ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukraine) ವಾಪಸ್ಸಾದ(Returned) ವಿಜಯಪುರ ನಗರದ ಆದರ್ಶ ನಗರದ(Adarsh Nagar) ಅಮನ ಮಮದಾಪುರ(Aman Mamadapur) ಮತ್ತು ಅವರ ಕುಟುಂಬ ಸದಸ್ಯರನ್ನು(Family Members) ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಭೇಟಿ ಮಾಡಿದರು.

ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಭೇಟಿ ಮಾಡಿ ಶುಭ ಕೋರಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ರಾತ್ರಿ ವಿಜಯಪುರಕ್ಕೆ ಅಮನ ಮಮದಾಪುರ ತಮ್ಮ ತಂದೆ ಧರ್ಮರಾಯ ಮಮದಾಪುರ ಜೊತೆ ವಿಜಯಪುರಕ್ಕೆ ಮರಳಿದ್ದರು.  ಈ ವಿಷಯ ತಿಳಿದ ಅಪ್ಪು ಪಟ್ಟಣಶೆಟ್ಟಿ ತಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಬೆಂಬಲಿಗರಾದ ಸನ್ನಿ ಗವಿಮಠ ಅವರೊಂದಿಗೆ ಆದರ್ಶ ನಗರಕ್ಕೆ ತೆರಳಿದರು.  ಅಲ್ಲದೇ, ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಅಮನ ಗೆ ಶುಭ ಕೋರಿದರು.  ಅಲ್ಲದೇ, ಸಿಹಿ ತಿನ್ನಿಸಿ ಕುಶಲೋಪರಿ ವಿಚಾರಿಸಿದರು.  ಈ ಸಂದರ್ಭದಲ್ಲಿ ವಿದ್ಯಾರ್ಥಿ ಅಮನ ಮಮದಾಪುರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

 

ನಂತರ ಸುಮಾರು ಹೊತ್ತು ಅಮನ ಮಮದಾಪುರ ಜೊತೆ ಉಕ್ರೇನಿಲ್ಲಿ ಇರುವ ಪರಿಸ್ಥಿತಿ ಕುರಿತು ಅವರು ಮಾಹಿತಿ ಪಡೆದರು.  ಈ ಸಂದರ್ಭದಲ್ಲಿ ಮಾತನಾಡಿದ ಅಮನ ಮಮದಾಪುರ, ತಾನು ಓದುತ್ತಿರುವ ವಿಶ್ವವಿದ್ಯಾಲಯ, ಯುದ್ಧದ ವಾತಾವರಣ, ಬಂಕರ್ ನಲ್ಲಿ ಕಳೆದ ದಿನಗಳು, ಅಲ್ಲಿದ್ದ ವ್ಯವಸ್ಥೆಗಳು, ನಡೆದುಕೊಂಡು ಮತ್ತು ಬಸ್ಸಿನಲ್ಲಿ ಬಂದು ಸುರಕ್ಷಿತವಾಗಿ ಉಕ್ರೇನ್ ಗಡಿ ದಾಟಿ ರೋಮೆನಿಯಾ ತಲುಪುವ ವರೆಗಿನ ಕ್ಷಣಗಳ ಕುರಿತು ಮಾಹಿತಿ ನೀಡಿದರು.  ಅಲ್ಲದೇ, ಉಕ್ರೇನ್ ಗಡಿ ದಾಟಿದ ನಂತರ ಭಾರತದ ರಾಯಭಾರ ಕಚೇರಿ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು ತಮ್ಮನ್ನು ಭಾರತಕ್ಕೆ ಮರಳು ಮಾಡಿದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ ನಮಗಾರಿಗೂ ಯುದ್ಧದ ಅನುಭವವಿಲ್ಲ.  ನಾವೆಲ್ಲ ಸುರಕ್ಷಿತ ಸ್ಥಳದಲ್ಲಿದ್ದೇವೆ.  ಆದರೆ, ಯುದ್ಧ ಪೀಡಿತ ಪ್ರದೇಶದಲ್ಲಿ ಅಮನ ಮತ್ತು ಇತರ ಭಾರತೀಯ ವಿದ್ಯಾರ್ಥಿಗಳು ಕಳೆದ ಸಂಕಷ್ಟದ ದಿನಗಳು ಭಾರತದಲ್ಲಿರುವ ಎಲ್ಲರಿಗೂ ಆತಂಕ ಮೂಡಿಸಿದ್ದವು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಮನ ಮಮದಾಪುರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌