ಉಕ್ರೇನಿನಲ್ಲಿ ಬಾಕಿ ಉಳಿದಿದ್ದ ಬಸವ ನಾಡಿನ ನಾಲ್ಕು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮನ

ಬೆಂಗಳೂರು: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ವಿಜಯಪುರ ಜಿಲ್ಲೆಯ(Vijayapura District) ಉಳಿದ(Remaining) ನಾಲ್ಕು ಜನ ವಿದ್ಯಾರ್ಥಿಗಳು(Four Students) ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಯುದ್ಧ ಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು

ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು.

ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಾಲ್ಕೂ ಜನ ಯುವಕರನ್ನು ಅವರ ಪೋಷಕರು ಬರಮಾಡಿಕೊಂಡರು.  ಶಾಲು ಹೊದಿಸಿ ಸನ್ಮಾನಿಸಿ ಸಿಹಿ ತಿನ್ನಿಸಿ ಸಂತಸ ಪಟ್ಟರು.

ಈ ವಿದ್ಯಾರ್ಥಿಗಳು ಮತ್ತು ಪೋಷಕರು ರಾತ್ರಿ ಬೆಂಗಳೂರಿನಲ್ಲಿಯೇ ತಂಗಲಿದ್ದು, ಬುಧವಾರ ಸಂಜೆ ಅಥವಾ ರಾತ್ರಿಯ ವೇಳೆಗೆ ವಿಜಯಪುರಕ್ಕೆ ಆಗಮಿಸಲಿದ್ದಾರೆ.

Leave a Reply

ಹೊಸ ಪೋಸ್ಟ್‌