ಕೈ ಬಳೆ ಒಡೆದಾವು… ಕಣ್ಣೀರು ಉದಿರಾವು… ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದು ಭವಿಷ್ಯ ನುಡಿದ ಹೊಳೆಬಬಲಾದಿ ಸದಾಶಿವ ಮಠದ ಕಾರ್ಣಿಕ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮಠದ ಕಾರ್ಣಿಕ ನುಡಿದರುವ ಭವಿಷ್ಯ ಮತ್ತೆ ಜನರನ್ನು ಸಂತಸ ಮತ್ತು ಆತಂಕಕ್ಕೆ ಕಾರಣವಾಗಿದೆ.

ಇಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ಕಾರ್ಣಿಕ ಪ್ರತಿವರ್ಷ ಕಾಲಜ್ಞಾನದ ಹೊತ್ತಿಗೆ ಹೊತ್ತಿಗೆಯಲ್ಲಿರುವ ಭವಿಷ್ಯವಾಣಿಯನ್ನು ಪ್ರತಿ ವರ್ಷ ಒಂದೊಂದು ಪುಟ ತೆರೆದು ಹೇಳುವುದು ಗಮನಾರ್ಹವಾಗಿದೆ.  ಈ ಕಾರ್ಣಿಕ ಇದುವರೆಗೆ ನುಡಿದಿರುವ ಎಲ್ಲ ಭವಿಷ್ಯಗಳು ನಿಜವಾಗಿವೆ.  ಕೊರೊನಾ, ಭೂಕಂಪ, ಅಗ್ನಿ ಅನಾಹುತ, ಯುದ್ಧ, ಅತೀವೃಷ್ಠಿ, ಜಲಪ್ರಳಯ ಕುರಿತು ನುಡಿದ ಭವಿಷ್ಯಗಳು ಇಂದಿಗೂ ಕರಿ ಕಲ್ಲಿನ ಮೇಲೆ ಬಿಳಿ ಗೆರೆ ಹೊಡೆದಂತಿವೆ.  ಇದು ಮುಂದುವರೆಯುತ್ತಲೇ ಬಂದಿದೆ.

ಹೊಳೆ ಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಸೇರಿರುವ ಅಪಾರ ಭಕ್ತಸ್ತೋಮ

ಅದೇ ರೀತಿ ಈ ವರ್ಷವೂ ಇಲ್ಲಿನ ಕಾರ್ಣಕ ಶ್ರೀ ಸಿದ್ಧರಾಮಯ್ಯ ಹೊಳಿಮಠ ಅರ್ಥಾತ್ ಸಿದ್ಧು ಮುತ್ಯಾ :ನುಡಿದಿರುವ ಒಡಪು ಮತ್ತು ಬಹಳ ಗೂಡಾರ್ಥ ಇರುವ ಹೇಳಿಕೆ ಸಂತಸದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.  ಚೆನ್ನಾಗಿ ಉತ್ತಮ ಬೆಳೆ ಬರುಲಿದೆ.  ಹಿಂಗಾರು ಮಧ್ಯಮ ಫಲ ನೀಡಲಿದೆ.  ಆದರೂ ಕಂಪ್ಲಿ ದೇಶಕ್ಕೆ ಬರವಿದೆ.  ಆ ದಿಕ್ಕಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಹೆಚ್ಚಾಗಲಿದೆ.  ದೇಶದಲ್ಲಿ ಅಹಂಕಾರ ಹೆಚ್ಚಾಗಿ ಕೆಟ್ಟ ಪರಿಣಾಮ ಬೀರಲಿದೆ ಎಂದು ನುಡಿದಿರುವ ಭವಿಷ್ಯ ರೈತರಲ್ಲಿ ಸಂತ ಸಮೂಡಿಸಿದೆಯಾದರೂ, ಕಂಪ್ಲಿ ದೇಶಕ್ಕೆ ಬರಗಾಲ ಎದುರಾಗಲಿದೆ.  ಆ ದಿಕ್ಕಿನಲ್ಲಿ ಅತೀವೃಷ್ಠಿ ಮತ್ತು ಅನಾವೃಷ್ಠಿ ಹೆಚ್ಚಾಗಲಿದೆ ಎಂದು ಹೇಳಿರುವುದು ಭಕ್ತರಲ್ಲಿ ಈಗ ಕಂಪ್ಲಿ ದೇಶ ಎಂದರೆ ಯಾವುದು ಎಂಬ ಚರ್ಚೆಗೆ ಕಾರಣವಾಗಿದೆ.

ಹೊಳೆ ಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆ

ಕೈಬಳೆ ಒಡೆದಾವು.  ಕಣ್ಣೀರು ಉದುರಾವು.  ಕೆಲವಡೆ ತಂತ್ರ ಅತಂತ್ರವಾಗುತ್ತದೆ.  ಜಗತ್ತಿನಲ್ಲಿ ಪಾಪ ಹೆಚ್ಚಾಗಿ ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದು ಹೇಳಿರುವುದು ಯುದ್ಧ, ನಾನಾ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದಂತಿದೆ.  ತಂತ್ರ ಅತಂತ್ರವಾಗುತ್ತದೆ ಎಂದು ಹೇಳಿರುವುದು ನಾನೇ ಶ್ರೇಷ್ಠ.  ನಾನೇ ಸರ್ವಸ್ವ.  ನಾನೇ ತಂತ್ರಗಾರ ಎನ್ನುವವರ .ಯೋಜನೆಗಳು ತಲೆ ಕೆಳಗಾಗಲಿವೆ ಎಂಬುದನ್ನು ಎತ್ತಿ ಹೇಳಿದಂತಿದೆ.

ಪಡುವಣ ದಿಕ್ಕಿಗೆ ತ್ರಾಸ ಎಂದು ಹೇಳಿರುವದು ಪಶ್ಚಿಮ ದಿಕ್ಕಿನಲ್ಲಿ ಎದುರಾಗಬಹುದಾದ ಸಂಕಷ್ಟದ ಬಗ್ಗೆ ಮುನ್ನೆಚ್ಚರಿಕೆ ನೀಡಿದಂತಿದೆ.  ಉತ್ತಮ ಮಳೆಯಾಗಿ ಜೋಳ, ಕಡ್ಲೆ ಕಾಳುಗಳು, ಇತರ ಆಹಾರ ಧಾನ್ಯಗಳು ಉತ್ತಮವಾಗಿ ಬೆಳೆದರೂ ಖಂಡ ಮಂಡಲವಿದೆ.  ಉತ್ತರ ದಿಕ್ಕಿನ ಮುಂದೆ ಮುಳುಕಡಿತು.  ಎಂದು ಹೇಳಿರುವುದು ಖಂಡಗಳ ಮಧ್ಯೆ ಅಂದರೆ ನಾನಾ ದೇಶಗಳ ಮಧ್ಯೆ ಉದ್ವಿಗ್ನತೆ ಅಥವಾ ಯುದ್ಧ ನಡೆಯುವ ಸಾಧ್ಯತೆಯನ್ನು ಹೇಳಿದಂತಿದೆ.  ನೀತಿಯಿಂದ ನಿಜರೂಪ ತೋರತೈತಿ.  ಆಯಾ ಜನರು ಮತ್ತು ದೇಶಗಳು ಪಾಲಿಸುವ ನೀತಿಗಳ ಫಲಗಳನ್ನು ಆ ಜನ ಅಥವಾ ದೇಶಗಳು ಅನುಭವಿಸಲಿವೆ ಎಂಬರ್ಥದಲ್ಲಿ ಹೇಳಿದಂತಿದೆ.

ಹೊಳೆ ಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಸೇರಿರುವ ಅಪಾರ ಭಕ್ತಸ್ತೋಮ

ದೇಶದಲ್ಲಿ ಶಾಂತಿ ಸೌಹಾರ್ದತೆ ಕೊರತೆ ಇದೆ ಪೀತ ನಾಶ ಆದೀತ,  ಭಾರತದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಕೊರತೆ ಎದುರಾಗಬಹುದು.  ಇದರಿಂದ ಪಿತ್ತ ನಾಶವಾದೀತು.  ಭೂಕಾಂತಿ ನಡಗಿತ.  ಗಾಳಿ ಸುನಾಮಿ ಆದೀತು.  ಎಂದರೆ ಭೂಕಂಪವಾಗಬಹುದು.  ಬಿರುಗಾಳಿಯೂ ಎದುರಾಗಬಹುದು.  ಸುನಾಮಿಯೂ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Leave a Reply

ಹೊಸ ಪೋಸ್ಟ್‌