ಉಕ್ರೇನಿನಿಂದ ಬಂದ ವಿವಿಧಾಳನ್ನು ಭೇಟಿ ಕುಶಲೋಪರಿ ವಿಚಾರಿಸಿದ ಅಪ್ಪು ಪಟ್ಟಣಶೆಟ್ಟಿ ಮತ್ತೀತರರು

ವಿಜಯಪುರ: ಉಕ್ರೇನಿನಲ್ಲಿ(Ukraine) ಯುದ್ಧ ಪೀಡಿತ(War Hit) ಪ್ರದೇಶದಲ್ಲಿ ಸಿಲುಕಿ ಯಾತನೆ ಅನುಭವಿಸಿದ್ದ ವಿಜಯಪುರದ(Vijayapura) ವಿವಿಧಾ(Vividha) ಮಲ್ಲಿಕಾರ್ಜನಮಠ(Mallikarjunamath) ತವರಿಗೆ(Motherland) ವಾಪಸ್ಸಾಗಿದ್ದಾರೆ.

ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತೀತರ ಮುಖಂಡರು

ರಾತ್ರಿ ವಿಜಯಪುರಕ್ಕೆ ಬಂದ ವಿವಿಧಾ ಮಲ್ಲಿಕಾರ್ಜುನಮಠ ಅವರ ಮನೆಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ, ಮಲ್ಲಿಕಾರ್ಜುನಮಠ ಕುಟುಂಬದ ಸ್ನೇಹಿತರಾದ ಶಿವಾನಂದ ಭುಂಯ್ಯಾರ, ಶರಣು ಸಬರದ, ಸಂಪತ ಕೊವಳ್ಳಿ, ವಿವಿಧಾ ಚಿಕ್ಕಪ್ಪ ಸಿದ್ಧರಾಮಯ್ಯ ಮಲ್ಲಿಕಾರ್ಜುನಮಠ ಮುಂತಾದವರು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

ವಿವಿಧಾ ಮಲ್ಲಿಕಾರ್ಜುನಮಠ ಅವರ ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರ ಮಲ್ಲಿಕಾರ್ಜುನಮಠ ಅವರು ಉಪಸ್ಥಿತರಿದ್ದರು.

ಉಕ್ರೇನಿನಲ್ಲಿ ಎದುರಿಸಿದ ಸಂಕಷ್ಠಮಯ ದಿನಗಳು, ಅನುಭವಿಸಿದ ಯಾತನೆ, ಭಾರತ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ ಸಹಕಾರವನ್ನು ವಿವರಿಸಿದರು.

ವಿವಿಧಾಳಿಗೆ ಹಾರ ಹಾಕಿ ಸನ್ಮಾನಿಸಿದ ಮಾಜಿ ಸಚಿವರು ಸಿಹಿ ತಿನ್ನಿಸಿದರು. ಅಲ್ಲದೇ, ಮಲ್ಲಿಕಾರ್ಜುನಮಠ ಕುಟುಂಬಕ್ಕೆ ಆತ್ನಸ್ಥೈರ್ಯ ತುಂಬಿದರು.

ಇದಕ್ಕೂ ಮೊದಲು ಮನೆಗೆ ಬಂದ ಮಗಳನ್ನು ಮಲ್ಲಿಕಾರ್ಜುನಮಠ ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದರು.

Leave a Reply

ಹೊಸ ಪೋಸ್ಟ್‌