ಗುಮ್ಮಟ ನಗರಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ಧಾಳಿ- ಬಾತ್ ರೂಂ‌ ನೋಡಿ ಅಚ್ಚರಿಪಟ್ಟ ಅಧಿಕಾರಿಗಳು

ವಿಜಯಪುರ: ಗುಮ್ಮಟ ನಗರಿ)Gummata Nagari) ವಿಜಯಪುರದಲ್ಲಿ(Vijayapura) ಬೆಳ್ಳಂಬೆಳಿಗ್ಗೆ(Early Morning) ಎಸಿಬಿ(ACB) ಧಾಳಿ(Raid) ನಡೆದಿದೆ. ಭ್ರಷ್ಟ ಅಧಿಕಾರಿ(Corrupt Officer) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು‌ ಧಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ.

ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಡ್ ಡೈರೆಕ್ಟರ್ ಗೋಪಿನಾಥಸಾ ಮಳಜಿ

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ಎಸಿಬಿ ಅಧಿಕಾರಗಳು ಧಾಳಿ ನಡೆಸಿದ್ದಾರೆ.

ಈ ಭ್ರಷ್ಟ ಅಧಿಕಾರಿಯ ಸಂಬಂಧಿಕರು ಬಾಗಲಕೋಟೆಯಲ್ಲಿ ವಾಸವಿದ್ದು, ಅವರ ಎರಡು ಮನೆಗಳ ಮೇಲೀ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.

ಎಸಿಬಿ ಅಧಿಕಾರಿಗಳಿಂದ ಗೋಪಿನಾಥಸಾ ಮಳಜಿ ನಿವಾಸದಲ್ಲಿ ತಪಾಸಣೆ

ವಿಜಯಪುರ ನಿರ್ಮಿತಿ‌ ಕೇಂದ್ರದ ಕಚೇರಿ ಹಾಗೂ ಸ್ಟೋರ್ ನಲ್ಲಿ ಧಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎಸಿಬಿ ತಂಡಗಳು ಪ್ರತ್ಯೇಕವಾಗಿ ಬೇರೆ ಬೇರೆ ಕಡೆಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಗೋಪಿನಾಥಸಾ ಮಲಜಿ ಅವಿಗೆ ಸೇರಿದ ವಿಜಯಪುರ ನಗರದ ಬಂಜಾರಾ ಕ್ರಾಸ್ ಬಳಿ ಇರುವ ಮನೆಯಲ್ಲಿ ಒಂದು ತಂಡ ಪರಿಶೀಲನೆ ನಡೆಸುತ್ತಿದೆ. ವಿಜಯಪುರ ನಗರದ ದರ್ಗಾ ಪ್ರದೇಶದಲ್ಲಿರುವ ಕಚೇರಿ ಹಾಗೂ ಸ್ಟೋರ್ ನಲ್ಲಿ ಪ್ರತ್ಯೇಕ ಅಧಿಕಾರಿಗಳ ತಂಡಗಳು ದಾಖಲಾತಿ ಪರಿಶೀಲನೆಯಲ್ಲಿ ತೊಡಗಿವೆ.

ನಿರ್ಮಿತಿ ಕೇಂದ್ರದ ಅಕೌಟೆಂಟ್ ಮಲ್ಲಮ್ಮ ನಿವಾಸದ ಮೇಲೂ ಎಸಿಬಿ ದಾಳಿ ನಡೆಸಲಾಗಿದೆ. ವಿಜಯಪುರ ನಗರದ ರಾಮದೇವ ನಗರದಲ್ಲಿರು ಮಲ್ಲಮ್ಮ ನಿವಾಸದಲ್ಲಿ ಮತ್ತೋಂದು ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ.

ವಿಜಯಪುರ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ ಹಾಗೂ ಇತರ ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ ಧಾಳಿ ನಡೆಸಿದೆ.

2013ರಲ್ಲಿ ಲೋಕಾಯುಕ್ತದಿಂದಲೂ ಧಾಳಿ

ಈ ಭ್ರಷ್ಟ ಅಧಿಕಾರಿಯ ನಿವಾಸ ಮತ್ತೀತರ ಕಡೆಗಳಲ್ಲಿ 2013ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದ್ದರು. ‌26.09.2013 ರಂದು ನಡೆದ ಲೋಕಾಯುಕ್ತ ದಾಳಿಯಲ್ಲಿ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿತ್ತು.

ಅಂದು ಗೋಪಿನಾಥಸಾ ನಾಗೇಂದ್ರಸಾ ಮಳಜಿ ವಾರ್ಷಿಕ ಆದಾಯ ರೂ. 60 ಲಕ್ಷ ಇದ್ದರೂ ಒಟ್ಟು ಆಸ್ತಿ ರೂ. 1.75 ಕೋ. ಅಕ್ರಮ ಆಸ್ತಿಯನ್ನು ಅಂದರೆ ಶೇ. 293.31 ರಷ್ಟು‌ ಹೆಚ್ಚುವರಿ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಲೆಕ್ಕ‌ ಹಾಕಿದ್ದರು ಎಂದು ಮುಲಗಳು ಬಸವ ನಾಡಿಗೆ ತಿಳಿಸಿವೆ.

2013ರಲ್ಲಿ ಲೋಕಾಯುಕ್ತರು ಧಾಳಿ ನಡೆಸಿದ್ದರೆ, ಈ ಬಾರಿ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಣ, ಚಿನ್ನಾಭರಣ ಪತ್ತೆ ಮತ್ತೀತರ ವಸ್ತುಗಳು ಪತ್ತೆಯಾಗಿವೆ.‌ ಚಿನ್ನದ ಸರ, ನೆಕ್ಲೆಸ್, ಬಳೆ, ಉಂಗುರ, ಕಿವಿ ಓಲೆ, ಬೆಳ್ಳಿ ಆಭರಣ ಪತ್ತೆಯಾಗಿವೆ. ಏಕ‌ ಕಾಲಕ್ಕೆ ಐದು ಕಡೆ ಪ್ರತ್ಯೇಕ‌ ತಂಡಗಳಲ್ಲಿ ಧಾಳಿ ನಡೆಸಿರುವ ಅಧಿಕಾರಿಗಳು ತಪಾಸಣೆ ಮುಂದುವರೆಸಿದ್ದಾರೆ.


ಗೋಪಿನಾಥಸಾ ಮಳಜಿ ಅವರ ಕಚೇರಿ, ಮನೆ, ಸಂಬಂಧಿಕರ ಮನೆ, ಕಚೇರಿ ಸಿಬ್ಬಂದಿಗಳ ಮನೆಯ ಮೇಲೂ ರೇಡ್ ಮಾಡಿದ್ದಾರೆ.

ಈ ಅಧಿಕಾರಿ ಅಕ್ರಮವಾಗಿ ಕೋಟಿ ಕುಳವಾಗಿದ್ದು, ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ವಿರುದ್ಧ ರೂ. 2 ಕೋ. ಗೂ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಎಸಿಬಿಗೆ ದೂರು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ರೇಡ್ ನಡೆಸಿದ್ದಾರೆ. ಈ ಅಧಿಕಾರಿ ಬಳಿ ರೂ. 4 ಕೋ. ವರೆಗೂ ಅಕ್ರಮ ಆಸ್ತಿ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಈಗಾಗಲೇ ಬಾಗಲಕೋಟೆಯಲ್ಲಿ ಅಕ್ರಮವಾಗಿ ಖರೀದಿಸಿರುವ ಎರಡು ನಿವೇಷನಗಳನ್ನು ಪತ್ತೆ ಮಾಡಿದ್ದಾರೆ.

ಬಾತರೂಂ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

ವಿಜಯಪುರ ನಗರದ ಬಂಜಾರಾ‌ ಕ್ರಾಸ ಬಳಿ ಇರುವ ಗೋಪಿನಾಥಸಾ ಮಲಜಿ ಮನೆಯ ಮೇಲೆ ಧಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಲ್ಲಿ ಬಾತರೂಂ ಕಂಡು ಬೆಚ್ಚಿ ಬಿದ್ದಿದ್ದಾರೆ. ಬಂಗಲೆಯಂತಿರುವ ಲಕ್ಷ ಮೌಲ್ಯದ ಐಷಾರಾಮಿ ಬಾತ್ ರೂಂ ಅಧಿಕಾರಿಗಳ ಗಮನ ಸೆಳೆದಿದೆ.

ಜಾಕೊಜಿ ಸ್ಟೀಮ್ ಬಾತ್ ರೂಂ ನ್ನು ನಿರ್ಮಿತಿ ಕೇಂದ್ರದ ಪ್ರೋಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿರ್ಮಿಸಿದ್ದಾರೆ. ಸುಮಾರು ರೂ. 3 ರಿಂದ 5 ಲಕ್ಷದ ವರೆಗೆ ಬೆಲೆ ಬಾಳುವ ಜಾಕೊಜಿ ಸ್ಟಿಮ್ ಬಾತ್ ರೂಂ ಇದಾಗಿದೆ. ಹೆಸರಾಂತ ಕಂಪನಿಯ ಐಷಾರಾಮಿ ಜಾಕೊಜಿ ಬಾತ್ ರೂಂ ನಿರ್ಮಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕಾರಿ ಎಂಜಿನಿಯರ್ ಗಳನ್ನು ಕರೆಯಿಸಿ ಅದರ ಮೌಲ್ಯಮಾಪನ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Leave a Reply

ಹೊಸ ಪೋಸ್ಟ್‌