ವಿಜಯಪುರ: ವಿಧಾನ(Legislative) ಪರಿಷತ್(Council) ಚುನಾವಣೆ(Election) ಕಾವು(Heat) ಹೆಚ್ಚಾಗುತ್ತಿದೆ. ವಾಯುವ್ಯ ಶಿಕ್ಷಕರ(Teachers) ಮತ್ತು ಪದವೀಧರ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಹಾಲಿ ಎಂ ಎಲ್ ಸಿ ಗಳಿಗೆ ಟಿಕೆಟ್ ನೀಡಿದೆ.
ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಗಾಗಿ ಲಾಬಿ, ಒತ್ತಾಯಗಳು ಹೆಚ್ಚಾಗುತ್ತಿವೆ. ಸಮಾಜ ಸೇವಕ, ಶೈಕ್ಷಣಿಕ ಚಿಂತಕ, ನ್ಯಾಯವಾದಿ ಮತ್ತು ರಾಜಕಾರಣೊಯೂ ಆಗಿರುವ ಸಂಗಮೇಶ ಬಬಲೇಶ್ವರ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಈ ಮುಲಕ ಕಾಂಗ್ತೆಸ್ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ.
ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಆಪ್ತ ವಲಯದಲ್ಲಿರುವ ಸಂಗಮೇಶ ಬಬಲೇಶ್ವರ ಕತ್ನಳ್ಳಿ ಮಠದ ಭಕ್ತರಾಗಿದ್ದಾರೆ. ಜ್ಞಾನ ಜೋಳಿಗೆ ಮೂಲಕ ಓದಿದ ಪುಸ್ತಕಗಳನ್ನು ಸಂಗ್ರಹಿಸಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ವಾಚನಾಲಯಗಳಿಗೆ ನೀಡುವ ಮೂಲಕ ಬಡ ಮಕ್ಕಳಿಗೆ ಜ್ಞಾನ ದಾಸೋಹ ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಅಮ್ಮನ ಮಡಿಲು ಚಾರಿಟೇನಲ್ ಟ್ರಸ್ಟ್ ಮೂಲಕ ಅರ್ಧ ಶುಲ್ಕ ಮಾತ್ರ ಪಡೆದು ಕೊರೊನಾ ಸಂಕಷ್ಡದಲ್ಲಿದ್ದ ಪೋಷಕರಿಗೂ ಸಹಾಯ ಮಾಡಿದ್ದಾರೆ.
ತಮ್ನ ವಾಕ್ಚಾತುರ್ಯದ ಮೂಲಕ ಜನಮಾನಸದಲ್ಲಿರುವ ಸಂಗಮೇಶ ಬಬಲೇಶ್ವರ ಕಾಂಗ್ರೆಸ್ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ಈಗಾಗಲೇ ಮತದಾರರೊಂದಿಗೆ ಸಂಪರ್ಕವನ್ನೂ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಈಗ ಸಂಗಮೇಶ ಬಬಲೇಶ್ವರ ಅವರಿಗೆ ಶಿಕ್ಷಕರ ಮತಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಲವಾಗಿ ಆಗ್ರಹಿಸುತ್ತಿದ್ದಾರೆ.
ಕೊರೊನಾ ಸಂಕಷ್ಟ ಸಮಯದಲ್ಲಿ ವಿಜಯಪುರ ಜಿಲ್ಲೆಯ ನೂರಾರು ರೋಗಿಗಳಿಗೆ ಬೆಡ್, ಆಕ್ಸಿಜನ್ ಮತ್ತಿತರ ಸೌಲಭ್ಯ ಒದಗಿಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಅಲ್ಲದೆ ಎಲ್ಲ ಪಕ್ಷಗಳ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಅವರಲ್ಲಿರುವ ಗುಣಾತ್ಮಕ ಅಂಶಗಳಲ್ಲಿ ಪ್ರಮುಖವಾಗಿದೆ. ಈ ಎಲ್ಲ ಮಾಹಿತಿಗಳನ್ನು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಪೋಸ್ಡ್ ಗಳು ಈಗ ವೈರಲ್ ಆಗುತ್ತಿದೆ.
ಬಸವ ತತ್ವ ಪರಿಪಾಲಕರಾಗಿರುವ ಅವರಿಗೆ ವಿಧಾನ ಪರಿಷತ್ತಿನಲ್ಲಿ ವಾಯುವ್ಯ ಶಿಕ್ಷಕರ ಧ್ವನಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ಈ ಮೂಲಕ ಶಿಕ್ಷಕರ ಆತ್ಮಗೌರವವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡೋಣ ಎಂದು ಅಭಿಮಾನಿಗಳಯ ಅಭಿಯಾನ ನಡೆಸಲಾಗುತ್ತಿದ್ದಾರೆ.
ಈ ಕುರಿತು ಸಂಗಮೇಶ ಬಬಲೇಶ್ವರ ಅವರ ಅಭಿಪ್ರಾಯ ಕೇಳಿದಾಗ ತಾವೊಬ್ನ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಇ ಕಾಂಗ್ರೆಸ್ ಹೈಕಮಾಂಡ ವಹಿಸುವ ಜವಾಬ್ದಾರಿ ಶಿರಸಾವಹಿಸಿ ಪಾಲಿಸುವೆ ಎಂದು ತಿಳಿಸಿದ್ದಾರೆ.
ಸದಾ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ಸಂಗಮೇಶ ಬಬಲೇಶ್ವರ ಅವರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕುವ ನಿರೀಕ್ಷೆ ಅವರ ಬೆಂಬಲಿಗರಲ್ಲಿದೆ.