ಮುಂಬರುವ ದಿನಗಳಲ್ಲಿ ನಿರ್ಮಾಣೋದ್ಯಮ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಿದೆ- ಡಾ. ಅತುಲ ಆಯಿರೆ

ವಿಜಯಪುರ: ಮುಂಬರುವ ದಿನಗಳಲ್ಲಿ ದೇಶಾದ್ಯಂತ ನಗರ ಮತ್ತು ಗ್ರಾಮೀಣ ಎರಡೂ ಭಾಗಗಳಲ್ಲಿ ನಿರ್ಮಾಣೋದ್ಯಮ ವೇಗವಾಗಿ ಬೆಳವಣಿಗೆಯಾಗಲಿದೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ‌. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅತುಲ್ ಆಯಿರೆ ಹೇಳಿದ್ದಾರೆ.

ಅಟಲ್ ಯೋಜನೆಯಡಿ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸಿವಿಲ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಅಡ್ವಾನ್ಸ್ ಸರ್ವೇಯಿಂಗ್ ಯುಸಿಂಗ್ ಟೋಟಲ್ ಸ್ಟೇಷನ್ ಆ್ಯಂಡ್ ಡ್ರೋಣ್ ವಿಷಯ ಕುರಿತು ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಆಧುನೀಕರಣ ಮತ್ತು ಗುಣಮಟ್ಟದ ನಿರ್ಮಾಣ ಸದ್ಯದ ಅಗತ್ಯವಾಗಿದೆ. ಯಾವುದೇ ನಿರ್ಮಾಣ ಕಾರ್ಯಕ್ಕೆ ಮೊದಲು ಸಮೀಕ್ಷೆ ಅತ್ಯಗತ್ಯ. ಯೋಜನೆ ಮತ್ತು ಅತ್ಯಾಧುನೀಕ ವಿನ್ಯಾಸಗಳು ಈಗಿನ ಕಾಮಗಾರಿಗಳ ಎಂಜನಿಯರಿಂಗ್ ವಿಭಾಗದ ಪ್ರಮುಖ ಘಟ್ಟಗಳಾಗಿವೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಪ್ರಗತಿಯೊಂದಿಗೆ ನಿಖರತೆ ಮತ್ತು ಸಮಗ್ರ ದತ್ತಾಂಶ ಸಂಗ್ರಹ, ಸಮೀಕ್ಷೆ ಉಪಕರಣಗಳು ಮತ್ತು ತಂತ್ರಾಂಶಗಳನ್ನು ಈಗ ಅಭಿವೃದ್ಧಿ ಪಡಿಸಲಾಗಿದೆ. ಇದು ನಿರ್ಮಾಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಡಾ. ಅತುಲ ಆಯಿರೆ ಹೇಳಿದರು.

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜು ಸಿವಿಲ್ ವಿಭಾಗಕ್ಕೆ ಅಟಲ್ ಯೋಜನೆಯಡಿ ಎಫ್ ಡಿ ಪಿ ನಡೆಸಲು ರೂ. 93000 ಮಂಜೂರಾಗಿದೆ. ಈ ಅನುದಾನವನ್ನು ಕಾಲೇಜು ಸದುಪಯೋಗ ಪಡಿಸಿಕೊಂಡಿದೆ ಎಂದು ಡಾ. ಅತುಲ್ ಆಯಿರೆ ತಿಳಿಸಿದರು.

ಈ ಕಾರ್ಯಾಗಾರವನ್ನು ಅಮೇರಿಕಾದ ಇನ್‍ಸ್ಟಿಟ್ಯೂಟ್ ಬ್ಯೂಸಿನೇಸ್ ಮತ್ತು ಜಿಯೋ ವಿಭಾಗದ ಹಿರಿಯ ಉಪಾಧ್ಯಕ್ಷ ವಿನೋದ ಚೌಧರಿ, ಎಐಸಿಟಿಇ ಸದಸ್ಯ ಕಾರ್ಯದರ್ಶಿ ಪ್ರೊ. ರಾಜೀವ ಕುಮಾರ ಹಾಗೂ ಸಲಹಾ ಸಮಿತಿ ಸದಸ್ಯೆ ಮಮತಾ ಅಗರವಾಲ್ ಉದ್ಘಾಟಿಸಿದರು.

ಈ ಕಾರ್ಯಾಗಾರದಲ್ಲಿ 160 ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌