ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಸವ ನಾಡಿಗೆ ಮರಳಿದ ಕೊನೆಯ ನಾಲ್ಕು ವಿದ್ಯಾರ್ಥಿಗಳು- ಅಮನ್ ಮನೆಯಲ್ಲಿ ಸಂಭ್ರಮ

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡಿನ ಒಟ್ಟು 16 ವಿದ್ಯಾರ್ಥಿಗಳಲ್ಲಿ ಕೊನೆಯ ನಾಲ್ಕು ಜನ ವಿದ್ಯಾರ್ಥಿಗಳು ರಾತ್ರಿ ವಿಜಯಪುರ ತಲುಪಿದ್ದಾರೆ.

ಮನೆಗೆ ಬಂದ ಅಮನ್ ಗೆ ಸಿಹಿ ತಿನ್ನಿಸಿದ ತಂದೆ ಧರ್ಮರಾಯ ಮಮದಾಪುರ

ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.  ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ಈ ವಿದ್ಯಾರ್ಥಿಗಳು ರಾತ್ರಿ ವಿಜಯಪುರ ತಲುಪಿದ್ದಾರೆ.

ಮನೆಗೆ ಬಂದ ಅಮನ್ ಗೆ ಸಿಹಿ ತಿನ್ನಿಸಿದ ತಾಯಿ ಮಂಜುಳಾ ಮಮದಾಪುರ

ಅಮನ್ ಮಮದಾಪುರ ಕರೆದುಕೊಂಡು ಬರಲು ಬೆಂಗಳೂರಿಗೆ ತೆರಳಿದ್ದ ಅವರ ತಂದೆ ಧರ್ಮರಾಯ ಮಮದಾಪುರ, ಮಗನೊಂದಿಗೆ ರಾತ್ರಿ ವಿಜಯಪುರಕ್ಕೆ ಆಗಮಿಸಿದರು.  ಮನಗೆ ಬಂದ ಅಮನ್ ನನ್ನು ತಾಯಿ ಮತ್ತು ಸಂಬಂಧಿಕರು ಸ್ವಾಗತಿಸಿದರು.  ಈ ಸಂದರ್ಭದಲ್ಲಿ ಅಮನ ಮಮದಾಪುರ ನಿವಾಸಕ್ಕೆ ಆಗಮಿಸಿದ ಅವರ ಕುಟುಂಬದ ಸ್ನೇಹಿತರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಅಮನನ್ನು ಸನ್ಮಾನಿಸಿ ಸಿಹಿ ತಿನ್ನಿಸಿ ಧೈರ್ಯ ತುಂಬಿದರು.  ಅಲ್ಲದೇ, ಅಮನ ಯುದ್ಧಭೂಮಿಯಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಕೇಳಿ ತಿಳಿದುಕೊಂಡರು.

ಮನೆಗೆ ಭೇಟಿಯಾಗಲು ಬಂದ ತಮ್ಮ ಕುಟುಂಬದ ಹಿರಿಯ ಸ್ನೇಹಿತರು ಮತ್ತು ಸಂಬಂಧಿಕರನ್ನು ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವ ಮೂಲಕ ಅಮನ ಮಮದಾಪುರ, ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು.

ಕಳೆದ 15 ದಿನಗಳಿಂದ ಆತಂಕದಲ್ಲಿಯೇ ದಿನ ಕಳೆದಿದ್ದ ಅಮನ ತಂದೆ-ತಾಯಿ ಮತ್ತು ಸಂಬಂಧಿಕರು ಅಮನ ಸುರಕ್ಷಿತವಾಗಿ ಮನೆಗೆ ಮರಳಿದ್ದರಿಂದ ಸಂತಸಪಟ್ಟರು.

Leave a Reply

ಹೊಸ ಪೋಸ್ಟ್‌