ಮಹೇಶ ವಿ. ಶಟಗಾರ
ವಿಜಯಪುರ: ಇದು ಬಿ. ಕಾಂ. ಮಹಿಳೆಯೊಬ್ಬರು(B. Com Graduate) 6000 ಮಹಿಳೆಯರು ಸಬಲೆಯರಾಗಲು(Women Empowerment) ತರಬೇತಿ(Training) ನೀಡಿರುವ ಮಹಿಳಾ ಸಾಧಕಿಯ ಸ್ಟೋರಿ. ಬಿ. ಕಾಂ. ಪದವೀಧರೆಯಾಗಿ ಉದ್ಯೋಗದಲ್ಲಿದ್ದರೂ ನಂತರ ಸಮಾಜದ(Society) ಇತರ ಮಹಿಳೆಯರ ಸಬಲೀಕರಣಕ್ಕೆ ನಾಂದಿ(Inspiration) ಹಾಡಿದ ಈ ಮಹಿಳೆ ಇಂದಿಗೂ(Model) ಇತರರಿಗೆ ಮಾದರಿಯಾಗಿದ್ದಾರೆ.
ಇವರೇ ವಿಜಯಪುರದ ಸಬಲಾ ಸಂಸ್ಥೆಯ ಸಂಸ್ಥಾಪಕಿ ಮಲ್ಲಮ್ಮ ಯಾಳವಾರ. ವಿಜಯಪುರ ನಗರದ ಹೊರ ವಲಯದ ಸಿಂದಗಿ ಬೈಪಾಸ್- ಆಲಮಟ್ಟಿ ರಸ್ತೆಯಲ್ಲಿ ಇರುವ ಸಬಲಾ ಸಂಸ್ಥೆ ಕಳೆದ ಮೂಕೂವಕೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಮಹಿಳೆಯರ ಪಾಲಿಗೆ ವರದಾನವಾಗಿ ಕೆಲಸ ಮಾಡುತ್ತಿದೆ. ಮಲ್ಲಮ್ಮ ಯಾಳವಾರ ಸಂಸ್ಥೆಯೊಂದರಲ್ಲಿ ಅಕೌಂಟಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ಅಷ್ಟಕ್ಕೆ ಸುಮ್ಮನಾಗದೇ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರಿಗಾಗಿ ಏನಾದರೂ ಸಹಾಯ ಮಾಡಬೇಕು ಎಂದು ಪಣ ತೋಟ್ಟು 1986ರಲ್ಲಿ ಸಬಲಾ ಎಂಬ ಸಂಘಟನೆ ಸ್ಥಾಪಿಸಿ ಯಶಸ್ವಿ ಮಹಿಳೆಯಾಗಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಿಳಗೋಳ ಗ್ರಾಮದಲ್ಲಿ ಜನಿಸಿದ ಮಲ್ಲಮ್ಮ ಯಾಳವಾರ, ಮದುವೆಯಾದ ಬಳಿಕ ಬಂದು ಸೇರಿದ್ದು ವಿಜಯಪುರ ನಗರವನ್ನು. ದೊಡ್ಡ ಕುಟುಂಬದಿಂದ ಬಾಲ್ಯದಿಂದಲೇ ಮನೆಯ ಜವಾಬ್ದಾರಿ ನಿರ್ವಹಿಸುತ್ತ ಬಂದಿದ್ದ ಇವರು ಶಿಕ್ಷಕರನ್ನು ಮದುವೆಯಾದರು. ತಾನು ಪದವೀಧರೆಯಾಗಿ ಮನೆಯಲ್ಲಿ ಕುಳಿತುಕೊಳ್ಳಬಾರದು ಎಂದು ನಿರ್ಧರಿಸಿ ಸಬಲಾ ಸಂಸ್ಥೆಯ ಮೂಲಕ ಆರಂಭಿಸಿರುವ ಸಮಾಜ ಸೇವೆ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. 1992ರಲ್ಲಿ ವರ್ಡ ಪುಡ್ ಪ್ರೋಗ್ರಾಂ (ವರ್ಡ ಬ್ಯಾಂಕ್ ನ ಸಹಾಯ ಹಸ್ತದ ಪ್ರೋಜೆಕ್ಟ) ಸಹಾಯ ಪಡೆದು ವಿಜಯಪುರ ಜಿಲ್ಲೆಯ 25 ಹಳ್ಳಿಗಳ ಸಮೀಕ್ಷೆ ಮಾಡಿ ಶಾಲೆಯಿಂದ ಹೋರಗುಳಿದ ಎರಡು ಸಾವಿರಕ್ಕೂ ಅಧಿಕ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಮಾಡಿದ್ದಾರೆ. ಆಲಮಟ್ಟಿ ಜಲಾಶಯದ ನಿರಾಶ್ರಿತ 590ಕ್ಕೂ ಅಧಿಕ ಕುಟುಂಬಗಳಿಗೆ ಮೋಟರ್ ಪಂಪ್ ರಿಪೇರಿ, ಬ್ಯಾಗುಗಳ ತಯಾರಿ ಮಾಡುವದು, ಬಟ್ಟೆ ನೇಯುವದು ಸೇರಿದಂತೆ ಹಲವು ರೀತಿಯ ತರಬೇತಿ ನೀಡಿ ಅನ್ನದಾತರಾಗಿದ್ದಾರೆ. ಇದು ತಾವು ಸೇರಿದಂತೆ ತಮ್ಮಂತೆ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಾದೇವಿ ಬಡಿಗೇರ,
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಗಿ ಮಾರಕವಾಗಿದ್ದ ದೇವದಾಸಿ ಪದ್ದತಿಯ ಕುರಿತು ಜನರಲ್ಲಿ ಇವರು ಜಾಗೃತಿ ಮೂಡಿಸಿದ್ದಾರೆ. ದೇವದಾಸಿ ಪದ್ದತಿ ನಿರ್ಮೂಲನೆಗಾಗಿ ದೇವದಾಸಿ ಕುಟುಂಬದ ಸದಸ್ಯರಿಗೆ, ಅವರ ಮಕ್ಕಳಿಗೆ ತಿಳುವಳಿಕೆ ಹೇಳುವ ಮೂಲಕ ದೇವದಾಸಿ ಪದ್ದತಿಯ ನಿರ್ಮೂಲನೆಗಾಗಿ ಕೈ ಜೋಡಿಸಿದ್ದಾರೆ. ಈ ಸಂಸ್ಥೆಯ ಮೂಲಕ ಇಂದು ಹಳ್ಳಿಗಾಡಿನಲ್ಲಿ ಅನೇಕ ಮಹಿಳೆಯರಿಗೆ ತರಬೇತಿ ಪಡೆದು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಇಲ್ಲಿಯವರೆಗೆ ಇವರು ಆರು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಬಲಾ ಸಂಸ್ಥೆಯ ಮೂಲಕ ಉಚಿತ ಕರಕುಶಲ ತರಬೇತಿಯನ್ನು ನೀಡಿ ಸ್ವಾವಲಂಬಿಯಾಗಲು ನೆರವಾಗಿದ್ದಾರೆ.
1995ರಲ್ಲಿ ಚೈತನ್ಯಾ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಈ ಬ್ಯಾಂಕಿನ ಮೂಲಕ ಕೇವಲ ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲವನ್ನು ಒದಗಿಸಲಾಗುತ್ತದೆ ಇಲ್ಲಿ ತರಬೇತಿ ಪಡೆದ ಸಾವಿರಾರು ಮಹಿಳೆಯರು ಇಂದು ಚೈತನ್ಯ ಮಹಿಳಾ ಬ್ಯಾಂಕಿನ ಮೂಲಕ ಸಾಲ ಪಡೆದು ಸ್ವಂತ ಉದ್ಯೋಗ ಕೈಗೊಂಡಿದ್ದಾರೆ.
ಆರಂಭದಲ್ಲಿ 1500 ಜನ ಮಹಿಳಾ ಶೇರುದಾರರಿಂದ ಪ್ರಾರಂಭವಾದ ಈ ಬ್ಯಾಂಕ್ ಈಗ 11 ಸಾವಿರ ಷೇರುದಾರರನ್ನು ಹೊಂದಿದೆ. ಚೈತನ್ಯ ಮಹಿಳಾ ಬ್ಯಾಂಕ್ ಈಗಾಗಲೇ ನಾಲ್ಕು ಶಾಖೆಗಳನ್ನು ಹೊಂದಿದ್ದು 32 ಜನ ಬ್ಯಾಂಕ್ ಸಿಬ್ಬಂದಿಗಳ ಪೈಕಿ 29 ಜನ ಮಹಿಳಾ ಸಿಬ್ಬಂದಿ ಇರುವುದು ಇದರ ವಿಶೇಷವಾಗಿದೆ ಎನ್ನುತ್ತಾರೆ ಇಲ್ಲಿ ಕೆಲಸ ಮಾಡುವ ಕಸ್ತೂರಿ ನಾಟಿಕಾರ ಮತ್ತು ರೇಣುಕಾ ಕಟ್ಟಿಮನಿ.
ಇಲ್ಲಿ ಕರಕುಶಲ ತರಬೇತಿ ಪಡೆದ ಮಹಿಳೆಯರು ಸಬಲಾ ಸಂಸ್ಥೆಯ ಮೂಲಕವೇ ತಮಗೆ ಬೇಕಾದ ಕಚ್ಚಾ ವಸ್ತುಗಳನ್ನು ಪಡೆದುಕೋಳ್ಳುತ್ತಾರೆ. ನಾನಾ ವಸ್ತುಗಳನ್ನು ಸಿದ್ದಪಡಿಸಿದ ಬಳಿಕ ಕೆಲವರು ಅವುಗಳನ್ನು ಸ್ವತಃ ಮಾರಾಟ ಮಾಡಿದರೆ, ಇನ್ನು ಹಲವರು ತಾವು ತಯಾರಿಸಿದ ವಸ್ತುಗಳನ್ನು ಸಬಲಾ ಸಂಸ್ಥೆಗೆ ನೀಡುತ್ತಾರೆ. ಅದನ್ನು ಖರೀದಿಸುವ ಸಬಲಾ ಸಂಸ್ಥೆಯ ಸಿಬ್ಬಂದಿ ಅವುಗಳನ್ನು ಅಮೇರಿಕಾ, ಪ್ರಾನ್ಸ, ಕೇನಡಾ, ಜಪಾನ ಮತ್ತು ಚೀನಾ ಸೇರಿದಂತೆ ನಾನಾ ದೇಶಗಳಿಗೆ ರಫ್ತು ಮಾಡುತ್ತಾರೆ. ಇದರಿಂದಾಗಿ ಉದ್ಯೋಗವೇ ಇಲ್ಲ ಎಂದು ಮನೆಯಲ್ಲಿ ಕೈ ಕಟ್ಟಿ ಕುಳಿತುಕೊಳ್ಳುವ ಸಾಕಷ್ಟು ಮಹಿಳೆಯರು ಸಬಲಾ ಸಂಸ್ಥೆಯ ತರಬೇತಿ ಮೂಲಕ ಸಾಕಷ್ಟು ಆದಾಯವನ್ನು ಸಂಪಾದಿಸುತ್ತಿದ್ದಾರೆ.
ಸಬಲಾ ಸಂಸ್ಥೆಯ ಸಮಾಜ ಕಾರ್ಯ ಎಷ್ಟು ಪ್ರಬಾವ ಬೀರಿದೆ ಎಂದರೆ ಇಲ್ಲಿ ಸಿದ್ದವಾದ ಕರಕುಶಲ ವಸ್ತುಗಳನ್ನು ವಿಕ್ಷಿಸಲು ಹಾಗೂ ಖರೀದಿಸಲು ಕರ್ನಾಟಕ ಅಷ್ಟೇ ಅಲ್ಲ, ಹೋರರಾಜ್ಯ ಮತ್ತು ವಿದೇಶಿಗರೂ ಕೂಡಾ ಇಲ್ಲಿಗೆ ಆಗಮಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಲ್ಲಮ್ಮ ಯಾಳವಾರ.
ಮಲ್ಲಮ್ಮ ಯಾಳವಾರ ಅವರ ಈ ಸಾಮಜಿಕ ಕಾಳಜಿ ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಹಲವಾರು ಪ್ರಶಸ್ತಿ ನೀಡಿ ಗೌರವಿಸಿವೆ. 1996ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, 2006ರಲ್ಲಿ ವೀರ ವನಿತೆ, 2008ರಲ್ಲಿ ಕೋಲಂಬಿಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಶ್ರೀಲಂಕಾ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್, 2012ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, 2017ರಲ್ಲಿ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಬ್ರೇಜಿಲ್ ದೇಶದಿಂದ ಉತ್ತಮ ಡಿಜೈನರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿರುವು ಮಹಿಳೆಯರ ಸ್ವಾವಲಂಬಿ ಬದುಕಿಗೆ ಮಾದರಿಯಾಗಿರುವ ಮಲ್ಲಮ್ಮ ಯಾಳವರ ಅವರ ಸಾಧನೆಗೆ ಸಾಕ್ಷಿಯಾಗಿದ್ದು, ಇತರ ಮಹಿಳೆಯರಿಗೂ ಸ್ಪೂರ್ತಿಯಾಗಿವೆ.