ಭ್ರಷ್ಟ ಅಧಿಕಾರಿಯ ಅಸಮತೋಲಿತ ಆಸ್ತಿ ಆದಾಯಕ್ಕಿಂತ ಶೇ. 929 ಹೆಚ್ಚು- ಎಸಿಬಿ ಅಧಿಕಾರಿಗಳ ಲೆಕ್ಕಾಚಾರ- ಒಟ್ಟು ಆಸ್ತಿ ಎಷ್ಟು ಗೊತ್ತಾ?

ವಿಜಯಪುರ: ಭ್ರಷ್ಟ(Corrupt) ಅಧಿಕಾರಿ(Officer) ನಿವಾಸ(Residence), ಕಚೇರಿ(Office) ಮತ್ತೀತರ ಕಡೆ ಬೆಳಗಿನ(Morning) ಜಾವ ಧಾಳಿ(Raid) ನಡೆಸಿದ್ದ ಎಸಿಬಿ ಅಧಿಕಾರಿಗಳು ಆದಾಯಕ್ಕಿಂತ ಶೇ. 929 ರಷ್ಟು ಹೆಚ್ಚಿನ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಡೈರೆಕ್ಟರ್ ಗೋಪಿನಾಥಸಾ ನಾಗೇಂದ್ರಸಾ ಮಲಜಿ

ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ನಾಗೇಂದ್ರಸಾ ಮಾಲಜಿ ಅವರಿಗೆ ಸೇರಿದ ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀನಗರ ಕಾಲನಿ ಉತ್ತರದಲ್ಲಿ ಪ್ಲಾಟ್ ನಂ. 57ರ ಮೇಲೆ ಎಸಿಬಿ ಅಧಿಕಾರಿಗಗಳು ಬೆಳಿಗ್ಗೆ ಧಾಳಿ ನಡೆಸಿದ್ದರು.  ಇದರ ಜೊತೆಯಲ್ಲಿಯೇ ಐದು ಪ್ರತ್ಯೇಕ ಸ್ಥಳಗಳಲ್ಲಿ ಇವರಿಗೆ ಆಸ್ತಿಪಾಸ್ತಿ ಲೆಕ್ಕಾಚಾರ ಕೈಗೊಂಡಿದ್ದರು.  ಮೊದಲಿಗೆ ಬಂದ ದೂರಿನಂತೆ ಅಸಮತೋಲಿತ ಆಸ್ತಿ ಆದಾಯಕ್ಕಿಂತ ಶೇ. 167.8 ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದರು.  ಆದರೆ, ಇಡೀ ದಿನ ಅಳೆದು ತೂಗಿ ಲೆಕ್ಕಾಚಾರ ಹಾಕಿದಾಗ ಆದಾಯಕ್ಕಿಂತ ಶೇ. 929 ರಷ್ಟು ಅಸಮತೋಲಿತ ಆಸ್ತಿಪಾಸ್ತಿ ಪತ್ತೆ ಮಾಡಿದ್ದಾರೆ.

ವಿಜಯಪುರದಲ್ಲಿ ಧಾಳಿಯಲ್ಲಿ ಪಾಲ್ಗೋಂಡಿರುವ ಎಸಿಬಿ ಅಧಿಕಾರಿಗಳು

ವಿಜಯಪುರ ಮತ್ತು ಬೆಳಗಾವಿ ಎಸಿಬಿ ಅಧಿಕಾರಿಗಳ ತಂಡ ಬೆಳಗಾವಿ ಎಸಿಬಿ ಎಸ್ಪಿ ಬಿ. ಎಸ್. ನೇಮೆಗೌಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆಸಿದೆ.  ಈ ಕಾರ್ಯಾಚರಣೆಯಲ್ಲಿ ವಿಜಯಪುರ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ, ಇನ್ಸಪೆಕ್ಟರ್ ಗಳಾದ ಪರಮೇಶ್ವರ ಕವಟಗಿ, ಚಂದ್ರಕಲಾ, ಮತ್ತು ಬೆಳಗಾವಿ ಎಸಿಬಿ ಡಿವೈಎಸ್ಪಿ ಕರುಣಾಕರ ಶೆಟ್ಟಿ, ಇನ್ಸಪೆಕ್ಟರ್ ಅಡಿವೇಶ ಗೂದಿಗೊಪ್ಪ ಮತ್ತು ಸುನೀಲಕುಮಾರ ಹಾಗೂ 20 ಜನ ಸಿಬ್ಬಂದಿ ಪಾಲ್ಗೋಂಡಿದ್ದರು.

ವಿಜಯಪುರದಲ್ಲಿ ಧಾಳಿಯಲ್ಲಿ ಪಾಲ್ಗೋಂಡಿರುವ ಎಸಿಬಿ ಅಧಿಕಾರಿಗಳು

ಬಸವ ನಾಡು ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ

ಧಾಳಿ ನಡೆಸಿದ ಸ್ಥಳಗಳು

  1. ವಿಜಯಪುರದ ನಿವಾಸ, ಕಚೇರಿ, ಸ್ಟೋರ್ ರೂಮ್,
  2. ವಿಜಯಪುರ ನಗರದ ರಾಮದೇವ ನಗರದಲ್ಲಿರುವ ನಿರ್ಮಿತಿ ಕೇಂದ್ರ ಕಚೇರಿ ಸಿಬ್ಬಂದಿ ಮಾವಮ್ಮಾ  ಶಿವರುದ್ರಯ್ಯಾ ಮಠಪತಿ
  3. ಬಾಗಲಕೋಟೆಯ ಹೊನಕಟ್ಟಿ ಫಾರ್ಮ್ ಹೌಸ್, ಗೋಪಿನಾಥಸಾ ನಾಗೇಂದ್ರಸಾ ಮಲಜಿ ಸಹೋದರನ ಮಗ ಚೇತನ ರಾಜನಸಾ ಮಲಜಿ ನಿವಾಸ

 

ಎಸಿಬಿ ಅಧಿಕಾರಿಗಳು ಗೋಪಿನಾಥಸಾ ನಾಗೇಂದ್ರಸಾ ಮಾಲಜಿ ಹೊಂದಿರುವ ಆಸ್ತಿಯ ಮಾಹಿತಿ ಇಲ್ಲಿದೆ. 

ವಾಸದ ಮನೆ- ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀನಗರ ಕಾಲನಿ ಉತ್ತರದಲ್ಲಿ ಪ್ಲಾಟ್ ನಂ. 57

ಖಾಲಿ ನಿವೇಶನಗಳು- ಬಾಗಲಕೋಟೆ ನವನಗರದ ಸೆಕ್ಟರ್ 16ರಲ್ಲಿ ಸಿ-01 ಪ್ಲಾಟ್ ಮತ್ತು ಸೆಕ್ಟರ್ ನಂ. 26ರಲ್ಲಿ ಒಂದು ಪ್ಲಾಟ್

ವಿಜಯಪುರ ಮಹಾಲ ಬಾಗಾಯತ ಪ್ರದೇಶದಲ್ಲಿ 3000 ಚ. ಮೀ. ನಿವೇಶನ ಮತ್ತು 6 ಗುಂಟೆ ಮತ್ತು ಒಂದು ಗುಂಟೆಯ ತಲಾ ಒಂದು ನಿವೇಶನ, 2400 ಚ. ಮೀ. ನ ಎರಡು ನಿವೇಶನಗಳು, ಒಂದು ಗುಂಟೆ ನಿವೇಶನ ವಿಜಯಪುರ ಜಿಲ್ಲೆಯ ಹಂಚಿನಾಳ ಗ್ರಾಮದ ವ್ಯಾಪ್ತಿಯಲ್ಲಿ 5 ಗುಂಟೆ ಜಮೀನು,

ಚಿನ್ನಾಭರಣದ ಮಾಹಿತಿ

417.600 ಗ್ರಾಂ ಚಿನ್ನಾಭರಣ, 6.647 ಕೆಜಿ ಬೆಳ್ಳಿಯ ಆಭರಣ

ಫಾರ್ಮ್ ಹೌಸ್ ಮಾಹಿತಿ

ಬಾಗಲಕೋಟೆ ಜಿಲ್ಲೆಯ ಹೊನ್ನಕಟ್ಟಿ ಗ್ರಾಮದ ಬಳಿ ಫಾರ್ಮ್ ಹೌಸ್

ಕೃಷಿ ಜಮೀನಿನ ಮಾಹಿತಿ

ಬಾಗಲಕೋಟೆ ಜಿಲ್ಲೆಯ ಹೊನ್ನಕಟ್ಟಿ, ವಿಜಯಪುರ ತಾಲೂಕಿನ ಹಂಚಿನಾಳ ಮತ್ತು ಗದಗ ತಾಲೂಕಿನ ಬಿಂಕದಕಟ್ಟೆಯಲ್ಲಿ ಒಟ್ಟು 41 ಎಕರೆ 04 ಗುಂಟೆ ಜಮೀನು

 ದ್ವಿಚಕ್ರ ವಾಹನಗಳ ಮಾಹಿತಿ

ಎರಡು ದ್ವಿಚಕ್ರ ವಾಹನಗಳು

ನಾಲ್ಕು ಚಕ್ರ ವಾಹನಗಳ ಮಾಹಿತಿ

ಹುಂಡೈ ಐ-20 ಕಾರು(ಬೇನಾಮಿ)

ಹುಂಡೈ ಕ್ರೆಟಾ ಕಾರು

ನಗದು ಹಣದ ಮಾಹಿತಿ

ರೂ. 308450

ಇನ್ಶುರೆನ್ಸ್ ಬಾಂಡ್ ಗಳು

ರೂ. 22.40 ಲಕ್ಷ

ಬ್ಯಾಂಕ್ ಖಾತೆಯಲ್ಲಿರುವ ಹಣ

ಉಳಿತಾಯ ಹಣ- ರೂ. 26573339

ಎಫ್ ಡಿ ಹಣ- ರೂ. 68114919

ಒಟ್ಟು ರೂ. 94688259

 

ಮ್ಯೂಚುವಲ್ ಫಂಡ್ಸ್

ರೂ. 13164984

ಇನ್ನೂ ಒಂದು ಲಾಕರ್ ಪರಿಶೀಲನೆ ಬಾಕಿ ಇದೆ.

ಈಗ ಬಾಕಿ ಇರುವ ಇನ್ನೋಂದು ಲಾಕರ್ ಓಪನ್ ಮಾಡಿದ ಮೇಲೆ ಈ ಅಸಮತೋಲಿತ ಆಸ್ತಿಯ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Leave a Reply

ಹೊಸ ಪೋಸ್ಟ್‌