ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಸುನಿಲಗೌಡ ಪಾಟೀಲ ಬೇಡಿಕೆಗೆ ಸದನದಲ್ಲಿ ಪಕ್ಷಾತೀತ ಬೆಂಬಲ

ಬೆಂಗಳೂರು: ಗ್ರಾಮ ಪಂಚಾಯಿತಿ(Gram Panchayat) ಸದಸ್ಯರ(Members) ಗೌರವಧನ(Honourarium) ಹೆಚ್ಚಿಸುವಂತೆ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದವರು ವಿಧಾನ ಪರಿಷತ್ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda Patil) ಅವರು. ಈ ನಿಟ್ಟಿನಲ್ಲಿ ಈಗ ಸುನೀಲಗೌಡ ಪಾಟೀಲ ಅವರು 5ನೇ ಬಾರಿಗೆ ಮತ್ತೆ ಸದನದಲ್ಲಿ(Legislative Counsil) ಧ್ವನಿ ಎತ್ತಿದ್ದಾರೆ.  ಈ ಕುರಿತು ಸುನಿಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಮತ್ತೆ ಎತ್ತಿರುವ ಧ್ವನಿಗೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. 

ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ ಗ್ರಾ.ಪಂ ಸದಸ್ಯರ ಗೌರವಧನ ಹೆಚ್ಚಿಸುವಂತೆ ದಿ.11.12.2018, ದಿ.12.03.2021, ದಿ.15.09.2021, ದಿ.17.12.2021(ಬೆಳಗಾವಿ ಅಧಿವೇಶನ) ರಲ್ಲಿ ನಾಲ್ಕು ಬಾರಿ ಸರ್ಕಾರದ ಗಮನ ಸೆಳೆದಿದ್ದೇನೆ. ಈ ಬೇಡಿಕೆಗೆ ವಿಧಾನ ಪರಿಷತ್‍ನ ಸದಸ್ಯರು ಪಕ್ಷಾತೀತವಾಗಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದರು.

ಗ್ರಾ. ಪಂ. ಸದಸ್ಯರ ಗೌರವ ಧನ ಹೆಚ್ಚಿಲು ಆಗ್ರಹಿಸಿ ಎಂಎಲ್‌ಸಿ ಸುನೀಲಗೌಡ ಪಾಟೀಲ ಪರಿಷತ್ತಿನಲ್ಲಿ ಧ್ವನಿ ಎತ್ತಿದ್ದಾರೆ

ಕೇರಳದಲ್ಲಿ ಗ್ರಾ.ಪಂ ಅಧ್ಯಕ್ಷರಿಗೆ ಕಾರ ನೀಡಲಾಗಿದೆ. ಅಧ್ಯಕ್ಷರಿಗೆ 13200, ಉಪಾಧ್ಯಕ್ಷರಿಗೆ 10600 ಹಾಗೂ ಸದಸ್ಯರಿಗೆ 7000 ಗೌರವಧನ ನೀಡಲಾಗುತ್ತಿದೆ. 10.08.2016ರಲ್ಲಿ ಸರ್ಕಾರಿ ಆದೇಶ ಹೊರಡಿಸಿದೆ. ಅಲ್ಲಿನ ಮಹಾನಗರ ಪಾಲಿಕೆ ಮೇಯರ್ ಗಳಿಗೆ 15800, ಡಿಪ್ಯೂಟಿ ಮೇಯರ್ ಗಳಿಗೆ 13200 ಹಾಗೂ ಸದಸ್ಯರಿಗೆ 8200 ಗೌರವಧನ ನೀಡಲಾಗುತ್ತಿದೆ. ನಗರಸಭೆ ಅಧ್ಯಕ್ಷರಿಗೆ 14600, ಉಪಾಧ್ಯಕ್ಷರಿಗೆ 12000, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 9400, ಸದಸ್ಯರಿಗೆ 7600 ಗೌರವಧನ ನೀಡಲಾಗುತ್ತಿದೆ. ಈ ವ್ಯವಸ್ಥೆ ಕೇರಳದಲ್ಲಿ 2016ರಿಂದಲೇ ಜಾರಿ ಇದೆ. ಆದರೆ, ಕರ್ನಾಟಕದಲ್ಲಿ ಈಗ ಗ್ರಾ.ಪಂ ಸದಸ್ಯರಿಗೆ ಕೇವಲ 1000 ರೂಪಾಯಿ ನೀಡುವುದು ಗೌರವ ತರುವ ವಿಚಾರ ಅಲ್ಲ. ಈ ಹಣ ಕೂಡ ನಿಗದಿತ ಸಮಯಕ್ಕೆ ನೀಡಲಾಗುತ್ತಿಲ್ಲ. ಇದನ್ನು 6 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಆದ್ದರಿಂದ ಈ ಕುರಿತು ಸಚಿವರು ಗ್ರಾ.ಪಂ ಸದಸ್ಯರಿಗೆ ಕರ್ನಾಟಕ ಮಾದರಿಯಾಗುವಂತೆ ಅಧ್ಯಕ್ಷರಿಗೆ ರೂ.13000, ಸದಸ್ಯರಿಗೆ ರೂ.10000 ಗೌರವಧನ ನೀಡಲಿ. ಈ ಸದಸ್ಯರ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಿ. ಕೇರಳದಂತೆ ನಮ್ಮಲ್ಲಿ ಅಧ್ಯಕ್ಷರಾರು ಕಾರ್ ಕೇಳುತ್ತಿಲ್ಲ. ಬದಲಾಗಿ ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು ಎಂದು ಅವರು ವಿನಂತಿಸಿದರು.

 

ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಸರ್ಕಾರ ಗೌರವಧನವನ್ನು 2000 ರೂಪಾಯಿಗೆ ಹೆಚ್ಚಿಸುವ ಯೋಜನೆ ಇದೆ ಎಂದು ತಿಳಿಸಿತ್ತು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ. ಕಳೆದ ವರ್ಷ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾ.ಪಂ ಗೌರವಧನ ಹೆಚ್ಚಿಸಲು ಹೋರಾಟ ನಡೆಸುವುದಾಗಿ ಹೇಳಿದ್ದೇವು. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಸದಸ್ಯರು ಕೇಳಿದ ಪ್ರಶ್ನೆ ವಾಸ್ತವಿಕತೆಗೆ ಹತ್ತಿರವಾಗಿತ್ತು. ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾ.ಪಂ ಸದಸ್ಯರು ನಮ್ಮ ಗೌರವಧನ ಹೆಚ್ಚಳ ಹೆಚ್ಚಿಸುವುದನ್ನು ಬಿಟ್ಟು ನೀವು ಶಾಸಕರು ನಿಮ್ಮ ವೇತನವನ್ನು ಮಾತ್ರ ಹೆಚ್ಚಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಮರುದಿನವೇ ಸುದ್ದಿಗೋಷ್ಠಿ ನಡೆಸಿದ ನಾನು, ಗ್ರಾ.ಪಂ ಸದಸ್ಯರ ಗೌರವಧನ ಹೆಚ್ಚಳ ಆಗುವ ವರೆಗೆ ಶಾಸಕರಿಗೆ ಹೆಚ್ಚಿಸಲಾಗಿರುವ ವೇತನವನ್ನು ತಿರಸ್ಕರಿಸುವುದಾಗಿ ಸ್ಪಷ್ಟಪಡಿಸಿದ್ದೇನೆ. ಅಲ್ಲದೇ ಈ ಕುರಿತು ಸಭಾಪತಿಗಳಿಗೆ ಪತ್ರವನ್ನು ಕೂಡ ನೀಡಲಿದ್ದೇನೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ಸಂಸದರು ಮತ್ತು ಶಾಸಕರಿಗೆ ಅವಧಿ ಮುಗಿದ ನಂತರ ಪಿಂಚಣಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರಿಗೂ ಕನಿಷ್ಠ ಪಿಂಚಣಿ ನಿಗದಿ ಪಡಿಸಬೇಕು ಎಂದು ಸುನೀಲಗೌಡ ಪಾಟೀಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರನ್ನು ಒತ್ತಾಯಿಸಿದರು. ಅಲ್ಲದೇ, ಈ ಬೇಡಿಕೆ ಈಡೇರಿಸಿದರೆ ಅವರ ಹೆಸರು ಅಜರಾಮರವಾಗಿರಲಿದೆ ಎಂದು ಹೇಳಿದರು.

ಈ ಬೇಡಿಕೆ ಈಡೇರುವವರೆಗೆ ಎಲ್ಲ 25 ಜನ  ಸದಸ್ಯರು ಸದನದಲ್ಲಿ ಧ್ವನಿ ಎತ್ತುತ್ತೇವೆ. ಅಲ್ಲದೇ ಎಲ್ಲ ಗ್ರಾ.ಪಂ ಸದಸ್ಯರ ಬೆಂಬಲ ಪಡೆದು, ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ವೇಳೆ ಜಲಜೀವನ ಮಿಷನ್ ಯೋಜನೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯಾದ್ಯಂತ ಜಾರಿಯಾಗುತ್ತಿರುವ ಈ ಯೋಜನೆ ಜನರಿಗೆ ಅನಕೂಲವಾಗಿದೆ. ಆದರೆ, ಈ ಯೋಜನೆಗೆ ಗ್ರಾ.ಪಂಗೆ ನೀಡಲಾಗಿದೆ. 15ನೇ ಹಣಕಾಸು ಯೋಜನಯಡಿ ನೀಡಲಾಗಿರುವ ಅನುದಾನದಲ್ಲಿ ಶೇ.10ರಷ್ಟು ಹಣವನ್ನು ಬಳಸಲಾಗುತ್ತದೆ. ಇದರಿಂದ ಗ್ರಾ.ಪಂ ಗಳು 15 ನೇ ಹಣಕಾಸು ಯೋಜನೆಯಡಿ ಕೈಗೊಳ್ಳುವ ಚರಂಡಿ ಮತ್ತು ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗುತ್ತಿದೆ. ಕೆಲವೊಂದು ಗ್ರಾ.ಪಂ ಗಳಲ್ಲಿ ವಿದ್ಯುತ್ ಬಿಲ್ ಪಾವತಿಸಲು ಕೂಡ ಸಾಧ್ಯವಾಗುತ್ತಿಲ್ಲ. ವಿಜಯಪುರ ಜಿಲ್ಲೆಯ ಸಿಂದಗಿಯ ರಾಂಪೂರ ಗ್ರಾ.ಪಂ ಯಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಅವರು ಉದಾಹರಣೆ ನೀಡಿದರು.

ಉತ್ತರ ಪ್ರದೇಶದಲ್ಲಿ ಅಲ್ಲಿನ ರಾಜ್ಯ ಸರ್ಕಾರ ಜಲಜೀವನ ಮಿಷನ್ ಯೋಜನೆಗೆ ಗ್ರಾ,ಪಂ ಗಳಿಂದ ಹಣ ಪಡೆಯುವ ಬದಲು ಅಲ್ಲಿನ ಸರ್ಕಾರವೇ ವೆಚ್ಚವನ್ನು ಭರಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರವೇ ಶೇ.10ರಷ್ಟು ಹಣವನ್ನು ಭರಿಸಬೇಕು ಎಂದು ಸುನೀಲಗೌಡ ಪಾಟೀಲ ಆಗ್ರಹಿಸಿದರು.

ಅಷ್ಟೇ ಅಲ್ಲ ಸುನೀಲಗೌಡ ಪಾಟೀಲ ಅವರು ಈ ಕುರಿತು ಸದನದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಶ್ರೀ ಕೆ.ಎಸ್.ಈಶ್ವರಪ್ಪ ಅವರಿಗೆ ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಮತ್ತು ಜಲಜೀವನ ಮಿಷನ್ ಯೋಜನೆಯಡಿ ಶೇ.10ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ಮನವಿ ಪತ್ರ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌