ಉಕ್ರೇನ್ ಗಡಿದಾಟಿ ರೊಮೇನಿಯಾ ತಲುಪಿದ ಬಸವ ನಾಡಿನ ಕೊನೆಯ ನಾಲ್ಕು ವಿದ್ಯಾರ್ಥಿಗಳು- ರೋಮೆನಿಯಾದಿಂದ ಭಾರತದತ್ತ ಪಯಣ

ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ಬಸವ ನಾಡಿನ(Basava Nadu) ಒಟ್ಟು 16 ಜನರಲ್ಲಿ ಎಲ್ಲರೂ ಈಗ ಸುರಕ್ಷಿತವಾಗಿ(Safely) ಉಕ್ರೇನ್ ಗಡಿ(Border) ದಾಟಿದ್ದಾರೆ.

ಒಟ್ಟು 16 ಜನರಲ್ಲಿ ಈಗಾಗಲೇ ಮೂರು ಜನ ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ.  ಇನ್ನುಳಿದ 8 ಜನ ಈಗಾಗಲೇ ನವದೆಹಲಿ ಮತ್ತು ಬೆಂಗಳೂರು ತಲುಪಿದ್ದಾರೆ.

ಸುರಕ್ಷಿತ ಸ್ಥಳ ತಲುಪಲು ಹರಸಾಹಸಪಟ್ಟ ನಾಲ್ಕು ವಿದ್ಯಾರ್ಥಿಗಳು

ಉಕ್ರೇನಿನಲ್ಲಿಯೇ ಸಿಲುಕಿದ್ದ ನಾಲ್ಕು ಜನ ವಿದ್ಯಾರ್ಥಿಗಳಾದ ಅಮನ ಧರ್ಮರಾಯ ಮಮದಾಪುರ, ಹರ್ಷ ವಿದ್ಯಾಧರ ನ್ಯಾಮಗೊಂಡ, ಮೊಹ್ಮದ್ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ  ಯುದ್ಧ ಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ರೊಮೆನಿಯಾ ಗಡಿ ತಲುಪಲು ಸಾಕಷ್ಟು ಹರಸಾಹಸ ಪಟ್ಟ ಘಟನೆ ನಡೆದಿದೆ.

ರ್ಉಕ್ರೇನಿನಿಂದ ಸುಮಾರು 16 ಕಿ. ಮೀ. ನಡೆದುಕೊಂಡು ನಂತರ ಸುಮಾರು 45 ಗಂಟೆಗಳ ಕಾಲ ಬಸ್ಸಿನಲ್ಲಿ ಪ್ರಯಾಣಿಸಿದ ಉಳಿದ ನಾಲ್ಕು ಜನರು ಈಗ ರೊಮೆನಿಯಾಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.  ಈಗ ಈ ನಾಲ್ಕು ಜನ ರೊಮೇನಿಯಾದಿಂದ ಭಾರತದತ್ತ ಕೆಲವೇ ನಿಮಿಷಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

ಅಮನ ಮಮದಾಪುರ, ವಿದ್ಯಾಧರ ನ್ಯಾಮಗೊಂಡ, ಮೊಹ್ಮದ ಇಸ್ಮಾಯಿಲ ನಾಗೂರ, ಕಾರ್ತಿಕ್ ಇಟ್ಟಂಗಿಹಾಳ

ಉಕ್ರೇನಿನಲ್ಲಿ ಸಿಲುಕಿದ್ದ ವಿಜಯಪುರ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ಈಗ ರೋಮೆನಿಯಾ ತಲುಪಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ರೋಮೆನಿಯಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಅಮನ ಮಮದಾಪುರ ಖಾರ್ಕಿವ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದರೆ, ಕಾರ್ತಿಕ ಇಟ್ಟಂಗಿಹಾಳ, ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಪ್ ನಾಗೂರ ಮತ್ತು ವಿದ್ಯಾಧರ ನ್ಯಾಮಗೊಂಡ,ಎಂಬಿಬಿಎಸ್ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಈ ನಾಲ್ಕು ಜನ ವಿದ್ಯಾರ್ಥಿಗಳು ಮಾತ್ರ ಭಾರತದ ಇತರ ವಿದ್ಯಾರ್ಥಿಗಳ ಜೊತೆಗೆ ಈವರೆಗೆ ಉಕ್ರೇನಿನಲ್ಲಿ ಸಿಲುಕಿದ್ದರು.  ಈಗ ಈ ವಿದ್ಯಾರ್ಥಿಗಳು ಸುರಕ್ಷಿತವಾಗಿ ಉಕ್ರೇನ್ ದಾಟಿದ್ದಾರೆ. ಅಷ್ಟೇ ಅಲ್ಲ, ರೋಮೆನಿಯಾ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿರುವುದು ಆತಂಕದಲ್ಲಿದ್ದ ಪೋಷಕರಲ್ಲಿ ಸಂತಸ ಮೂಡಿಸಿದೆ.

 

Leave a Reply

ಹೊಸ ಪೋಸ್ಟ್‌