ವಿಜಯಪುರ: ಸಂಘ ಪರಿವಾರದ ಘಟಕಗಳಾದ ಭಜರಂಗದಳ, ವಿಶ್ವ ಹಿಂದೂ ಪರಿಷತ, ಶ್ರೀರಾಮ ಸೇನೆಗಳ ಕೆಲವರು ಗೋ ರಕ್ಷಣೆ ಹೆಸರಿನಲ್ಲಿ ಗೋವುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವುಗಳ ರಕ್ಷಣೆಗಾಗಿ ನಾವಿದ್ದೇವೆ ಎಂದು ಹೇಳುವ ಈ ಸಂಘಟನೆಗಳ ಕೆಲವು ಜನ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿದೆ, ಗೋವುಗಳ ರಕ್ಷಣೆ ಮಾಡುತ್ತೇವೆ ಎಂದು ಒಂದು ಕಡೆ ನಾಟಕ ಮಾಡುತ್ತಾರೆ. ಮತ್ತೋಂದು ಕಡೆ ಗೋವುಗಳನ್ನು ಕಳ್ಳಸಾಗಣೆ ಮಾಡಿ ಹಣ ಮಾಡುತ್ತಿದ್ದಾರೆ. ರಾಜಸ್ಥಾನ ಮತ್ತೀತರ ಕರಡೆ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ತಾವು ಯಾವುದೇ ದಾಖಲೆಗಳಿಲ್ಲದೇ ಈ ರೀತಿ ಮಾತನಾಡುವುದಿಲ್ಲ ಎಂದು ಅವರು ಆರೋಪಿಸಿದರು.
ಮೂ ಮೆ ರಾಮ , ಬಗಲ್ ಮೇ ಚೂರಿ ಎಂಬಂತೆ ಇವರು ವರ್ತಿಸುತ್ತಿದ್ದಾರೆ. ಇದರ ತಮ್ಮ ಬಳಿ ದಾಖಲಾತಿ ಇವೆ. ನಮ್ಮ ಜನಜಾಗೃತಿ ಜಾಥಾ ಉದ್ದಕ್ಕೂ ಈ ಎಲ್ಲ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಅವರು ತಿಳಿಸಿದರು.
ಮೂರು ಕೃಷಿ ಕಾಯಿದೆಗಳನ್ನು ಜಾರಿಗೆ ತಂದು ಒಂದು ವರ್ಷಗಳ ಕಾಲ ರೈತರು ಹೋರಾಟ ಮಾಡುವಂತೆ ಮಾಡಿದರು. ಈ ಸಂದರ್ಭದಲ್ಲಿ ಹಲವಾರು ಜನ ಸಾವಿಗೀಡಾದರು. ಆದರೆ, ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ ಕೂಡ ರೈತರಿಗೆ ಸ್ಪಂದಿಸದೇ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸಿದರು. ಈ ಕಾನೂನುಗಳನ್ನು ರೈತರಿಗಾಗಿ ರೂಪಿಸಿರುವುದಾಗಿ ತಿಳಿಸಿದರು. ಆದರೂ, ರೈತರ ಹೋರಾಟ ಮುಂದುವರೆದಾಗ ಕೊನೆಗೂ ಮಣಿದ ಕೇಂದ್ರ ಸರಕಾರ ಒಂದು ವರ್ಷದ ಬಳಿಕ ರೈತರ ಕ್ಷಮೆ ಕೇಳಿ ಈ ಕಾಯಿದೆಯನ್ನು ಹಿಂಪಡೆಯಿತು. ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಿದರು ಎಂದು ಎಸ್. ಆರ್. ಹಿರೇಮಠ ಹೇಳಿದರು.
ಆದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಎಪಿಎಂಸಿ ಕಾಯಿದೆಗಳನ್ನು ಜಾರಿಗೆ ತಂದು ರೈತರ ಶೋಷಣೆ ಮಾಡುತ್ತಿದೆ. ಕೇಂದ್ರದ ಮೂರು ಕೃಷಿ ಕಾಯಿದೆಗೆ ಪೂರಕವಾದ ಕಾಯಿದೆ ಇದಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಅವರು ತಿಳಿಸಿದರು.
ಈ ಸುದ್ದಿಗೋಷ್ಠಿಯ ಬಳಿಕ ಎಸ್. ಆರ್. ಹಿರೇಮಠ ಅವರು, ರಾಜ್ಯ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿಜಯಪುರ ನಗರದಲ್ಲಿ ಜನಾಂದೋಲನಗಳ ಜನಜಾಗೃತಿ ಜಾಥಾ ನಡೆಸಲಾಯಿತು.
ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ ಚೌಕಿನಲ್ಲಿ ನಡೆದ ಈ ಜಾಥಾದಲ್ಲಿ ನಾನಾ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೋಂಡರು. ಎಪಿಎಂಪಿ ಕಾಯಿದೆ, ಭೂಸ್ವಾದೀನ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸಲಾಯಿತು. ಕೇಂದ್ರ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆದಂತೆ ಈ ಕಾಯಿದೆಗಳನ್ನೂ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಈ ಹೋರಾಟ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಭೀಮಶಿ ಕಲಾದಗಿ, ಭಗವಾನರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.