ಬೆಂಗಳೂರು: ಅನುದಾನಕ್ಕೆ(Grant) ಒಳಪಡಿಸುವಂತೆ ಆಗ್ರಹಿಸಿ(Demand) ಅನುದಾನ ರಹಿತ ಐಟಿಐ(Ungranted ITI) ಕಾಲೇಜುಗಳ ಸಿಬ್ಬಂದಿಗಳುCollage Staff) ಕೈಗೊಂಡಿರುವ ಪಾದಯಾತ್ರೆ(Padayatre) ಬೆಂಗಳೂರು(Bengaluru) ತಲುಪಿದೆ.
ಹುಬ್ಬಳ್ಳಿಯಿಂದ ಆತಂಭವಾದ ಈ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಈ ಸಿಬ್ಬಂದಿಯನ್ನು ಎಂ ಎಲ್ ಸಿ ಅರುಣ ಶಹಾಪುರ ಬರಮಾಡಿಕೊಂಡರು. ಅಲ್ಲದೇ, ಪಾದಯಾತ್ರೆಯಲ್ಲಿ ಬಂದ ಹೋರಾಟನಿರತ ಸಿಬ್ಬಂದಿಯ ಜೊತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಕಛೇರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿದರು.
ಅಲ್ಲದೇ, ಅನುದಾನ ರಹಿತ ಐಟಿಐಗಳ ಸಮಸ್ಯೆ ಕುರಿತು ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದರು. ಅಷ್ಡೇ ಅಲ್ಲ, ಹೋರಾಟ ಮಾಡುತ್ತಿರುವ ಸಿಬ್ಬಂದಿಯ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ. ವಿ. ರವಿಶಂಕರ ಉಪಸ್ಥಿತರಿದ್ದರು.