ಉಕ್ರೇನಿನಲ್ಲಿ ವಿದ್ಯಾರ್ಥಿಗಳ ಸಂಕಷ್ಟ: ಗುಮ್ಮಟ ನಗರಿಯಲ್ಲಿ ಪೋಷಕರಿಗೆ ಸಾಂತ್ವನ ಹೇಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(Ukraine War) ಭಾರತಿಯ ಮೂಲದ ಸಾವಿರಾರು ವಿದ್ಯಾರ್ಥಿಗಳು(Indian Students) ಇನ್ನೂ ಸಿಲುಕಿದ್ದು, ಇವರ ಸುರಕ್ಷತೆಗೆಗಾಗಿ ಕೇಂದ್ರ ಸರಕಾರ(Central Government) ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ಈಗಾಗಲೇ ಸಾವಿರಾರು ವಿದ್ಯಾರ್ಥಿಗಳನ್ನು ಏರಲಿಫ್ಟ್ ಮಾಡಿ ಭಾರತಕ್ಕೆ ಕರೆತರಲಾಗಿದೆ.  ಆದರೂ, ಇನ್ನೂ ಹಲವಾರು ಜನರು ಪೂರ್ವ ಉಕ್ರೇನ್ ಸೇರಿದಂತೆ ಇತರ ಭಾಗಗಳಲ್ಲಿ ಸಿಲುಕಿದ್ದಾರೆ.  ಮತ್ತೆ ಸುಮಾರು ಜನರು ಉಕ್ರೇನ್ ಗಡಿ ದೇಶಗಳಿಗೆ ತಲುಪಿದ್ದಾರೆ.  ಹಲವರು ಇನ್ನೂ ನಡೆದುಕೊಂಡೇ ಪೋಲಂಡ(Poland), ರೋಮೆನಿಯಾ(Romenia), ಮಾಲ್ಡೋವಾ(Maldova), ಸ್ಲೋವಾಕಿಯಾ(Slovakia) ಸೇರಿದಂತೆ ಉಕ್ರೇನಿನ ಗಡಿ ದೇಶಗಳಿಗೆ ತೆರಳುತ್ತಿದ್ದಾರೆ.

ಮುಸ್ಲಿಂ ಬಾಂಧವರಿಂದ ಎ. ಜಿ. ಮಲ್ಲಿಕಾರ್ಜುನ ಭೇಟಿ

ಈ ದೇಶಗಳಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಏರಲಿಫ್ಟ್ ಮಾಡಲು ಕೇಂದ್ರ ಸರಕಾರ ನಾಲ್ಕು ಜನ ಕೇಂದ್ರ ಸಚಿವರನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದು, ಈ ಸಚಿವರು ಅಲ್ಲಿದ್ದುಕೊಂಡು ಸಮನ್ವಯ ಸಾಧಿಸುತ್ತಿದ್ದಾರೆ.

ಮತ್ತೋಂದೆಡೆ ಇನ್ನೂ ತಮ್ಮ ಮಕ್ಕಳು ಭಾರತಕ್ಕೆ ಮರಳದಿರುವ ಹಿನ್ನೆಲೆಯಲ್ಲಿ ಗುಮ್ಮಟ ನಗರಿ ವಿಜಯಪುರ ಸೇರಿದಂತೆ ನಾನಾ ಕಡೆಗಳಲ್ಲಿ ಪೋಷಕರು ಆತಂಕದಲ್ಲಿದ್ದಾರೆ.  ಈ ಪೋಷಕರಿಗೆ(Parents) ಆತ್ಮಸ್ಥೈರ್ಯ(Support) ತುಂಬುವ ಕೆಲಸಗಳೂ ನಡೆಯುತ್ತಿವೆ.  ಈ ರೀತಿ ಧೈರ್ಯ ತುಂಬಲು ನಾನಾ ಸಮುದಾಯಗಳ ಜನರೂ ಪೋಷಕರನ್ನು ಭೇಟಿ ಮಾಡುತ್ತಿದ್ದಾರೆ.

ಮುಸ್ಲಿಂ ಬಾಂಧವರಿಂದ ಎ. ಜಿ. ಮಲ್ಲಿಕಾರ್ಜುನ ಭೇಟಿ

ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ವಿವಿಧಾ ಮಲ್ಲಿಕಾರ್ಜುನಮಠ ಅವರ ಮನೆಗೆ ಆಗಮಿಸಿದ ಮುಸ್ಲಿಂ ಬಾಂಧವರು ವಿವಿಧಾ ಮಲ್ಲಿಕಾರ್ಜುನಮಠ ಅವರ ತಂದೆ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.  ಪೋಷಕರಿಗೆ ಮಕ್ಕಳೆ ಆಸ್ತಿ ಇದ್ದಂತೆ.  ಮಕ್ಕಳು ಸಂಕ್ಷಟದಲ್ಲಿ ಇದ್ದಾಗ ಪೋಷಕರು ಕಷ್ಟ ಹೇಳತಿರದರು.  ನಿಮ್ಮ ಜೊತೆಯಲ್ಲಿ ನಾವಿದ್ದೇವೆ.  ನಿಮ್ಮ ಮಗಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಲಿದ್ದಾಳೆ.  ಧೈರ್ಯದಿಂದ ಇರಿ ಎಂದು ಆತ್ಮಸ್ಥೈರ್ಯ ತುಂಬಿದರು.  ನಿಮ್ಮ ಮಗಳ ಪರವಾಗಿ ತಾವು ಪ್ರತಿದಿನ ಸಲ್ಲಿಸುವ ಐದು ಪ್ರಾರ್ಥನೆಯಲ್ಲಿ ವಿಶೇಷವಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು.  ನಿಮ್ಮ ಮಗಳು ಸುರಕ್ಷಿತವಾಗಿ ದೇಶಕ್ಕೆ ವಾಪಸ್ಸಾಗಲಿದ್ದಾಳೆ.  ಮಅಲ್ಲದೇ, ಅವರ ನಿವಾಸದ ಎದುರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ವಿವಿಧಾ ಮಲ್ಲಿಕಾರ್ಜುನಮಠ ಸೇರಿದಂತೆ ಭಾರತದ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಲಿ ಎಂದು ಪ್ರಾರ್ಥಿಸಿದರು.

ಮುಸ್ಲಿಂ ಸಮುದಾಯದ ಮುಖಂಡರಾದ ಪ್ರೊ. ಇಮಾರತವಾಲೆ, ಇಕ್ಬಾಲ ನದಾಫ, ಎಸ್. ಎಸ್. ಖಾದ್ರಿ, ಹಾಜಿ ಮುಜಾವರ, ರಂಜಾನ, ಬಂದೆನವಾಜ ಹಾಶ್ಮಿ, ಫಿರೋಜ ಮೋದಿ, ಶಬ್ಬೀರ, ಆಸೀಫ್ ಮುಜಾವರ, ಅಶ್ಪಾಕ್ ವಾಲಿಕಾರ, ಆಬಿದ್ ಸಂಗಮ್, ಮುನೀರ ಕಾಲೇಬಾಗ, ಇಬ್ರಾಹಿಂ ಬಡೆಗರ್, ಶಬ್ಬೀರ ಕಲ್ಮನಿ ಮುಂತಾದವರು ಭೇಟಿಯಾಗಿ ಸಾಂತ್ವನ ಹೇಳಿದರು.

ವಿವಿಧಾ ಮಲ್ಲಿಕಾರ್ಜುನಮಠ ಮನೆಯ ಎದುರು ಖಾಲಿ ಮೈದಾದನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಸಂಕಷ್ಟದ ಈ ಸಮಯದಲ್ಲಿ ನೊಂದಿರುವ ಪೋಷಕರೊಂದಿಗೆ ತಾವು ಬೆಂಬಲವಾಗಿ ಇರುವುದಾಗಿ ಧೈರ್ಯ ಹೇಳಿದರು.  ಇದು ಶರಣರ ನಾಡು, ಸೂಫಿ ಸಂತರ ಬೀಡು ಬಸವ ನಾಡಿನಲ್ಲಿರುವ ಕೋಮು ಸೌಹಾರ್ಧತೆಗೆ ಸಾಕ್ಷಿಯಾಗಿತ್ತು.

ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

ವಿಜಯಪುರ ಜಿಲ್ಲೆಯ ಒಟ್ಟು 17 ಜನ ವಿದ್ಯಾರ್ಥಿಗಳು ಉಕ್ರೇನಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದಾರೆ.  ಇವರಲ್ಲಿ ಸ್ನೇಹಾ ಪಾಟೀಲ ಎಂಬ ವಿದ್ಯಾರ್ಥಿನಿ ಈಗಾಗಲೇ ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ್ದಾರೆಳ.  ಆದರೆ, ಇನ್ನೂ 16 ಜನ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.  ಕೆಲವರು ಸುರಕ್ಷಿತವಾಗಿ ಉಕ್ರೇನ್ ದಾಟಿ ಬಂದಿದ್ದರೆ, ಇನ್ನೂ ಹಲವರು ಇನ್ನೂ ಉಕ್ರೇನಿನಲ್ಲಿಯೇ ಇದ್ದಾರೆ.  ಅಲ್ಲಿ ಅತೀಯಾಗಿರುವ ಚಳಿ, ಸೂಕ್ತ ಸಾರಿಗೆ ಸಂಪರ್ಕ ಸಿಗದಿರುವುದು, ಈ ವಿದ್ಯಾರ್ಥಿಗಳನ್ನು ಕಂಗಾಲಾಗುವಂತೆ ಮಾಡಿದೆ.  ರೈಲಿನಲ್ಲಿ ಸಂಚರಿಸಬೇಕೆಂದರೂ ಕೂಡ ಸ್ಥಳೀಯರು ತಾವುೇ ಮೊದಲು ಸುರಕ್ಷಿತ ಸ್ಥಳಗಳಿಗೆ ತೆರಳು ದೌಡಾಯಿಸುತ್ತಿರುವುದರಿಂದ ಇವರಿಗೆ ಹಿನ್ನೆಡೆಯಾಗುತ್ತಿದೆ ಎಂದು ಕೆಲವು ಜನ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆದಷ್ಟು ಬೇಗ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್ಸಾಗಲಿ ಎಂಬುದು ಬಸವ ನಾಡಿನ ಆಶಯವಾಗಿದೆ.

Leave a Reply

ಹೊಸ ಪೋಸ್ಟ್‌