ವಿಜಯಪುರ: ಉಕ್ರೆನಿನಲ್ಲಿ(kraine) ಸಿಲುಕಿರುವ(Stranded) ವಿಜಯಪುರ ವಿದ್ಯಾರ್ಥಿಗಳ(Vijayapura Students) ಪೋಷಕರು(Parents) ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commisdioner) ಪಿ. ಸುನೀಲ ಕುಮಾರ(P Dunil Kumar)ಅವರನ್ನು ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೋಷಕರಾದ ಧರ್ಮರಾಯ ಮಮದಾಪುರ, ತಮ್ಮ ಪುತ್ರ ಅಮನ ಮಮದಾಪುರ ಮತ್ತು ಇತರರು ಯುದ್ದ ಪೀಡಿತ ಉಕ್ರೇನಿನ ಖಾರ್ಕಿವ್ ಮತ್ತು ಜಾಫ್ರೋಜಿಯಾ ನಗರಗಳಲ್ಲಿ ಅತಂತ್ರರಾಗಿದ್ದಾರೆ. ಜನನ ಖಾರ್ಕಿವ್ ಸಮೀಪದ ಪೆಸೋಚಿನದಲ್ಲಿ ಸುಮಾರು 800 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರಲ್ಲಿ ಕರ್ನಾಟಕದ ಸುಮಾರು 50 ವಿದ್ಶಾರ್ಥಿಗಳಿದ್ದಾರೆ. ವಿಜಯಪುರದ ವಿದ್ಶಾರ್ಥಿಗಳಾದ ಅಮನ ಮಮದಾಪೂರ ಲ, ಕಾರ್ತಿಕ ಇಟ್ಟಂಗಿಗಿಹಾಳ, ಮಹಮ್ಮದ ನಾಗೂರ, ಹರ್ಷಿತ ನ್ಶಾಮಗೊಂಡ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರದ ಎಲ್ಲ ವಿದ್ಯಾರ್ಥಿಗಳನ್ನು ತ್ವರಿತವಾಗಿ ತಾಯ್ನಾಡಿಗೆ ಕರೆತರುವ ಸಲುವಾಗಿ ಬೆಂಗಳೂರಿನಲ್ಲಿರುವ ಕೇಂದ್ರ ನೋಡಕದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗುವುದು. ಅಲ್ಲದೇ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವಿಜಯಪುರ ಜಿಲ್ಲಾಡಳಿತ ಸರಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಕಾಧಿಕಾರಿ ರಮೇಶ ಕಳಸದ, ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ವಿರ್ವಹಣಾಧಿಕಾರಿ ರಾಕೇಶ ಜೈನಾಪೂರ, ಪೋಷಕರಾದ ವಿಧ್ಶಾಧರ ನ್ಶಾಮಗೊಂಡ, ರಾಜೇಂದ್ರ ಪಾಟೀಲ, ಶ್ರೀಶೈಲ ವಸ್ರದ, ಕಾಶೀನಾಥ ಇಟ್ಟಂಗಿಹಾಳ, ರಾಜೇಂದ್ರ ನಾಯಕ, ಬಸವರಾಜ ಅವಟಿ, ಬಸವರಾಜ ನಾಡಗೌಡ ಉಪಸ್ಥಿತರಿದ್ದರು.