ಉಕ್ರೇನಿನಿಂದ ಮನೆಗೆ ಬಂದ ಮಗಳನ್ನು ಸಿಹಿ ತಿನ್ನಿಸಿ ಬರಮಾಡಿಕೊಂಡ ಪೋಷಕರು

ವಿಜಯಪುರ: ರಷ್ಯಾ ಯುದ್ಧ(Russia Invasion) ಸಾರಿರುವ ಉಕ್ರೇನಿನಲ್ಲಿ ಅತಂತ್ರಳಾಗಿದ್ದ(Stranded in Ukraine) ಬಸವ ನಾಡು(Basava Nadu) ವಿಜಯಪುರ(Vijayapura) ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ(Student) ಸುರಕ್ಷಿತವಾಗಿ ಮನೆ(Reached Home ತಲುಪಿದ್ದಾಳೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸುರಕ್ಷಿತವಾಗಿ ಮನೆಗೆ ತಲುಪಿದ ಯುವತಿಯಾಗಿದ್ದಾಳೆ.  ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಯುವತಿ ಯುದ್ಧ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದಾಗಿನಿಂದ ಇತರ ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಅತಂತ್ರಳಾಗಿದ್ದಳು.  ನಂತರ ಪೋಲಂಡ ತಲುಪಿ ಅಲ್ಲಿಂದ ದೆಹಲಿ ಬಂದಿದ್ದಳು.  ದೆಹಲಿಯಿಂದ ಹೊರಟ ವಿದ್ಯಾರ್ಥಿನಿ ಸೋಮವಾರ ಬೆಂಗಳೂರು ತಲುಪಿದ್ದಳು.  ಈಗ ಬೆಂಗಳೂರಿನಿಂದ ವಿಜಯಪುರಕ್ಕೆ ಬಂದಿಳಿದಿದ್ದಾಳೆ.

ಯುಕ್ರೇನಿನಿಂದ ಮನೆಗೆ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿಗೆ ಸಿಹಿ ತಿನ್ನಿಸಿದ ಪೋಷಕರು

ವಿಜಯಪುರ ನಗರದ ಗುರುಪಾದೇಶವ್ರ ನಗರದಲ್ಲಿರುವ ಮನೆಗೆ ಆಗಮಿಸಿದ ಸುಚಿತ್ರಾಳನ್ನು ಮಲ್ಲನಗೌಡ ಕವಡಿಮಟ್ಟಿಯನ್ನು ಕಂಡೊಡನೇ ಪೋಷಕರ ಸಂತಸ ಇಮ್ಮಡಿಯಾಗಿತ್ತು.  ಮನೆಗೆ ಬಂದ ಮಗಳಿಗೆ ಆರತಿ ಬೆಳಗಲಾಯಿತು.  ನಂತರ ಸಿಹಿ ತಿನ್ನಿಸಿದ ಪೋಷಕರು ಸಂತಸದ ಅಲೆಯಲ್ಲಿ ತೇಲಿದರು.

ಹೆತ್ತವರ ಕಾಲಿಗೆ ನಮಸ್ಕರಿಸಿದ ಸುಚಿತ್ರ ಮಲ್ಲನಗೌಡ ಕವಡಿಮಟ್ಟಿ ಆಶಿರ್ವಾದ ಪಡೆದಳು.  ಉಕ್ರೇನಿನ ಖಾರ್ಕಿವ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಎಂ ಬಿ ಬಿ ಎಸ್ ಮೂರನೇ ಸೆಮಿಸ್ಟರ್ ಓದುತ್ತಿದ್ದಾಳೆ.  ಇವಳ ತಂದೆ ಮಲ್ಲನಗೌಡ ಕವಡಿಮಟ್ಟಿ ವಿಜಯಪುರದ ಡಿಸಿಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.

 

ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆಯನ್ನು ಸುಚಿತ್ರಾ ಬಿಚ್ಚಿಟ್ಟಿದ್ದಾರೆ.  ಫೆಬ್ರುವರಿ 24 ರಂದು ಯುದ್ದದ ಬಗ್ಗೆ ಮಾಹಿತಿ‌ ಲಭ್ಯವಾಗಿತ್ತು.  ನಂತರ ಐದು ದಿನ ಬಂಕರ್ ನಲ್ಲಿಯೇ ಇತರ ವಿದ್ಯಾರ್ಥಿಗಳ ಜೊತೆ ಕಾಲ‌ ಕಳೆಯಬೇಕಾಯಿತು.  ಈ ಸಂದರ್ಭದಲ್ಲಿ ಊಟಕ್ಕೆ ತೊಂದರೆಯಾಗಿತ್ತು.  ಬ್ರೆಡ್, ಬಾಳೆ  ಹಣ್ಣು, ಸೇಬು ಹಣ್ಣು  ಮಾತ್ರ ಸಿಕ್ಕಿತ್ತು.  ಕುಡಿಯಲು ನೀರಿಗೂ ತೊಂದರೆ ಉಂಟಾಗಿತ್ತು.  ಮಾರ್ಚ್ 2 ರಂದು ಬಂಕರ್ ನಿಂದ 9 ಕಿ. ಮೀ. ನಡೆದುಕೊಂಡು ರೇಲ್ವೇ ನಿಲ್ದಾಣಕ್ಕೆ ಬಂದಿದ್ದೇವೆ.  ಈ ಸಂದರ್ಭದಲ್ಲಿಯೂ ನಮ್ಮ ಸಮೀಪವೇ ಬಾಂಬ್ ಧಾಳಿಯಾಗಿತ್ತು.  ನಂತರ 23 ಗಂಟೆಗಳ ಕಾಲ  ರೈಲಿನಲ್ಲಿ ಸಂಚರಿಸಿ ಪೋಲಂಡ ತಲುಪಿದೆವು.  ಪೊಲೇಂಡ್ ತಲುಪಿದ ಮರುದಿನ ಭಾರತೀಯ ರಾಯಭಾರ ಕಚೇರಿಯವರು ನಮ್ಮ ತಂಡಕ್ಕೆ ಸಹಾಯ ಮಾಡಿದರು.  ಪೊಲೇಂಡ್ ಮೂಲಕ ವಿಮಾನದ ಮೂಲಕ ನವದೆಹಲಿಗೆ ಬಂದೇವು.  ಅಲ್ಲಿಂದ ವಿದ್ಯಾರ್ಥಿಗಳೆಲ್ಲ ತಂತಮ್ಮ ರಾಜ್ಯಗಳಿಗೆ ಪ್ರಯಾಣ ಬೆಳೆಸಿದೇವು.  ಬೆಂಗಳೂರು ಮಾರ್ಗವಾಗಿ ವಿಜಯಪುರಕ್ಕೆ ಬಂದಿದ್ದೇನೆ ಎಂದು ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ತಿಳಿಸಿದ್ದಾರೆ.

ಮಗಳು ಮನೆಗೆ ಬಂದಿದ್ದರಿಂದ ಪೋಷಕರಲ್ಲಿ ಈಗ ಸಂತಸ ಮನೆ ಮಾಡಿದ್ದು, ಮನೆಮಂದಿಯೆಲ್ಲ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.  ಈ ವಿದ್ಯಾರ್ಥಿನಿಯ ಆಗಮನದೊಂದಿಗೆ ವಿಜಯಪುರಕ್ಕೆ ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ಸಂಖ್ಯೆ 3ರಕ್ಕೆ ಏರಿದೆ.  ಇನ್ನೂ 13 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಉಕ್ರೇನ್ ಗಡಿ ದಾಟಿದ್ದು, ಪೋಲಂಡ, ರೊಮೆನಿಯಾ, ನವದೆಹಲಿ, ಬೆಂಗಳೂರಿನಲ್ಲಿದ್ದಾರೆ.

Leave a Reply

ಹೊಸ ಪೋಸ್ಟ್‌