ಎಂ ಎಲ್ ಸಿ ಅರುಣ ಶಹಾಪುರ, ಹಣಮಂತ ನಿರಾಣಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಬೆಂಬಲಿಗರಿಂದ ಶುಭ ಕೋರಿಕೆ

ವಿಜಯಪುರ: ವಿಧಾನ ಪರಿಷತ(Legislative Council) ಹಾಲಿ(Sitting) ಸದಸ್ಯರಾದ(MLC) ಅರುಣ ಶಹಾಪುರ(Shahapur) ಮತ್ತು ಹಣಮಂತ ನಿರಾಣಿ(Hanamant Nirani) ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ.

ಅರುಣ ಶಹಾಪುರ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಆಯ್ಕೆಯಾಗಿದ್ದು, ಈಗ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದ್ದಾರೆ.  ಇವರಿಗೆ ಈಗ ಮೂರನೇ ಬಾರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಬಿಜೆಪಿ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಅರುಣ ಶಹಾಪುರ ಬೆಂಬಲಿಗರು ಶುಭ ಕೋರಿದರು

ಈ ಮಧ್ಯೆ, ಎಂ ಎಲ್ ಸಿ ಹಣಮಂತ ನಿರಾಣಿ ಅವರಿಗೆ ಪದವೀಧರ ಕ್ಷೇತ್ರದಿಂದ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ.

ಮತ್ತೋಂದೆಡೆ ಬಿಜೆಪಿ ಹೈಕಮಾಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಎಂ. ವಿ. ರವಿಶಂಕರ ಅವರಿಗೆ ಟಿಕೆಟ್ ನೀಡಿದೆ.

ಬೆಂಗಳೂರಿನಲ್ಲಿರುವ ಅರುಣ ಶಹಾಪುರ ಅವರನ್ನು ಭೇಟಿ ಮಾಡಿದ ಬೆಂಬಲಿಗರಾದ ಸಂಪತ ಕೋವಳ್ಳಿ, ರಾಜು ವಾಲಿ, ಗಿರೀಶ್ ಕಳಸರೆಡ್ಡಿ ಮತ್ತು ಪ್ರಶಾಂತ ಅಪರಾಜ ಶುಭ ಕೋರಿದರು.

Leave a Reply

ಹೊಸ ಪೋಸ್ಟ್‌