ಬಸವ ನಾಡಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ವಿಜಯಪುರ: ಬಸವ(Basava) ನಾಡು(Nadu) ವಿಜಯಪುರ(Vijayapura) ನಗರದಲ್ಲಿ(City) ಶ್ರೀ ಜಗದ್ಗುರು(Jagadguru) ರೇಣುಕಾಚಾರ್ಯ ಜಯಂತಿ(Renukacharya Jayanti) ಯುಗಮಾನೋತ್ಸವ ಕಾರ್ಯಕ್ರಮ ನಡೆಯಿತು. 

ಶ್ರೀ ಸಿದ್ದೇಶ್ವರ ದೇವಸ್ಥಾನದ ಬಳಿ ಜಗದ್ಗುರು ಪಂಚಾಚಾರ್ಯರ ಜಯಂತಿ, ಯುಗಮಾನೋತ್ಸವ ನಡೆಯಿತು.

ವಿಜಯಪುರ ನಗದ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ  ಸೇವಾ ಸಮಿತಿಯು ಹಾಗೂ ದಾನಮ್ಮ ದೇವಿ ಪ್ರಸಾದ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ 8ನೇ ವರ್ಷದ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ವೈದ್ಯಕೀಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಶ್ರೀ. ಜಗದ್ಗುರು ರೇಣುಕಾಚಾರ್ಯ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

 

ಆಲಮೇಲದ ಶ್ರೀ. ಚಂದ್ರಶೇಕರ ಶಿವಾಚಾರ್ಯ ಸ್ವಾಮೀಜಿ, ತಡವಲಗಾ ಶ್ರೀ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರ ಶ್ರೀ. ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಮುಳವಾಡ ಶ್ರೀ ಶಿವಯೋಗಸ್ವಾಮಿ ದೇವರುಸ ಶ್ರೀ. ಸಿದ್ದಲಿಂಗ ಶಿವಾಚಾರ್ಯ ಮುಳವಾಡ ಹಿರೊಳ್ಳಿ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಗುರು ಗಚ್ಚಿನಮಠ, ಸುಧೀರ ಚಿಂಚಲಿ, ಸಮಿತಿಯ ಅಧ್ಯಕ್ಷ ಚಿದಾನಂದ, ಸೋಮು ಅಂಗಡಿ, ಪ್ರೇಮಾನಂದ ಹತ್ತಿ, ಸಚಿನ ಬೂದಿಹಾಳಮಠ, ಅಭಿಷೇಕ ಪಾಟೀಲ, ಬಸು ಮೆಡ್ಲಿ, ರವಿ ವಾಲಿ, ಪ್ರಸಾದ, ರಾಜು ಶಟಗಾರ, ಪುನೀತ, ಮುತ್ತು ಮಾಹಾಲಿಂಗಪೂರ, ಸಚಿನ ಮಠಪತಿ, ಅಜಯ, ವಿಶ್ವನಾಥ, ನಂದೀಶ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ್ಲಲಿ ಭಕ್ತರಿಗೆ ರುದ್ರಾಕ್ಷಿ ಧಾರಣೆ, ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪುಟ್ಟರಾಜ ಗವಾಯಿಗಳ ಗಾನಬನ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಜಗದೀಶ ಹಿರೇಮಠ ಸ್ವಾಗತಿಸಿದರು. ದತ್ತಾ ಹೊಸಮಠ ವಂದಿಸಿದರು.  ಸಿದ್ದು ಹಿರೇಮಠ ನಿರೂಪಿಸಿದರು.

 

Leave a Reply

ಹೊಸ ಪೋಸ್ಟ್‌