ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ(BLDEA) ವಚನಪಿತಾಮಹ(Vachana Pitamaha) ಡಾ.ಫ.ಗು.ಹಳಕಟ್ಟಿ (Dr. P. G. Halakatti) ಎಂಜನಿಯರಿಂಗ್(Engineering) ಕಾಲೇಜಿನ(College) ನಾಲ್ಕು ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)(VTU) 2020-21 ನೇ ವರ್ಷದ ಎಂಜನಿಯರಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಿ.ಇ ಆರ್ಕಿಟೆಕ್ಟರ್ ವಿಭಾಗದಲ್ಲಿ ಕೆ. ಸಾಯಿ ಹಸಿತಾ ವಿವಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಎಂ.ಟೆಕ್ ಮೆಕ್ಯಾನಿಕಲ್ ಮಷಿನ್ ಡಿಸೈನ್ (ಎಂ.ಎಂ.ಡಿ) ಎಂಜನಿಯರಿಂಗ್‍ನಲ್ಲಿ ಮಳೆಪ್ಪ ಗರಸಂಗಿ ಕೂಡ ವಿವಿಗೆ ಮೊದಲ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅನುಷಾ ಕುಚನೂರ ಬಿ.ಇ ಆರ್ಕಿಟೆಕ್ಟರ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 10 ನೇ ರ್ಯಾಂಕ್ ಮತ್ತು ಮೊಹಮ್ಮದ ಅಧೋನಿ ಎಂ.ಟೆಕ್ ಮೆಕ್ಯಾನಿಕಲ್ ಮಷಿನ್ ಡಿಸೈನ್ (ಎಂ.ಎಂ.ಡಿ) ಎಂಜನಿಯರಿಂಗ್‍ನಲ್ಲಿ ವಿಶ್ವವಿದ್ಯಾಲಯಕ್ಕೆ ಮೂರನೆಯ ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಇದೇ ವೇಳೆ ಉಪನ್ಯಾಸಕರಾದ ನವೀನ್ ದೇಸಾಯಿ, ಅರವಿಂದ ಕಟಗೊಂಡ, ರವಿ ಹೊಸೂರು ಅವರಿಗೆ ಪಿ.ಎಚ್.ಡಿ ಪದವಿ ದೊರೆತಿದೆ.
ಮಾರ್ಚ್ 10 ರಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ್ ವಿಶ್ವವಿದ್ಯಾಲಯದ 21 ನೇ ಘಟಿಕೋತ್ಸವದಲ್ಲಿ ರ್ಯಾಂಕ್ ವಿಜೇತರಿಗೆ ಪದವಿ ಮತ್ತು ಸಂಶೋಧನೆ ಪೂರ್ಣಗೊಳಿಸಿದ ಉಪನ್ಯಾಸಕರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು ಎಂದು ಪ್ರಚಾರ್ಯ ಡಾ. ಜಿ. ವಿ. ಪಾಟೀಲ ತಿಳಿಸಿದ್ದಾರೆ.
ಉತ್ತಮ ಸಾಧನೆಯ ಮೂಲಕ ವಿಜಯಪುರ ಜಿಲ್ಲೆ ಮತ್ತು ಕಾಲೇಜಿಗೆ ಕೀರ್ತಿ ತಂದ ಸಾಧಕರನ್ನು ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.