ ಬಿಲ್ ಬಾಕಿ ಇದೆ. ಅವುಗಳನ್ನು ಪಾವತಿಸಿದಾಗ, ರೂ. 5 ಸಾವಿರ ಕೋ. ಮಾತ್ರ ಉಳಿಯುತ್ತದೆ. ಇದರಲ್ಲಿ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಹೇಗೆ ಕೈಗೆತ್ತಿಕೊಳ್ಳುತ್ತಾರೆ ಎಂದು ಜಲಸಂಪನ್ಮೂಲ […]

ಉಕ್ರೇನಿನಲ್ಲಿ ವಿದ್ಯಾರ್ಥಿಗಳ ಸಂಕಷ್ಟ: ಗುಮ್ಮಟ ನಗರಿಯಲ್ಲಿ ಪೋಷಕರಿಗೆ ಸಾಂತ್ವನ ಹೇಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(Ukraine War) ಭಾರತಿಯ ಮೂಲದ ಸಾವಿರಾರು ವಿದ್ಯಾರ್ಥಿಗಳು(Indian Students) ಇನ್ನೂ ಸಿಲುಕಿದ್ದು, ಇವರ ಸುರಕ್ಷತೆಗೆಗಾಗಿ ಕೇಂದ್ರ ಸರಕಾರ(Central Government) ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಏರಲಿಫ್ಟ್ ಮಾಡಿ ಭಾರತಕ್ಕೆ ಕರೆತರಲಾಗಿದೆ.  ಆದರೂ, ಇನ್ನೂ ಹಲವಾರು ಜನರು ಪೂರ್ವ ಉಕ್ರೇನ್ ಸೇರಿದಂತೆ ಇತರ ಭಾಗಗಳಲ್ಲಿ ಸಿಲುಕಿದ್ದಾರೆ.  ಮತ್ತೆ ಸುಮಾರು ಜನರು ಉಕ್ರೇನ್ ಗಡಿ ದೇಶಗಳಿಗೆ ತಲುಪಿದ್ದಾರೆ.  ಹಲವರು ಇನ್ನೂ ನಡೆದುಕೊಂಡೇ ಪೋಲಂಡ(Poland), ರೋಮೆನಿಯಾ(Romenia), ಮಾಲ್ಡೋವಾ(Maldova), ಸ್ಲೋವಾಕಿಯಾ(Slovakia) ಸೇರಿದಂತೆ ಉಕ್ರೇನಿನ ಗಡಿ ದೇಶಗಳಿಗೆ […]