ವಿಜಯಪುರ: ರೈತರ ಅಲೆದಾಟ(Fatmers Problem)ತಪ್ಪಿಸಲು ರಾಜ್ಯ ಸರಕಾರ (State Government)ಕಂದಾಯ(Revenue) ದಾಖಲೆ(Records) ಮನೆ ಬಾಗಿಲಿಗೆ ಯೋಜನೆಯನ್ನು ರೂಪಿಸಿದ್ದು, ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Tatnal) ಹೇಳಿದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಿಕೋಟಾ ತಾಲೂಕಾಡಾಳಿತ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತಾರ ಅಲೆದಾಟ ತಪ್ಪಿಸಲು ರಾಜ್ಯ ಸರಕಾರವು ಕಂದಾಯ ದಾಖಲೆ ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಮುಂಬರುವ ದಿನಗಳಲ್ಲಿ ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇನ್ನುಮುಂದೆ ತಿಂಗಳುಗಟ್ಟಲೇ ರೈತರು ತಮ್ಮ ದಾಖಲೆಗಾಗಿ ಕಾಯುವಂತಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇದೇ ವೇಳೆ ಶಾಸಕರು ಹಾಗೂ ಅಧಿಕಾರಿಗಳು ತೊರವಿ ಗ್ರಾಮದಲ್ಲಿ ಮನೆಮನೆಗೆ ಹೋಗಿ ರೈತರಿಗೆ ದಾಖಲಾತಿಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ತೊರವಿ ಗ್ರಾ. ಪಂ. ಅಧ್ಯಕ್ಷೆ ಗಂಗವ್ವ ಬಾಗಾಯತ, ಕಾರ್ಯ ನಿರ್ವಾಹಣಾಅಮಧಿಕಾರಿ ರಾಜೇಶ, ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ ಸುರೇಶ್ ಕಳ್ಳಿಮನಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಆರ್. ಬಿ. ಬಡಿಗೇರ್ , ತಿಕೋಟಾ ತಹಶಿಲ್ದಾರ ಮಲ್ಲಿಕಾರ್ಜುನ ಅರಕೇರಿ ಮತ್ತು ಗ್ರೇಡ್-2 ತಹಶಿಲ್ದಾರ ಸೋಮಲಿಂಗ ಅರಿಕೇರಿ, ಮುಖಂಡ ಅಡಿವೆಪ್ಪ ಸಾಲಗಲ ಸೇರಿದಂತೆ ಇತರರು ಉಪಸ್ಥಿತರಿದ್ದರು.