ಬತ್ತಿದ ಭೀಮಾ ನದಿಯಲ್ಲಿ ಬಂತು ಮಹಾ ನೀರು- ಬಸವ ನಾಡು ವರದಿ ಫಲಶೃತಿ

ವಿಜಯಪುರ: ಕಳೆದ(Last) ಎರಡು(Two) ತಿಂಗಳಿಂದ(Months) ಬತ್ತಿ(Dry) ಹೋಗಿದ್ದ ಬೀಮೆ ನದಿಯಲ್ಲಿ(Bherma River) ಈಗ ನೀರುWater) ಬಂದಿದೆ.

ಈ ಕುರಿತು ಬಸವ ನಾಡು ಫೆ. 21ರಂದು *ಬತ್ತಿದ ಭೀಮಾ ನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುಚಂತೆ ಭೀಮಾ ತೀರದ ರೈತರ ಒತ್ತಾಯ* ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟ ಮಾಡಲಾಗಿತ್ತು.

ಈ ವರದಿಯನ್ನೂ ಓದಿ:

ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ

ಅಲ್ಲದೇ, ಬಸವ ನಾಡು ವಿಜಯಪುರ ಜಿಲ್ಲೆಯ ಭೀಮಾ ನದಿ ಬತ್ತಿರುವುದು ರೈತರು ಪಡುತ್ತಿರುವ ಸಂಕಷ್ಟಗಳ ಕುರಿತು ಗಮನ ಸೆಳೆಯಲಾಗಿತ್ತು.

ಭೀಮಾ ನದಿಗೆ ಉಮರಾಣಿ ಬಳಿ ನೀರು ಬಂದಿದ್ದು ಬ್ಯಾರೇಜ್ ಮೇಲೆ ಕುಳಿತ ರೈತರು ವೀಕ್ಷಿಸಿದರು

ಭೀಮಾ ನದಿ ಪಾತ್ರ ಮತ್ತು ಈ ನದಿ ಜಲವನ್ನೇ ನಂಬಿರುವ ಮಣ್ಣಿನ‌ ಮಕ್ಕಳ ಸಮಸ್ಯೆ ಕುರಿತು ವಿಸ್ತೃತವಾದ ವರದಿ ಪ್ರಕಟ ಮಾಡಲಾಗಿತ್ತು.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ

ಬಸವ ನಾಡಿನಲ್ಲಿ ಈ ಕುರಿತು. ಫೇ. 21 ರಂದು ಈ ವರದಿ ಪ್ರಕಟವಾದ ನಂತರ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ಮಹಾರಾಷ್ಟ್ರದೊಂದೊಗೆ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿ ಭೀಮಾ ನದಿಗೆ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದರು.

ಈ ಎಲ್ಲ ಪ್ರಯತ್ನದ ಫಲವಾಗಿ ಈಗ ಭೀಮಾ ನದಿಗೆ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದೆ. ಈ ನೀರು ಈಗ ರಾಜ್ಯದ ದಸೂರ, ಗೋವಿಂದಪುರ ದಾಟಿ ಉಮರಾಣಿ ತಲುಪಿದೆ. ಇದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ ಎಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ‌ ಉಮರಾಣಿಯ ರೈತರಾದ ಲಕ್ಷ್ಮಣ ಚಿಂಚೋಳಿ, ಸುಭಾಷ ಭೈರಗೊಂಡ ಮತ್ತು ಅನೀಲ ಕೋಳಿ.

ಈಗ ಈ ನೀರು ಉಮರಾಣಿ ಬ್ಯಾರೇಜ್ ತುಂಬಿ ಮುಂದಕ್ಕೆ ಹರಿಯುತ್ತಿದೆ.

ಭೀಮಾ ನದಿಯಲ್ಲಿ ಸದಾ ನೈಸರ್ಗಿಕ ಹರಿವು ಕಾಪಾಡಬೇಕು. ಪ್ರಾಣಿ, ಪಕ್ಷಿಗಳಿಗೆ ಬದುಕಲು ನೀರು ಅನಿವಾರ್ಯವಾಗಿದೆ ಎಂದು ಆಗ್ರಹಿಸಿ 2000 ರಲ್ಲಿಯೇ ಭೀಮಾ ಹೋರಾಟಗಾರ ಪಂಚಪ್ಪ ಕಲಬುರ್ಗಿ ಸುಪ್ರೀಂ ಕೋರ್ಟಿನಲ್ಲಿ ಕೇಸ್ ಹಾಕಿದ್ದರು. ಅಲ್ಲದೇ, ಅಂದಿನ ದಿನಗಳಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳಿಗೂ ಈ ನಿಟ್ಟಿನಲ್ಲಿ ನ್ಯಾಯಾಲಯದ ಮೂಲಕ ನಿರ್ದೇಶನ ಹೊರಡಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಈಗಲೂ ಕೂಡ ಭೀಮಾ ನದಿಯಲ್ಲಿ ಬೇಸಿಗೆಯಲ್ಲಿಯೀ ನೀರಿನ ನೈಸರ್ಗಿಕ ಹರಿವು ಕಾಪಾಡುವಂತೆ ಕರ್ನಾಟಕ ಸರಕಾರ ಕ್ರಮ ಕೈಗೊಂಡರೆ ಭೀಮಾ ತೀರದ ಮಣ್ಣಿನ‌ ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

Leave a Reply

ಹೊಸ ಪೋಸ್ಟ್‌